ನವದೆಹಲಿ: ಮುಂಬೈ 26/11 ದಾಳಿ ಪ್ರಕರಣದ ಮಾಸ್ಟರ್ ಮೈಂಡ್, ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್ ನ ಗಡಿಪಾರು ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಪಾಕಿಸ್ತಾನ ನಿರಾಕರಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಬಾತ್ ರೂಮ್ ನಲ್ಲಿ ಬಳಸುವ 100 ರೂ. ಚಪ್ಪಲಿಗೆ 8,990 ರೂ ಬೆಲೆ: ನೆಟ್ಟಿಗರಿಂದ ಟ್ರೋಲ್
ಮಂಗಳವಾರ (ಅಕ್ಟೋಬರ್ 18) ದೆಹಲಿಯಲ್ಲಿ ನಡೆದ ಇಂಟರ್ ಪೋಲ್ ನ 90ನೇ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ ಮುಖ್ಯಸ್ಥ ಮೊಹ್ಸಿನ್ ಬಟ್ ಸೇರಿದಂತೆ ಇಬ್ಬರು ಸದಸ್ಯರ ನಿಯೋಗ ಭಾಗವಹಿಸಿತ್ತು.
ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರರಾದ ದಾವೂದ್ ಇಬ್ರಾಹಿಂ ಮತ್ತು ಹಫೀಜ್ ಸಯೀದ್ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿರುವುದಾಗಿ ವರದಿ ತಿಳಿಸಿದೆ. ಅಷ್ಟೇ ಅಲ್ಲದೇ ಈ ಸಂದರ್ಭದಲ್ಲಿ ದಾವೂದ್ ಮತ್ತು ಹಫೀಜ್ ನನ್ನು ಭಾರತಕ್ಕೆ ಹಸ್ತಾಂತರಿಸುತ್ತೀರಾ ಎಂಬ ಪ್ರಶ್ನೆಗೆ ಮೊಹ್ಸಿನ್ ಮೌನವಾಗಿದ್ದರು ಎಂದು ವರದಿ ವಿವರಿಸಿದೆ.
ರಾಜಧಾನಿ ದೆಹಲಿಯಲ್ಲಿ ಅಕ್ಟೋಬರ್ 18ರಿಂದ 21ರವರೆಗೆ ನಡೆಯಲಿರುವ ಇಂಟರ್ ಪೋಲ್ ನ 90ನೇ ಸಾಮಾನ್ಯ ಸಭೆಯಲ್ಲಿ ಪಾಕ್ ನ ದ್ವಿಸದಸ್ಯ ನಿಯೋಗ ಭಾಗಿಯಾಗಿತ್ತು. ಈ ಸಭೆಯಲ್ಲಿ ಸಚಿವರು, ಪೊಲೀಸ್ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ವಿವಿಧ ದೇಶಗಳ 195 ಇಂಟರ್ ಪೋಲ್ ಸದಸ್ಯರು ಭಾಗಿಯಾಗಿದ್ದರು.