Advertisement

ಮಹಾತಿರ್‌ ಮಲೇಷ್ಯಾ ಪಿಎಂ

09:24 AM May 11, 2018 | Karthik A |

ಕೌಲಾಲಂಪುರ: ಮಲೇಷ್ಯಾವನ್ನು 22 ವರ್ಷ ಆಳಿದ್ದ ಮಹಾತಿರ್‌ ಮೊಹಮ್ಮದ್‌ (92) ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ಜಗತ್ತಿನ ಹಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬುಧವಾರ ನಡೆದಿದ್ದ ಚುನಾವಣೆಯಲ್ಲಿ ಹಾಲಿ ಪ್ರಧಾನಿ ನಜೀಬ್‌ ರಜಾಕ್‌ ಸೋತಿದ್ದಾರೆ. ಈ ಮೂಲಕ 60 ವರ್ಷಗಳವರೆಗೆ ಆಡಳಿತ ನಡೆಸಿದ್ದ, ನ್ಯಾಷನಲ್‌ ಫ್ರಂಟ್‌ ಮೈತ್ರಿಕೂಟ ಭಾರಿ ಸೋಲು ಕಂಡಿದೆ. ಪ್ಯಾಕ್ಟ್ ಆಫ್ ಹೋಪ್‌ ಎಂಬ ಮೈತ್ರಿಕೂಟವನ್ನು ಮಹತಿರ್‌ ರಚಿಸಿಕೊಂಡಿದ್ದು, ತಾನು ಪ್ರಧಾನಿಯಾಗಿದ್ದಾಗ ಹತ್ತಿಕ್ಕಿದ ಪಕ್ಷಗಳನ್ನೇ ಅವರು ಒಗ್ಗೂಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next