Advertisement

ಪೂರ್ವಾಂಚಲ ರಾಜ್ಯದ 56 ವಿದ್ಯಾರ್ಥಿಗಳಿಗೆ ಆಶ್ರಯ

10:49 PM Dec 29, 2019 | Lakshmi GovindaRaj |

ಮೈಸೂರು: ದುರ್ಬಲ ವರ್ಗದವರ ಮಕ್ಕಳಿಗೆ ಸಂಸ್ಕಾರ, ರಾಷ್ಟ್ರಭಕ್ತಿಯ ಶಿಕ್ಷಣ ನೀಡುವ ಉದ್ದೇಶದಿಂದ ಶ್ರೀಗಳು ಆರಂಭಿಸಿದ ವಿದ್ಯಾರ್ಥಿನಿಲಯ ನೂರಾರು ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಿದೆ. ಮೈಸೂರಿನ ಜೆಪಿ ನಗರದಲ್ಲಿ 2013ರಲ್ಲಿ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಆರಂಭಿಸಿದ ಶ್ರೀಗಳು ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ.

Advertisement

ಈಶಾನ್ಯ ರಾಜ್ಯಗಳಲ್ಲಿ ಇರುವ ಬಡತನ, ಅನಕ್ಷರತೆ ಗಮನದಲ್ಲಿಟ್ಟುಕೊಂಡು ಆರಂಭಿಸಿದ್ದ ಈ ಸಂಸ್ಥೆಯಲ್ಲಿ 100ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಪೂರ್ವಾಂಚಲ ರಾಜ್ಯಗಳಾದ ಮಣಿಪುರ, ಮೇಘಾಲಯ, ತ್ರಿಪುರ, ಅಸ್ಸಾಂನ ಕಡುಬಡತನದ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡಲು 2013ರಲ್ಲಿ ವಸತಿ ನಿಲಯವನ್ನು ಶ್ರೀಗಳು ಆರಂಭಿಸಿದರು.

ಪೂರ್ವಾಂಚಲ ರಾಜ್ಯದ 56 ವಿದ್ಯಾರ್ಥಿಗಳು ಈ ನಿಲಯದಲ್ಲಿ ಉಳಿದುಕೊಂಡು ವಿಜಯ ವಿಠuಲ ಹಾಗೂ ಭಗೀನಿ ಸೇವಾ ಸಮಾಜ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. 28 ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಸಂಸ್ಥೆ ಇಂದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಗಿದ್ದು, 5 ವರ್ಷ ಪೂರೈಸಿ ಮುನ್ನಡೆಯುತ್ತಿದೆ. ಪ್ರಸ್ತುತ 56 ಪೂರ್ವಾಂಚಲ ರಾಜ್ಯದ ವಿದ್ಯಾರ್ಥಿಳು 43 ಕರ್ನಾಟಕದ ವಿವಿಧ ಭಾಗದ ವಿದ್ಯಾರ್ಥಿಗಳಿಗೆ ನೆಲೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next