Advertisement

Sudan; ಸೇನಾ ಸಂಘರ್ಷ; 27 ಮಂದಿ ಮೃತ್ಯು; 170ಕ್ಕೂ ಹೆಚ್ಚು ಮಂದಿಗೆ ಗಾಯ

09:46 AM Apr 16, 2023 | Team Udayavani |

ಖಾರ್ಟೂಮ್ : ಆಫ್ರಿಕನ್ ರಾಷ್ಟ್ರ ಸುಡಾನ್ ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲಿ ರವಿವಾರ ಮುಂಜಾನೆ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ. 170ಕ್ಕೂ ಹೆಚ್ಚು ಮಂದಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಖಾರ್ಟೂಮ್ ನಲ್ಲಿರುವ ಅಧ್ಯಕ್ಷರ ನಿವಾಸ,ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳನ್ನು ಅರೆಸೇನಾ ಪಡೆ ವಶದಲ್ಲಿವೆ ಎಂದು ಘೋಷಿಸುತ್ತಿದ್ದಂತೆ ಸುಡಾನ್‌ ಸೇನೆ ಪಡೆ ದಾಳಿ ನಡೆಸಿದೆ. ಹೀಗಾಗಿ ಬಾಂಬ್‌ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಎರಡು ಸೇನಾಪಡೆ ದಾಳಿ ಮಾಡಿದ್ದರಿಂದ ಈ ಘರ್ಷಣೆ ನಡೆದಿದೆ.

ಖಾರ್ಟೂಮ್ ವಿಮಾನ ನಿಲ್ದಾಣದಲ್ಲಿ ಇಬ್ಬರು ಸೇರಿದಂತೆ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಮತ್ತು ಉಳಿದವರು ಸುಡಾನ್‌ನ ಇತರ ಭಾಗಗಳಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲದೇ 170ಕ್ಕೂ ಹೆಚ್ಚಿನ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.


ಸುಡಾನ್ ಸೇನೆಯ ನಾಯಕ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೈನಿಕ ಕಮಾಂಡರ್ ಮೊಹಮ್ಮದ್ ಹಮ್ದಾನ್ ಡಾಗ್ಲೋ ನಡುವೆ ವಾರಗಳ ಹಿಂದೆ ಭಾರಿ ಉದ್ವಿಗ್ನತೆ ಸ್ಥಿತಿಯನ್ನು ಉಂಟಾಗಿತ್ತು. ಆದರೆ ಇದೀಗ ಈ ಉದ್ವಿಗ್ನತೆ ಹಿಂಸಾಚಾರವಾಗಿ ಸ್ಫೋಟಗೊಂಡಿದೆ.


ಸುಡಾನ್​​ನಲ್ಲಿ ನಡೆಯುತ್ತಿರುವ ಈ ದಾಳಿಯಿಂದ ಎಲ್ಲಾ ಭಾರತೀಯರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು. ಯಾರು ಮನೆಯಿಂದ ಹೊರಗೆ ಬರಬೇಡಿ, ಮನೆಯೊಳಗೆ ಇರಿ. ಯಾರು ಭಯಪಡುವ ಅವಶ್ಯಕತೆ ಇಲ್ಲ. ದಯವಿಟ್ಟು ಶಾಂತವಾಗಿರಿ, ಸೂಚನೆ ಬರುವವರೆಗೆ ಯಾರು ಮನೆಯಿಂದ ಹೊರಗಡೆ ಬರಬೇಡಿ ಎಂದು ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next