Advertisement

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:26 AM Feb 23, 2022 | Team Udayavani |

ಮೇಷ:

Advertisement

ದೀರ್ಘ‌ ಪ್ರಯಾಣ. ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಗಮನ ಹರಿಸಿ. ಗೌರವದಿಂದ ಕೂಡಿದ ಧನ ಸಂಪತ್ತು ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿದ ತಲ್ಲೀನತೆ.

ವೃಷಭ:

ಧಾರ್ಮಿಕ ಚಲನಚಿತ್ರಗಳಲ್ಲಿ ಭಾಗಿ. ಸತ್ಕಾರ್ಯಕ್ಕೆ ಧನವ್ಯಯ. ದೂರದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಧನಸಂಪತ್ತು ವೃದ್ಧಿ. ಸರಿಸಮವಾದ ಖರ್ಚು. ಆರೋಗ್ಯದ ಬಗ್ಗೆ ಆಸಡ್ಡೆ ಮಾಡದಿರಿ. ದೀರ್ಘ‌ ಪ್ರಯಾಣ ಸಂಭವ.

ಮಿಥುನ:

Advertisement

ಅಧ್ಯಯನ ಅಧ್ಯಾಪನದಲ್ಲಿ ತಲ್ಲೀನತೆ. ಮಕ್ಕಳಿಂದ ಸಂತೋಷ. ನಿರೀಕ್ಷಿತ ಧನವೃದ್ಧಿ. ಹಿರಿಯರ, ಗುರುಗಳ ಮಾರ್ಗದರ್ಶನದ ಲಾಭ. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಕೆಲಸ ಕಾರ್ಯಗಳಲ್ಲಿ ಪ್ರಗತಿ.

ಕಟಕ:

ಆಸ್ತಿ ವಿಚಾರಗಳಲ್ಲಿ ನಿರ್ಣಯ. ದೂರದ ಮಿತ್ರರ ಭೇಟಿ. ಪರಸ್ಪರ ಸಹಕಾರ ಪ್ರೋತ್ಸಾಹ. ಅನಿರೀಕ್ಷಿತ ಬೆಳವಣಿಗೆಗಳು. ಧನಾರ್ಜನೆಗೆ ಸರಿಸಮನಾದ ವ್ಯಯ. ಪಾಲುದಾರಿಕಾ ವ್ಯವಹಾರಗಳಲ್ಲಿ ದುಡುಕು ನಿರ್ಧಾರ ಮಾಡದಿರಿ.

ಸಿಂಹ:

ಜನಮನ್ನಣೆ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಪರಿಶ್ರಮಕ್ಕೆ ಸರಿಯಾದ ನ್ಯಾಯಸಮ್ಮತವಾದ ಧನಾರ್ಜನೆ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಬಂಧುಮಿತ್ರರೊಂದಿಗೆ ಸಹನೆ ತಾಳ್ಮೆಯಿಂದ ವ್ಯವಹರಿಸಿ.

ಕನ್ಯಾ:

ಉತ್ತಮ ಆರೋಗ್ಯ. ಅಧ್ಯಯನದಲ್ಲಿ ಆಸಕ್ತಿ ವೃದ್ಧಿ. ಬಂಧುಮಿತ್ರರ ಸಹಾಯ ಸಹಕಾರ ಒದಗಿ ಬರುವ ಸಂಭವ. ಉತ್ತಮ ಧನಾರ್ಜನೆಗೆ ಅವಕಾಶ. ಮಾತಿನಲ್ಲಿ ಸ್ಪಷ್ಟತೆ ಇರಲಿ. ಮಕ್ಕಳ ಅಭಿವೃದ್ಧಿ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ.

ತುಲಾ:

ದೈಹಿಕವಾಗಿಯೂ ಮಾನಸಿಕ ವಾಗಿಯೂ ಆರೋಗ್ಯ ವೃದ್ಧಿ. ಧೈರ್ಯ ಸಹಾಸ ಉದಾರತೆಯಿಂದ ಕೂಡಿದ ಕಾರ್ಯ ವೈಖರಿ. ಮಾನಸಿಕ ತೃಪ್ತಿ. ಪಾಲುದಾರರ ಸಹಕಾರದಿಂದ ಧನವೃದ್ಧಿ. ಸಹೋದರ ಸಮಾನರಿಂದ ಸುಖ.

ವೃಶ್ಚಿಕ:

ಉತ್ತಮ ಆರೋಗ್ಯ. ಉದ್ಯೋಗ ವ್ಯವಹಾರಗಳಿಂದ ನಿರೀಕ್ಷಿತ ಧನಾಗಮ. ಶಿಸ್ತಿನ ಚಟುವಟಿಕೆಯಿಂದ ಕಾರ್ಯ ಸಫ‌ಲತೆ. ಹೆಚ್ಚಿದ ವರಮಾನ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ವಿನಯದಿಂದ ಶ್ರೇಯಸ್ಸು.

ಧನು:

ಆರೋಗ್ಯದಲ್ಲಿ ಗಣನೀಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಪರರಿಂದ ಸ್ಪರ್ಧೆ ಸಂಭವ. ತಾಳ್ಮೆಯಿಂದ ವ್ಯವಹರಿಸಿ. ನಿರೀಕ್ಷೆಗೂ ಮೀರಿದ ಧನವೃದ್ಧಿ. ಸಂದಭೋìಚಿತ ಸಹಾಯ ಲಭಿಸೀತು. ಧಾರ್ಮಿಕ ಕಾರ್ಯಗಳಿಗೆ ಧನ ಸಂಗ್ರಹ.

ಮಕರ:

ಉತ್ತಮ ಆರೋಗ್ಯ. ಜವಾಬ್ದಾರಿ ಯುತ ನಡೆಯಿಂದ ವ್ಯವಹಾರಗಳಲ್ಲಿ ಪರಿಶ್ರಮದಿಂದ ಹಣಕಾಸು, ಸಂಪತ್ತಿನಲ್ಲಿ ಪ್ರಗತಿ. ಸಹೋದ್ಯೋಗಿಗಳಿಂದ ಉತ್ತಮ ಒಡನಾಟ. ಧಾರ್ಮಿಕ ಜ್ಞಾನ ಸಂಪಾದನೆಯಲ್ಲಿ ತಲ್ಲೀನತೆ.

ಕುಂಭ:

ಆರೋಗ್ಯ ಗಮನಿಸಿ. ಉದಾಸೀನತೆ ತೋರದಿರಿ. ಉದ್ಯೋಗ ವ್ಯವಹಾರಗಳಲ್ಲಿ ಪಾಲುದಾರರ ಸಹಕಾರ ಸಹಾಯದಿಂದ ನಿರೀಕ್ಷಿತ ಧನಸಂಪತ್ತು ವೃದ್ಧಿ. ದೂರದ ಮಿತ್ರರಿಂದ ಸಹಾಯ. ದೇವತಾ ಕೆಲಸಗಳು ನಡೆಸಿದ ಸಮಾಧಾನ.

ಮೀನ:

ಆರೋಗ್ಯ ಗಮನಿಸಿ. ನಿರ್ಲಕ್ಷ್ಯ ಮಾಡದಿರಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಅಧಿಕ ಶ್ರಮ. ಧನಾರ್ಜನೆಗೆ ಕೊರತೆಯಾಗದು. ಹೆಚ್ಚಿದ ಜವಾಬ್ದಾರಿಯಿಂದ ಸಂತೋಷ. ಧಾರ್ಮಿಕ ಕೆಲಸಗಳ ನೇತೃತ್ವ . ಹಿರಿಯರೊಂದಿಗೆ ಪ್ರಯಾಣ. ವಿದ್ಯಾರ್ಥಿಗಳಿಗೆ ಎಲ್ಲ ವಿಧದ ಸೌಕರ್ಯದ ಸುಖ ಪ್ರಾಪ್ತಿ.

Advertisement

Udayavani is now on Telegram. Click here to join our channel and stay updated with the latest news.

Next