Advertisement

ಚುನಾವಣೆಗೆ ಖರ್ಚಾಗಿದ್ದು 60 ಸಾವಿರ ಕೋಟಿ ರೂ.!

11:08 PM Jun 04, 2019 | Team Udayavani |

ನವದೆಹಲಿ: ಈ ಬಾರಿಯ ಲೋಕಸಭೆಗೆ ವಿವಿಧ ರಾಜಕೀಯ ಪಕ್ಷಗಳು ಸೇರಿ ಖರ್ಚು ಮಾಡಿರುವ ಒಟ್ಟು ಹಣ 55,000ದಿಂದ 60,000 ಕೋಟಿ ರೂ.ಗಳಾಗಿದೆ ಎಂದು ದೆಹಲಿಯಲ್ಲಿರುವ ಲಾಭದ ಉದ್ದೇಶವಿರದ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ (ಸಿಎಂಎಸ್‌) ಎಂಬ ಸಂಸ್ಥೆ ನಡೆಸಿರುವ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಭಾರತೀಯ ಚುನಾವಣಾ ಇತಿಹಾಸದಲ್ಲೇ ಅತಿ ದುಬಾರಿ ಎಂದೆನಿಸಿರುವ ಈ ಚುನಾವಣೆಯಲ್ಲಿ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಸರಾಸರಿ 100 ಕೋಟಿ ರೂ. ವ್ಯಯಿಸಲಾಗಿದ್ದರೆ, ಪ್ರತಿ ಮತವೊಂದಕ್ಕೆ 700 ರೂ. ವ್ಯಯಿಸಲಾಗಿದೆ. 2014ರ ಚುನಾವಣೆಯಲ್ಲಿ 30,000 ಕೋಟಿ ರೂ. ಖರ್ಚಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಅದರ ದುಪ್ಪಟ್ಟು ಹಣ ಖರ್ಚಾಗಿದೆ ಎಂದು ಸಂಸ್ಥೆ ಹೇಳಿದೆ. ಒಟ್ಟು ವೆಚ್ಚದ ಶೇ. 45ರಷ್ಟು ಹಣವನ್ನು ಬಿಜೆಪಿಯೇ ಖರ್ಚು ಮಾಡಿದ್ದರೆ, ಕಾಂಗ್ರೆಸ್‌ ಶೇ. 19ರಿಂದ 20ರಷ್ಟು ಹಣ ಖರ್ಚು ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next