Advertisement

14ರ ಪೋರನಿಂದ ವಿಮಾನ ಚಾಲನೆ

08:55 AM Sep 08, 2017 | Team Udayavani |

ದುಬೈ: ಸಂಯುಕ್ತ ಅರಬ್‌ ಒಕ್ಕೂಟ (ಯುಎಇ)ದಲ್ಲಿರುವ ಕೇವಲ 14 ವರ್ಷ ವಯಸ್ಸಿನ ಭಾರತ ಮೂಲದ ಬಾಲಕನೊಬ್ಬ ಇದೀಗ ಅತಿ ಕಿರಿಯ ವಯಸ್ಸಿನಲ್ಲೇ ಸಿಂಗಲ್‌ ಎಂಜಿನ್‌ ವಿಮಾನ ಚಾಲನೆ ಮಾಡಿ ಸಾಧನೆಗೈದಿದ್ದಾನೆ.

Advertisement

ಅಲ್ಲದೇ ಈ ಸಾಧನೆ ಮಾಡಿರುವ ಅತಿ ಕಿರಿಯ ಬಾಲಕ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ. ಈ ಬಾಲಕನ ಹೆಸರು ಮನ್ಸೂರ್‌ ಅನಿಸ್‌. ಶಾರ್ಜಾದ ದಿಲ್ಲಿ ಪ್ರೈವೇಟ್‌ ಸ್ಕೂಲ್‌ನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದಾರೆ. ಕಳೆದ ವಾರವಷ್ಟೇ ಕೆನಡಾದ ಎಎಎ ವಿಮಾನಯಾನ ಅಕಾಡೆಮಿಯಿಂದ ಏಕವ್ಯಕ್ತಿ ವಿಮಾನ ಚಾಲನೆ ಪರೀಕ್ಷೆಯಲ್ಲಿ ಮನ್ಸೂರ್‌ ತೇರ್ಗಡೆಯಾಗಿದ್ದಾನೆ ಎಂದು ಗಲ್ಫ್ ನ್ಯೂಸ್‌ ವರದಿ ಮಾಡಿದೆ.

ವಿಮಾನಯಾನ ಪರೀಕ್ಷೆ ವೇಳೆ ಮನ್ಸೂರ್‌ ಸೆಸ್ನಾ 152 ವಿಮಾನವನ್ನು ಪಾರ್ಕಿಂಗ್‌ ಬೇ ಇಂದ ರನ್‌ ವೇವರೆಗೂ 10 ನಿಮಿಷಗಳ ಕಾಲ ಚಾಲನೆ ಮಾಡಿ, 5 ನಿಮಿಷಗಳ ಕಾಲ ಹಾರಾಟ ನಡೆಸಿ ಬಳಿಕ ಲ್ಯಾಂಡಿಂಗ್‌ ಮಾಡಿದ್ದಾನೆ. ತರಬೇತಿ ಅವಧಿ ವೇಳೆಯೂ ತಾನು ಏಕವ್ಯಕ್ತಿ ಚಾಲನೆ ಮಾಡಿದ್ದೆ. ಅದೂ ಕೂಡ ಒಂದು ದಾಖಲೆ ಎಂದಿದ್ದಾನೆ ಮನ್ಸೂರ್‌. ಈ ಹಿಂದೆ 15 ವರ್ಷದ ಜರ್ಮನಿ ಬಾಲಕ, 14ರ ಅಮೆರಿಕದ ಬಾಲಕ 34 ಗಂಟೆಗಳ ತರಬೇತಿ ಪಡೆದು ಮಾಡಿದ್ದ ದಾಖಲೆಯನ್ನು ಮನ್ಸೂರ್‌ ಮುರಿದಿದ್ದಾನೆ. ಮನ್ಸೂರ್‌ ಕೇವಲ 25 ಗಂಟೆಗಳ ತರಬೇತಿ ಪಡೆದು ಈ ಸಾಧನೆ ಮಾಡಿದ್ದಾನೆ ಎಂದು ಆತನ ತಂದೆ ಅಲಿ ಅಸYರ್‌ ಅನೀಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next