Advertisement

ಕನಿಷ್ಠ 4 ಬ್ಯಾಂಕ್ ‌ಖಾಸಗೀಕರಣ?

10:54 AM Jul 16, 2020 | mahesh |

ನವದೆಹಲಿ: ಕೋವಿಡ್ ಕಾರಣಕ್ಕೆ ಖಾಸಗೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಸದ್ಯ ನಿಲ್ಲಿಸಿತ್ತು. ಇದೀಗ ಮತ್ತೆ ಅದಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ.
ಇದುವರೆಗೆ ವಿಲೀನವಾಗದಿರುವ ಕನಿಷ್ಠ 4 ಸರ್ಕಾರಿ ಬ್ಯಾಂಕ್‌ಗಳು, ವಿಮಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಲೆಕ್ಕಾಚಾರ ನಡೆಯುತ್ತಿದೆ ಎಂದು
ಆಂಗ್ಲಪತ್ರಿಕೆ ಯೊಂದು ತಿಳಿಸಿದೆ. ಅಷ್ಟು ಮಾತ್ರವಲ್ಲ ಬಾಹ್ಯಾಕಾಶ, ರಕ್ಷಣೆ ಸೇರಿದಂತೆ ಇನ್ನಿತರ ಕೆಲವು ವಲಯಗಳನ್ನೂ ಖಾಸಗೀಕರಣಗೊಳಿಸಲಾಗು ತ್ತದೆ.
ಈ ಕುರಿತ ಕರಡನ್ನು ಸಚಿವಾಲಯಗಳಿಗೆ ಕಳುಹಿಸಲಾಗಿದೆ. ಕೆಲವು ವಲಯಗಳಲ್ಲಿ ಸರ್ಕಾರೀ ಕಂಪನಿಗಳಿರುವುದರಿಂದ ಮಾರುಕಟ್ಟೆ ಅಸಮತೋಲನ ಉಂಟಾಗಿದೆ. ಅಂತಹ ಕಡೆ ಪರಿಶೀಲನೆ ನಡೆಸಿ ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಏಕಸ್ವಾಮ್ಯ ಉಂಟಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಬ್ಯಾಂಕ್‌ಗಳ ಪೈಕಿ, ಪಂಜಾಬ್‌ ಆ್ಯಂಡ್‌ ಸಿಂದ್‌ ಬ್ಯಾಂಕ್‌, ಐಒಬಿ, ಬ್ಯಾಂಕ್‌ ಆಫ್ ಮಹಾರಾಷ್ಟ್ರ  ಖಾಸಗೀಕರಣ ಗೊಳ್ಳಬಹುದು. ವಿಮಾ ಕಂಪನಿಗಳ ಪೈಕಿ, ನ್ಯಾಷನಲ್‌ ಇನ್ಶೂರೆನ್ಸ್‌ ಕಂಪನಿ, ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌, ಓರಿಯೆಂಟಲ್‌ ಇನ್ಶೂರೆನ್ಸ್‌ ಕಂಪನಿಗಳು ಖಾಸಗಿ ತೆಕ್ಕೆಗೆ ಜಾರಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next