Advertisement
2023-24ನೇ ಸಾಲಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಜತೆಗೆ ಭಡ್ತಿ, ವಯೋನಿವೃತ್ತಿ, ನಿಧನ ಹಾಗೂ ಇತರ ಕಾರಣಗಳಿಂದ ತೆರವಾಗಲಿರುವ ಉಪನ್ಯಾಸಕರ ಹುದ್ದೆಗಳ ಹಾಗೂ ಹೊಸ ಸಂಯೋಜನೆಗಳಿಗೆ ಹುದ್ದೆ ಮಂಜೂರಾಗದ ವಿಷಯಗಳಿಗೆ ನೇಮಕ ಮಾಡಿಕೊಳ್ಳಬೇಕಾದ ಉಪನ್ಯಾಸಕರನ್ನು ಸೇರಿಸಿ ಒಟ್ಟು 4,055 ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರಕಾರ ಹಸುರು ನಿಶಾನೆ ತೋರಿದೆ.
Related Articles
Advertisement
ಆದೇಶದಲ್ಲಿ 4,055 ಮಂದಿಯ ನೇಮಕಕ್ಕೆ ಅನುಮತಿ ನೀಡಿದ್ದು, ಆ ಪೈಕಿ ದಕ್ಷಿಣ ಕನ್ನಡದಲ್ಲಿ 240, ಉಡುಪಿಯಲ್ಲಿ 200 ಉಪನ್ಯಾಸಕರ ನೇಮಕಕ್ಕೆ ಸೂಚಿಸಲಾಗಿದೆ. ಬಾಗಲಕೋಟೆಯಲ್ಲಿ 190, ಕೋಲಾರ, ಹಾಸನದಲ್ಲಿ ತಲಾ 180, ಬಳ್ಳಾರಿ, ಚಿಕ್ಕಮಗಳೂರು 160, ರಾಮನಗರ, ಚಿಕ್ಕೋಡಿ, ಮೈಸೂರು, ದಾವಣಗೆರೆ ತಲಾ 150, ಕೊಪ್ಪಳ, ಉತ್ತರ ಕನ್ನಡ, ಬೆಳಗಾವಿ ತಲಾ 140, ಮಂಡ್ಯ 130, ರಾಯಚೂರು 120, ವಿಜಯಪುರ, ಮಂಡ್ಯ ತಲಾ 130, ಉಳಿದಂತೆ ಬೆಂಗಳೂರು 80, ಬೆಂಗಳೂರು ದಕ್ಷಿಣ 45, ಬೆಂಗಳೂರು ಗ್ರಾಮಾಂತರ 70, ಬೀದರ್ 50, ಚಿತ್ರದುರ್ಗ 70, ಗದಗ 95, ಹಾವೇರಿ 120, ಧಾರವಾಡ 60, ಕಲಬುರಗಿ 110, ಯಾದಗಿರಿ 100, ಚಿಕ್ಕಬಳ್ಳಾಪುರ 100, ಚಾಮರಾಜನಗರ 95 ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರಕಾರ ಆದೇಶಿಸಿದೆ.