Advertisement

ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:08 AM Jul 24, 2022 | Team Udayavani |

ಮೇಷ:

Advertisement

ಆರೋಗ್ಯ ಸ್ಥಿರ. ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ಕೂಡಿದ ನಡೆ. ದೂರ ವ್ಯವಹಾರದಿಂದ ಧನ ವೃದ್ಧಿ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ. ದಾಂಪತ್ಯ ಸುಖ ವೃದ್ಧಿ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಗುರುಹಿರಿಯರನ್ನು ಅನುಸರಿಸುವುದರಿಂದ ಕ್ಷೇಮ.

ವೃಷಭ:

ಪ್ರಯಾಣದಿಂದ ದೇಹಾಯಾಸ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರ ಸಹಕಾರದಿಂದ ಅಭಿವೃದ್ಧಿ. ಧಾರ್ಮಿಕ ಕೆಲಸಗಳಿಂದ ಮಾನಸಿಕ ನೆಮ್ಮದಿ. ಗೃಹೋಪಕರಣ ವಸ್ತುಗಳ ಸಂಗ್ರಹಕ್ಕೆ ಧನ ವ್ಯಯ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ಮಿಥುನ:

Advertisement

ನಿರೀಕ್ಷಿತ ಸ್ಥಾನ ಪ್ರಾಪ್ತಿ. ಅಧ್ಯಯನ ಶೀಲರಿಗೆ ಉತ್ತಮ ಗೌರವ ಸಿಗುವ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ದೈಹಿಕವಾಗಿಯೂ ಮಾನಸಿಕವಾಗಿಯೂ ಆರೋಗ್ಯ ಸುದೃಢ. ಹಣಕಾಸಿನ ವಿಚಾರದಲ್ಲಿ ಜಾಗೃತೆ.

ಕರ್ಕ:

ದೈಹಿಕ ಆರೋಗ್ಯ ಉತ್ತಮವಿದ್ದರೂ ಮಾನಸಿಕ ಒತ್ತಡ ಸಂಭವ. ಉದ್ಯೋಗ ಕೆಲಸ ಕಾರ್ಯಗಳಲ್ಲಿ ಉನ್ನತಿ. ಉತ್ತಮ ಧನಸಮೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.

ಸಿಂಹ:

ಗೃಹೋಪಕರಣ ವಸ್ತುಗಳ ಸಂಗ್ರಹಕ್ಕಾಗಿ ಧನವ್ಯಯ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಒತ್ತಡಗಳಿದ್ದರೂ ಕಾರ್ಯ ಪೂರೈಸುವಿರಿ. ಧನಾರ್ಜನೆಗೆ ಕೊರತೆ ಕಾಣದು. ಸಾಂಸಾರಿಕ ಸುಖ ತೃಪ್ತಿದಾಯಕ. ನೂತನ ಮಿತ್ರರ ಸಹಕಾರ. ಹಿರಿಯರ ಉತ್ತಮ ಮಾರ್ಗದರ್ಶನ.

ಕನ್ಯಾ:

ಆರೋಗ್ಯ ಉತ್ತಮ, ಧನಾರ್ಜನೆ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸರಿಯಾದ ಯೋಜನೆಯಿಂದ ಕೂಡಿದ ಕಾರ್ಯವೈಖರಿ. ಸಹೋದರ ಸಹೋದ್ಯೋಗಿಗಳ ಸಹಾಯ ಸಹಕಾರ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ತುಲಾ:

ಆರೋಗ್ಯ ವೃದ್ಧಿ. ದೈಹಿಕ ಸುಖಕ್ಕೆ ಬೇಕಾಗುವ ವಸ್ತುಗಳ ಸಂಗ್ರಹ. ವಸ್ತ್ರ ಆಭರಣ ಖರೀದಿ. ವಿವಾಹಾದಿ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿಕೆ. ಸುಖ ಸಂತೋಷ ವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.

ವೃಶ್ಚಿಕ:

ಸರಕಾರಿ ಕಾರ್ಯಗಳಲ್ಲಿ ಮುನ್ನಡೆ. ಗಣ್ಯರ ಸಂಪರ್ಕ. ಗೌರವಾದಿ ವೃದ್ಧಿ. ಬಂಧುಜನರೊಂದಿಗೆ ವಿಲಾಸ. ಧಾರ್ಮಿಕ ವಿಚಾರ ಆಸಕ್ತಿ. ಜನಮೆಚ್ಚುವ ಕೆಲಸ ಕಾರ್ಯಗಳಿಂದ ಕೀರ್ತಿ ಸಂಪಾದನೆ. ಗೃಹದಲ್ಲಿ ಸಂತಸದ ವಾತಾವರಣ.

ಧನು:

ಆರೋಗ್ಯ ಸತ್ಕರ್ಮ ದೇವತಾ ಕಾರ್ಯಗಳಲ್ಲಿ ಭಾಗಿಯಾಗಿ ದಾನ ಧರ್ಮ ನಿರತ. ಗುರುಹಿರಿಯರ ಪ್ರೀತಿ ಸಂಪಾದನೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಮನೆಯಲ್ಲಿ ಸಂತಸದ ವಾತಾವರಣ.

ಮಕರ:

ಪಾರದರ್ಶಕತೆಗೆ ಆದ್ಯತೆ ನೀಡಿ. ಯಾರ ಮಾತಿಗೂ ಮರುಳಾಗದಿರಿ. ಉದ್ಯೋಗ ವ್ಯವಹಾರಗಳಲ್ಲಿ ಆಸ್ತಿ ವಿಚಾರಗಳಲ್ಲಿ ಸ್ಪಷ್ಟತೆ ಆದ್ಯತೆ ನೀಡಿ. ಅನ್ಯರ ಸಹಾಯ ಅಪೇಕ್ಷಿಸದೇ ಸ್ವಂತ ಪರಿಶ್ರಮದಲ್ಲಿ ವಿಶ್ವಾಸವಿಡಿ..

ಕುಂಭ:

ನಯವಿನಯದಿಂದ ಕಾರ್ಯಪ್ರವೃತ್ತರಾಗಿ ಯಾವುದೇ ಆತುರದ ನಿರ್ಧಾರ ಮಾಡದಿರಿ. ಪರರ ಮಾತನ್ನು ಆಲಿಸುವಾಗ ನಿಮ್ಮ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಗಟ್ಟನ್ನು ಕಾಪಾಡಿಕೊಳ್ಳಿ. ಉತ್ತಮ ಧನಸಂಪತ್ತು ವೃದ್ಧಿ. ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು.

ಮೀನ:

ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ. ಪ್ರತಿಸ್ಪರ್ಧಿಗಳಿಗೆ ಅವಕಾಶವಿಲ್ಲದಂತೆ ಕಾರ್ಯಮಗ್ನರಾಗಿ. ಉತ್ತಮ ಧನಾರ್ಜನೆ. ಮಾತಿನಲ್ಲಿ ಸ್ಪಷ್ಟತೆ ತಾಳ್ಮೆ ಇರಲಿ. ದಾಂಪತ್ಯ ತೃಪ್ತಿಕರ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗಿ. ಕಿರಿಯರಿಗೆ ಹಿರಿಯರ ಮಾರ್ಗದರ್ಶನ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next