ಪಶ್ಚಿಮ ಬಂಗಾಲ : ವಿಶ್ವದ ಅತ್ಯಂತ ಹಿರಿಯ ಹುಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ರಾಜ’ ಹುಲಿ ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ಜಲ್ದಪರದಲ್ಲಿರುವ ಖೈರಿಬರಿ ಹುಲಿ ರಕ್ಷಣಾ ಕೇಂದ್ರದಲ್ಲಿ ಸಾವನ್ನಪ್ಪಿದೆ.
ಕಳೆದ ವರ್ಷ 25 ವರ್ಷವರ್ಷಾಚರಣೆಯನ್ನು ಸಂಭ್ರಮದಿಂದ ಅರಣ್ಯ ಇಲಾಖೆ ಆಚರಿಸಿತ್ತು, ಸೋಮವಾರ ಮುಂಜಾನೆ ಪಶ್ಚಿಮ ಬಂಗಾಳದ ಹುಲಿ ರಕ್ಷಣಾ ಕೇಂದ್ರದಲ್ಲಿ ಸಾವನ್ನಪ್ಪಿದೆ.
2008 ಆಗಸ್ಟ್ ನಲ್ಲಿ ಹುಲಿಗಳ ವಾಸಸ್ಥಾನವಾದ ಸುಂದರಬನ್ ನಲ್ಲಿ ಮೊಸಳೆ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡಿತ್ತು ಈ ವೇಳೆ ಇದನ್ನು ರಕ್ಷಣಾ ಕೇಂದ್ರಕ್ಕೆ ತಂದು ಆರೈಕೆ ಮಾಡಲಾಗಿತ್ತು.
ಅಂದಿನಿಂದ ರಾಜ ಹುಲಿ ರಕ್ಷಣಾ ಕೇಂದ್ರದ ಒಂದು ಭಾಗವಾಗಿತ್ತು.
Related Articles
ಕಳೆದ ಕೆಲವು ತಿಂಗಳುಗಳಿಂದ ರಾಜ ಹುಲಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಸೋಮವಾರ ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿ ಹೇಳಿದ್ದಾರೆ . ರಾಜ ಹುಲಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಖೈರಿಬಲಿ ಹುಲಿ ರಕ್ಷಣಾ ಕೇಂದ್ರಕ್ಕೆ ಆಗಮಿಸಿದ ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.
ಹುಲಿಗಳು ಸಹಜ ಆವಾಸಸ್ಥಾನದಲ್ಲಿ ಸು.12-15 ವರ್ಷ ಬದುಕಿದ ದಾಖಲೆ ಹೊಂದಿದ್ದರೆ, ಪುನರ್ವಸತಿ ಕೇಂದ್ರ ಅಥವಾ ಮೃಗಾಲಯದಲ್ಲಿ 20 ವರ್ಷಕ್ಕೂ ಅಧಿಕ ಸಮಯ ಬದುಕಿದ ದಾಖಲೆಗಳಿವೆ.