Advertisement

ಆಸುಸ್ ನಿಂದ ಹೊಸ ಶ್ರೇಣಿಯ ಕ್ರೋಮ್ ಬುಕ್ ಲ್ಯಾಪ್ ಟಾಪ್ ಬಿಡುಗಡೆ

03:08 PM Jul 17, 2021 | Team Udayavani |

ಬೆಂಗಳೂರು: ತೈವಾನ್ ನ ಪ್ರಮುಖ ಟೆಕ್ ಮತ್ತು ವೇಗವಾಗಿ ಬೆಳೆಯುತ್ತಿರುವ ಲ್ಯಾಪ್ ಟಾಪ್ ಬ್ರ್ಯಾಂಡ್ ಆಗಿರುವ ಆಸುಸ್, ಕ್ರೋಮ್ ಬುಕ್ ಲ್ಯಾಪ್ ಟಾಪ್ ಗಳನ್ನು ಭಾರತೀಯ ಮಾರುಕಟ್ಟೆಗೆ ಫ್ಲಿಪ್ ಕಾರ್ಟ್ ಮೂಲಕ ಬಿಡುಗಡೆ ಮಾಡಿದೆ. ಆಸುಸ್ ಕ್ರೋಮ್ ಬುಕ್ ಸಿ214, ಸಿ223, ಸಿ423 ಮತ್ತು ಸಿ523 ಲ್ಯಾಪ್ ಟಾಪ್ ಗಳನ್ನು 6 ಶ್ರೇಣಿಗಳಲ್ಲಿ ಬಿಡುಗಡೆ ಮಾಡಿದ್ದು, ಇವುಗಳ ಬೆಲೆ 17,999 ರೂಪಾಯಿಗಳಿಂದ 24,999 ರೂಪಾಯಿಗಳವರೆಗೆ ಇದೆ.

Advertisement

ಈ ಲ್ಯಾಪ್ ಟಾಪ್ ಗಳು ಜುಲೈ 22 ರಿಂದ ಫ್ಲಿಪ್ ಕಾರ್ಟ್ ನಲ್ಲಿ ದೊರಕುತ್ತವೆ.

ಆಸುಸ್  ಕ್ರೋಮ್ ಬುಕ್ಸ್ ಎಂಬುದು ಗೂಗಲ್ ನ ಕ್ರೋಮ್ ಒಎಸ್ ನಿಂದ ಚಾಲಿತ ಬಜೆಟ್ ಸ್ನೇಹಿ ಲ್ಯಾಪ್ ಟಾಪ್ ಗಳ ಶ್ರೇಣಿಯಾಗಿದೆ ಮತ್ತು ಇಂಟೆಲ್ ಪ್ರೊಸೆಸರ್ ಗಳು ಬಳಕೆದಾರರ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ನೊಂದಿಗೆ ತಡೆರಹಿತವಾಗಿ ಸಿಂಕ್ ಅನ್ನು ಸಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಸುಸ್ ಕ್ರೋಮ್ ಬುಕ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮಿಲಿಯನ್ + ಅಪ್ಲಿಕೇಶನ್ ಗಳಿಗೆ ಪ್ರವೇಶದೊಂದಿಗೆ ಗೂಗಲ್ ನ ಪರಿಚಿತ ಬಳಕೆದಾರ ಇಂಟರ್ ಫೇಸ್ ಅನ್ನು ಹೊಂದಿದೆ. ಇದು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಆಸುಸ್ ಕ್ರೋಮ್ ಬುಕ್ ಗಳಿಗೆ ಹೊಂದಿಕೊಳ್ಳುವುದನ್ನು ಸುಲಭಗೊಳಿಸುತ್ತದೆ.

ಅಲ್ಟ್ರಾ-ಎಫೆಕ್ಟಿವ್ ಡ್ಯುಯಲ್ –ಕೋರ್ 64-ಬಿಟ್ ಇಂಟೆಲ್ ಪ್ರೊಸೆಸರ್ ಗಳು, 4 ಜಿಬಿ, ಎಲ್ ಪಿಡಿಡಿಆರ್ 4 ರ್ಯಾಮ್ ಮತ್ತು ಮೈಕ್ರೋ ಎಸ್ ಡಿ ವಿಸ್ತರಣೆ 2 ಟಿಬಿವರೆಗೆ ಮತ್ತು 10 ಗಂಟೆಗಳ ಬ್ಯಾಟರಿ ಬಾಳಿಕೆ ಹೊಂದಿದೆ.

Advertisement

ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಗೆ ನಿರಂತರ ಕಲಿಕೆ ಮತ್ತು ಮಲ್ಟಿ ಫಂಕ್ಷನಲ್, ಎಎಸ್ ಯುಎಸ್ ನಿಂದ ಈ ಹೊಸ ಶ್ರೇಣಿಯ ಕ್ರೋಮ್ ಬುಕ್ ಗಳು ಎಚ್ ಡಿ ಕ್ಯಾಮೆರಾ, ಸ್ಟಿರಿಯೋ ಧ್ವನಿವರ್ಧಕಗಳು, ಡ್ಯುಯೆಲ್- ಬ್ಯಾಂಡ್ ವೈ-ಫೈ 5 ಹಾಗೂ ಉತ್ತಮ ಆನ್ ಲೈನ್ ದ್ವಿಮುಖವಾದ ಕಲಿಕೆ ಹಾಗೂ ವಿಡಿಯೋ ಕಾನ್ಫರೆನ್ಸಿಂಗ್ ಗಾಗಿ ಬ್ಲೂಟೂತ್ 5.0 ಹೊಂದಿವೆ.

ಆಸುಸ್ ಕ್ರೋಮ್ ಬುಕ್ ಸಿ223 ತನ್ನ ಅಲ್ಟ್ರಾ-ಲೈಟ್ 1000 ಗ್ರಾಂ ತೂಕದೊಂದಿಗೆ ಗ್ರಾಹಕರಿಗೆ ಯಾವುದೇ ಒತ್ತಡವಿಲ್ಲದೇ ಚಲನಶೀಲತೆಯನ್ನು ನೀಡುತ್ತದೆ. ಇದರ ಬೆಲೆ 17,999 ರೂ.

ಕ್ರೋಮ್ ಬುಕ್ ಸಿ 423 ಮತ್ತು ಸಿ 523 ಕ್ರಮವಾಗಿ 14 ಇಂಚುಗಳು ಮತ್ತು 15.6 ಇಂಚಿನ ಸ್ಕ್ರೀನ್ ಹೊಂದಿದೆ. ನ್ಯಾನೋ ಎಡ್ಜ್ ಪ್ರದರ್ಶನ ಹಾಗೂ ನಯವಾದ ವಿನ್ಯಾಸ ಪ್ರೊಫೈಲ್ ಗಳಿಗೆ ಶೇ.80 ರಷ್ಟು ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿರುತ್ತದೆ. ಕ್ರೋಮ್ ಬುಕ್ ಸಿ 423 ಮತ್ತು ಸಿ523 ಲ್ಯಾಪ್ ಟಾಪ್ ಟಚ್ ಮತ್ತು ನಾನ್ ಟಚ್ ಆವೃತ್ತಿಗಳಲ್ಲಿ ಲಭ್ಯವಿದೆ. ಇದರ ಬೆಲೆಗಳು 19,999 ರೂಪಾಯಿಯಿಂದ 24,999 ರೂಪಾಯಿಗಳಾಗಿದೆ. ಅಂತಿಮವಾಗಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಎಎಸ್ ಯುಎಸ್ ಕ್ರೋಮ್ ಬುಕ್ ಫ್ಲಿಪ್ ಸಿ 214, ಅದರ 360 ಡಿಗ್ರಿ ಕನ್ವರ್ಟಿಬಲ್ ಟಚ್-ಸ್ಕ್ರೀನ್ ಡಿಸ್ ಪ್ಲೇ, ಡ್ಯುಯೆಲ್ ಕ್ಯಾಮೆರಾಗಳೊಂದಿಗೆ ವಿಶೇಷವಾದ ಆಟೋಫೋಕಸ್ ಕ್ಯಾಮರಾವನ್ನು ಒಳಗೊಂಡಿದೆ. ಈ ಸಾಧನವು ಟ್ಯಾಬ್ಲೆಟ್ ಮೋಡ್ ನಲ್ಲಿ ಸಂಪೂರ್ಣವಾಗಿ ಹೊಸ ರೀತಿಯಲ್ಲಿ ಅನ್ವೇಷಣೆ ಮಾಡಲು ಹಾಗೂ ಕಲಿಯಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುತ್ತದೆ. ಹೆಚ್ಚು ಗಡುಸಾದ ಮತ್ತು ನಯವಾದ ರೀತಿಯಲ್ಲಿ ನಿರ್ಮಿಸಲಾದ ಈ ಸಾಧನವು ಮಿಲಿಟರಿ ಗ್ರೇಡ್ ಬಾಳಿಕೆ ಎಂದು ಪ್ರಮಾಣೀಕರಿಸಲ್ಪಟಿದೆ. ಮತ್ತು ಇದರ ಬೆಲೆ 23,999 ರೂ. ಗಳಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next