Advertisement

ಕಿಮ್ಸ್‌ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆಗೆ ತಜ್ಞರ ತಂಡ

12:27 PM Nov 03, 2019 | Team Udayavani |

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ತಜ್ಞರ ತಂಡ ರಚಿಸಲಾಗುವುದು. ಇದಕ್ಕೆ ವೈದ್ಯರ ಸಹಕಾರ  ಅತ್ಯವಶ್ಯವಾಗಿದೆ ಎಂದು ಡಿಸಿಎಂ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

Advertisement

ಕಿಮ್ಸ್‌ ಆಸ್ಪತ್ರೆಯ ಸಿಲ್ವರ್‌ ಜ್ಯುಬಿಲಿ ಹಾಲ್‌ ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಕ ಭಾಗದ ಜನರು ತಮ್ಮ ಆರೋಗ್ಯ ಸಮಸ್ಯೆ ಬಗೆಹರಿಸಿಕೊಳ್ಳಲು ಕಿಮ್ಸ್‌ಗೆ ಬರುತ್ತಾರೆ. ಇಲ್ಲಿ ಹೆಚ್ಚು ಸುಧಾರಣೆ ತರಲು ಎಲ್ಲ ಬಗೆಯ ಸಹಕಾರ, ಪ್ರೋತ್ಸಾಹ ನೀಡುವೆ. ಕಿಮ್ಸ್‌ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು. ಏಮ್‌ ನಂತೆ ಕಿಮ್ಸ್‌ನಲ್ಲೂ ಗುಣಮಟ್ಟ ಹೆಚ್ಚಿಸುವ ಮೂಲಕ ರಾಜ್ಯದಲ್ಲೇ ಮಾದರಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಕ್ಯಾನ್ಸರ್‌ ಆಸ್ಪತ್ರೆ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ತರಲು ಪ್ರಯತ್ನಿಸುವೆ. ವೈದ್ಯರ ಸಹಕಾರ, ಸಹಭಾಗಿತ್ವ ಇಲ್ಲದಿದ್ದರೆ ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಮಾಡುವುದು ಕಷ್ಟ ಎಂದರು.

ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂತರತಾನಿ, ಶಾಸಕ ಅರವಿಂದ ಬೆಲ್ಲದ, ವೈದ್ಯಕೀಯ ಅಧೀಕ್ಷಕ ಡಾ| ಅರುಣಕುಮಾರ ಸಿ., ಮುಖ್ಯ ಆಡಳಿತಾಧಿಕಾರಿ ರಾಜೇಶ್ವರಿ ಇದ್ದರು. ಸಚಿವರು ಸುಪರ್‌ ಸ್ಪೆಶಾಲಿಟಿ ಆಸ್ಪತ್ರೆಗೆಭೇಟಿಕೊಟ್ಟು ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next