Advertisement

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:14 AM Jul 13, 2022 | Team Udayavani |

ಮೇಷ:

Advertisement

ದೇವತಾನುಗ್ರಹದಿಂದ ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ನೂತನ ಬಂಧುಮಿತ್ರರ ಸಮಾಗಮ. ಅಧ್ಯಯನ ಪ್ರವೃತ್ತರಿಗೆ ಹೆಚ್ಚಿದ ಶ್ರಮ. ಕೆಲಸ ಕಾರ್ಯಗಳಲ್ಲಿ ಸಾಹಸ ಪ್ರವೃತ್ತಿಯಿಂದ ಅಭಿವೃದ್ಧಿ. ಗುರುಹಿರಿಯರಿಂದ ಪ್ರೋತ್ಸಾಹ.

ವೃಷಭ:

ವಿದೇಶ ಮೂಲದಿಂದ ಧನಾಗಮನ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಪ್ರಯಾಣ. ಅಡಚಣೆಗಳ ನಿವಾರಣೆ. ಸ್ಥಾನ ಗೌರವಾದಿ ವಿಚಾರಗಳಲ್ಲಿ ಪ್ರಗತಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ.

ಮಿಥುನ:

Advertisement

ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಗುರುಹಿರಿಯರ ಸಹಕಾರ ಪ್ರೋತ್ಸಾಹದಿಂದ ಸ್ಥಾನ ಗೌರವಾದಿ ವೃದ್ಧಿ. ನಿರಂತರ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ವಾಕ್‌ ಚತುರತೆಯಿಂದ ಪ್ರಗತಿ. ದಾಂಪತ್ಯ ಸುಖ ತೃಪ್ತಿದಾಯಕ. ಮಕ್ಕಳಿಂದ ಸಂತೋಷ.

ಕರ್ಕ:

ಗೃಹೋಪಕರಣ ವಸ್ತುಗಳಿಗಾಗಿ ಧನವ್ಯಯ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ. ಗುರುಹಿರಿಯರೊಂದಿಗೆ ಸಂಭ್ರಮದ ಕಾಲ ಕಳೆಯುವಿಕೆ.

ಸಿಂಹ:

ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ತಾಳ್ಮೆಯ ನಡೆಯಿಂದ ಸಫ‌ಲತೆ. ಗೃಹೋಪ ವಸ್ತುಗಳ ಸಂಗ್ರಹ. ಗುರುಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಅನುಕೂಲ.

ಕನ್ಯಾ:

ಆರೋಗ್ಯ ಗಮನಿಸಿ. ಅತಿಯಾದ ದೇಹಾಯಾಸವಿರುವ ಪ್ರವೃತ್ತಿ ಸಲ್ಲದು. ಹೆಚ್ಚಿದ ಜವಾಬ್ದಾರಿ. ಉದ್ಯೋಗ ವ್ಯಾಪಾರಗಳಲ್ಲಿ ಗೌರವ ವೃದ್ಧಿ. ಉತ್ತಮ ಧನಾರ್ಜನೆ. ದಾಂಪತ್ಯ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫ‌ಲತೆ.

ತುಲಾ:

ಸುಖ ಸಂತೋಷದಿಂದ ಕೂಡಿದ ಸಮಯ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧಿಕ ಧನಾರ್ಜನೆ ಇದ್ದರೂ ಲಾಭಾಂಶ ಕಡಿಮೆ ತೋರೀತು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಮಯ.

ವೃಶ್ಚಿಕ:

ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ಚಟುವಟಿಕೆಗಳು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಸಹೋದರಾದಿ ವರ್ಗದವರಿಂದಲೂ ಸಹೋದ್ಯೋಗಿಗಳಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಗೌರವ.

ಧನು:

ಆರೋಗ್ಯ ಮಧ್ಯಮ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ದೇವತಾ ಕಾರ್ಯಗಳ ಸಂಭ್ರಮ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದ ನಡೆಯಿಂದ ತೊಂದರೆ ಆಗುವ ಸಾಧ್ಯತೆ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಪ್ರಾಪ್ತಿ.

ಮಕರ:

ಉತ್ತಮ ಸ್ಥಿರ ಆರೋಗ್ಯ. ವಿವೇಕದಿಂದ ಕೂಡಿದ ಕೆಲಸ ಕಾರ್ಯಗಳು, ಜನಮನ್ನಣೆ. ಉತ್ತಮ ವಾಕ್‌ ಚತುರತೆಯಿಂದ ಹೆಚ್ಚಿದ ಧನಾರ್ಜನೆ. ಕುಟುಂಬ ಸುಖ ವೃದ್ಧಿ. ನೂತನ ಮಿತ್ರರ ಸಮಾಗಮ. ದೀರ್ಘ‌ ಪ್ರಯಾಣದ ಯೋಗ.

ಕುಂಭ:

ಆರೋಗ್ಯ ವೃದ್ಧಿ. ಉತ್ತಮ ಕಾರ್ಯಚಟುವಟಿಕೆಗಳಿಂದ ಕೂಡಿದ ದಿನಚರಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳ ನೇತೃತ್ವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು. ದಾಂಪತ್ಯ ಸುಖ ತೃಪ್ತಿದಾಯಕ.

ಮೀನ:

ದೀರ್ಘ‌ ಪ್ರಯಾಣದಿಂದ ದೇಹಾಯಾಸ ಸಂಭವ. ಉತ್ತಮ ಧನಾರ್ಜನೆ ಹಾಗೂ ಅಧಿಕ ಉಳಿತಾಯ. ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ. ಗುರುಹಿರಿಯರ ಆರೋಗ್ಯ ಸುಧಾರಣೆ. ದಾಂಪತ್ಯ ಸುಖ ವೃದ್ಧಿ. ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಸ್ಥಾನ ಸುಖ. ದೇವತಾರಾಧನೆಯಿಂದ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next