Advertisement
ಅಫ್ಘಾನಿಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಜಿ-20 ರಾಷ್ಟ್ರಗಳ ಒಕ್ಕೂಟ ಆಯೋಜಿಸಿದ್ದ ವಚ್ಯುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಆ ದೇಶದಲ್ಲಿ ಮಾನವೀಯ ಮತ್ತು ಬದುಕಲು ಅಗತ್ಯವಾಗಿರುವ ಯೋಜನೆಗಳು ಅತ್ಯಂತ ತುರ್ತಾಗಿ ಬೇಕಾಗಿವೆ ಎಂದು ಹೇಳಿದ್ದಾರೆ.
Related Articles
Advertisement
ತಡೆ ಅಗತ್ಯ: ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಮಾದಕ ವಸ್ತುಗಳ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ತಡೆಯೂ ಅಗತ್ಯವಾಗಿದೆ ಎಂದರು ಪ್ರಧಾನಿ ಮೋದಿ.
ಎಲ್ಲರನ್ನು ಒಳಗೊಂಡ ಸರಕಾರ: ಸದ್ಯ ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ಥಾನದಲ್ಲಿ ಮಹಿಳೆಯರು, ಅಲ್ಪಸಂಖ್ಯಾಕರು ಸೇರಿದಂತೆ ಎಲ್ಲರನ್ನೂ ಒಳಗೊಂಡ ಸರಕಾರ ರಚನೆಯಾಗಬೇಕು. ಆಗ ಮಾತ್ರ ಅಲ್ಲಿ ಸುಸ್ಥಿರವಾಗಿರುವ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಉಪವಾಸದಿಂದ ಕಂಗೆಡುತ್ತಿರುವ ಅಫ್ಘಾನ್‌ನ ಪ್ರತಿಯೊಬ್ಬ ನಾಗರಿಕನಿಗಾಗಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಹೃದಯ ಮಿಡಿಯುತ್ತಿದೆ. ಹೀಗಾಗಿ, ಅ.30ರಂದು ಭಾರತದ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕೈಗೊಂಡ ನಿರ್ಣಯ ಅನುಷ್ಠಾನವಾಗಬೇಕು ಎಂದಿದ್ದಾರೆ.
ಇಟಲಿ ಅಧ್ಯಕ್ಷತೆಯಲ್ಲಿ ಜಿ-20 ರಾಷ್ಟ್ರಗಳ ಒಕ್ಕೂಟ ಅಫ್ಘಾನಿಸ್ಥಾನದಲ್ಲಿ ಉತ್ತಮ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಬೇಕು ಎಂದರು. ಭಾರತ ಮತ್ತು ಅಫ್ಘಾನಿಸ್ಥಾನದ ನಡುವೆ ಐತಿಹಾಸಿಕ ಕಾಲದಿಂದಲೂ ಅತ್ಯುತ್ತಮ ಬಾಂಧವ್ಯ ಇತ್ತು ಎಂಬ ಅಂಶವನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.