Advertisement

ಟೆಕ್ಸಾಸ್‌ ಚರ್ಚಿನಲ್ಲಿ ಗುಂಡೆಸೆತ : 27 ಸಾವು, 20 ಮಂದಿಗೆ ಗಾಯ

11:24 AM Nov 06, 2017 | Team Udayavani |

ಟೆಕ್ಸಾಸ್‌ : ಅಮೆರಿದ ಟೆಕ್ಸಾಸ್‌ನಲ್ಲಿ ನಿನ್ನೆ ಭಾನುವಾರ ಬ್ಯಾಪ್ಟಿಸ್ಟ್‌ ಚಚ್‌ನ ಒಳಗೆ ಹಂತಕನೋರ್ವ ಯದ್ದಾತದ್ವಾ ಗುಂಡು ಹಾರಿಸಿ  27 ಮಂದಿಯನ್ನು ಬಲಿತೆಗೆದುಕೊಂಡ ದಾರುಣ ಘಟನೆ ನಡೆದಿದೆ. ಮೃತದಲ್ಲಿ ಪ್ಯಾಸ್ಟರ್‌ ಓರ್ವರ 14ರ ಹರೆಯದ ಪುತ್ರಿ ಕೂಡ ಸೇರಿದ್ದಾಳೆ.

Advertisement

ಸುಮಾರು 20 ಮಂದಿ ಗಾಯಗೊಂಡ ಈ ಘಟನೆಯು ವಿಲ್ಸನ್‌ ಕೌಂಟಿಯ ಸುದರ್‌ಲ್ಯಾಂಡ್‌ ಸ್ಪ್ರಿಂಗ್ಸ್‌ ನ ಫ‌ಸ್ಟ್‌ ಬ್ಯಾಪ್ಟಿಸ್ಟ್‌ ಚರ್ಚ್‌ನಲ್ಲಿ ನಡೆಯಿತು. ಶಸ್ತ್ರ ಸಜ್ಜಿತನಾಗಿ ಬಂದಿದ್ದ ವ್ಯಕ್ತಿಯೋರ್ವ ಫ‌ುಲ್‌ ಗೇರ್‌ನಲ್ಲಿ ಚರ್ಚ್‌ ಪ್ರವೇಶಿಸಿ ಅಲ್ಲಿದ್ದ  ಪ್ಯಾರಿಶನರ್‌ ಗಳ ಮೇಲೆ ಗುಂಡಿನ ಮಳೆಗರೆದ. 

ಹೀಗೆ ಗುಂಡಿನ ಸುರಿಮಳೆಗೈದು 27 ಜನರನ್ನು ಬಲಿಪಡೆದ ಹಂತಕರನನ್ನು ಅನಂತರ ಗುಂಡಿಕ್ಕಿ ಸಾಯಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ಪೊಲೀಸರ ಮಾಹಿತಿಯನ್ನು ಉಲ್ಲೇಖೀಸಿ ವರದಿ ಮಾಡಿವೆ. 

ಶೂಟರ್‌ ನನ್ನು ಪೊಲೀಸರೇ ಕೊಂದರೇ ಆಥವಾ ಆತನೇ ತನ್ನನ್ನು ತಾನು ಗುಂಡಿಕ್ಕಿ ಕೊಂಡನೇ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ.

27 ಅಮಯಾಕರು ಮೃತ ಪಟ್ಟಿರುವುದನ್ನು ವಿಲ್ಸನ್‌ ಕೌಂಟಿ ಕಮಿಷನರ್‌ ಆಲ್‌ಬರ್ಟ್‌ ಗಾಮೆಜ್‌ ಜೂನಿಯರ್‌ ದೃಢಪಡಿಸಿದ್ದಾರೆ.

Advertisement

ಮೃತರಲ್ಲಿ ಒಬ್ಟಾಕೆ ಚರ್ಚಿನ ಪ್ಯಾಸ್ಟರ್‌ ಫ್ರಾಂಕ್‌ ಪೊಮೆರಾಯ್‌ ಅವರ ಪುತ್ತಿರ ಆನಾಬೆಲ್ಲಾ ಎಂದು ಗೊತ್ತಾಗಿದೆ. 

20 ಮಂದಿ ಗಾಯಾಳುಗಳಲ್ಲಿ 10 ಮಂದಿಯನ್ನು ಸಮೀಪದ ಟ್ರೋಮಾ ಆಸ್ಪತ್ರೆಗೆ ಒಯ್ಯಲಾಗಿದೆ. ಈ ಪೈಕಿ ಅತ್ಯಂತ ಗಂಭೀರ ಸ್ಥಿತಿಯಲ್ಲಿರುವ ಒಬ್ಟಾತನನ್ನು ಸ್ಯಾನ್‌ ಅಂಟೋನಿಯೋ ಮಿಲಿಟರ್‌ ಆಸ್ಪತ್ರೆಗೆ ಒಯ್ಯಲಾಗಿದೆ. ಇತರರನ್ನು ಸಮೀಪದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next