Advertisement

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

07:27 AM Jan 24, 2022 | Team Udayavani |
ಮೇಷ:
ಉತ್ತಮ ಸಂತಸದಿಂದ ಕೂಡಿದ ಸಮಯ. ದೀರ್ಘ‌ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಗುರುಹಿರಿಯರ ಆಶೀರ್ವಾದದ ಸುಖ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ಗಣ್ಯರ ಭೇಟಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ.
ವೃಷಭ:
ನಾನಾರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಸಂದರ್ಭಕ್ಕೆ ಸರಿಯಾಗಿ ಸಹಾಯ ಸಹಕಾರ ಒದಗಿ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸಿದ ತೃಪ್ತಿ. ಉತ್ತಮ ಧನಾರ್ಜನೆ. ಸಾಂಸಾರಿಕ ಸುಖ ವೃದ್ಧಿ.
ಮಿಥುನ:
ಆರೋಗ್ಯದಲ್ಲಿ ಸುದಾರಣೆ- ಮನೆಯ ಕಡೆ ವಿಶೇಷ ಗಮನ ಹರಿಸುವಿಕೆ. ಗೃಹೋಪ ವಸ್ತುಗಳ ಸಂಗ್ರಹ. ಮಿತ್ರರ ಭೇಟಿಯಿಂದ ಸಂತಸ ವೃದ್ಧಿ. ದೂರದ ವ್ಯವಹಾರಗಳಲ್ಲಿ ಹೆಚ್ಚಿದ ಧನ ಸಂಪಾದನೆ. ಪಾಲುಗಾರಿಕಾ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸಿ.
ಕಟಕ:
ನಿರೀಕ್ಷಿತ ಸ್ಥಾನ ಗೌರವಕ್ಕೆ ಹೆಚ್ಚಿನ ಹೋರಾಟ. ಆರೋಗ್ಯದ ಬಗ್ಗೆ ಗಮನಹರಿಸಿ. ಪ್ರಯಾಣದಲ್ಲಿ ವಿಳಂಬ ಅಡಚಣೆ ತೋರೀತು. ಧನಾಗಮನಕ್ಕೆ ಕೊರತೆಯಾಗದು. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ ತೋರಿದರೂ ಸ್ಥಾನಸುಖ ಲಭಿಸುವುದು.
ಸಿಂಹ:
ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಸಂತಸದ ವಾತಾವರಣ. ಅಭಿವೃದ್ಧಿಯ ಧನಾರ್ಜನೆ. ಉತ್ತಮ ವಾಕ್‌ ಚತುರತೆ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ಗುರುಹಿರಿಯರ ವಿಚಾರದಲ್ಲಿ ವಿಶೇಷ ಕಾಳಜಿ.
ಕನ್ಯಾ:
ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಿರತೆ.ನಿರೀಕ್ಷಿತ ಧನ ಸಂಪಾದನೆ. ಭೂಮಿ ಆಸ್ತಿ ಪತ್ರ ವ್ಯವಹಾರಗಳಲ್ಲಿ ಜಾಗ್ರತೆಯ ನಡೆ. ಸಾಂಸಾರಿಕ ಸುಖ ತೃಪ್ತಿದಾಯಕ. ಮಕ್ಕಳಿಂದ ವಿಶೇಷ ಸುಖ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ ಪ್ರೋತ್ಸಾಹ.
ತುಲಾ:
ಅವಿವಾಹಿತರಿಗೆ ಸೂಕ್ತ ಸಂಬಂಧ ಒದಗುವ ಸಮಯ. ದಾಂಪತ್ಯ ಸುಖ ವೃದ್ಧಿ. ರಾಜಕೀಯ ಕ್ಷೇತ್ರದವರಿಗೂ, ಸರಕಾರಿ ವರ್ಗದವರಿಗೂ ಅಭಯ. ವಿದ್ಯಾರ್ಥಿಗಳಿಗೆ ಸೌಕರ್ಯ ವೃದ್ಧಿ. ಅನಿರೀಕ್ಷಿತ ಧನಾಗಮ. ಗುರುಹಿರಿಯರ ಆರೋಗ್ಯ ವೃದ್ಧಿ. ಅಧಿಕ ವ್ಯಯ.
ವೃಶ್ಚಿಕ:
ನಿರೀಕ್ಷಿತ ಸ್ಥಾನ ಸುಖ. ಮೇಲಧಿಕಾರಿಗಳಿಂದ ಸಹಾಯ. ಉತ್ತಮ ಧನ ಸಂಪತ್ತು. ಸಾಂಸಾರಿಕ ಸುಖ, ವಿದ್ಯಾರ್ಥಿಗಳಿಗೆ ಅವಿವಾಹಿತರಿಗೆ ಅನುಕೂಲಕರ ಪರಿಸ್ಥಿತಿ. ಆಹಾರೋದ್ಯಮ, ಹೈನುಗಾರಿಕೆ, ವಸ್ತ್ರೋದ್ಯಮ, ಆಭರಣ ವ್ಯವಹಾರಸ್ಥರಿಗೆ ಅಭಿವೃದ್ಧಿ.
ಧನು:
ಆರೋಗ್ಯ ಗಮನಿಸಿ. ನಿರೀಕ್ಷಿತ ಸಹಾಯ ಸಿಗದು. ಸ್ವಂತ ಪ್ರಯತ್ನದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿಕೊಳ್ಳಿ. ಮೇಲಧಿಕಾರಿಗಳಲ್ಲಿ ಸಂಯಮದಿಂದ ವ್ಯವಹರಿಸಿ. ಪಾಲುದಾರಿಕಾ ಕ್ಷೇತ್ರದವರು ತಾಳ್ಮೆಯಿಂದಿರಿ. ಮಕ್ಕಳಿಂದ ಸಂತಸ.
ಮಕರ:
ಮಾತೃ ಸಮಾನರ ಕಾರ್ಯ ನಿರ್ವಹಿಸಿದ ಸಮಾಧಾನ. ಆರೋಗ್ಯ ಸ್ಥಿರ. ಧನಾರ್ಜನೆಗೆ ಸಮಾನಾದ ವ್ಯಯ. ನೇರ ಮಾತುಗಾರಿಕೆ ಸಲ್ಲದು. ಅಧ್ಯಯನ ಪ್ರವೃತ್ತರಿಗೆ ಅನುಕೂಲಕರ. ಉದ್ಯೋಗದಲ್ಲಿ ಅಧಿಕ ಜವಾಬ್ದಾರಿ. ದೇವತಾಸ್ಥಳ ಸಂದರ್ಶನ.
ಕುಂಭ:
ಬಂದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಆತುರತೆ ಸಲ್ಲದು. ಪ್ರಯಾಣದಿಂದ ಸುಖ ಸಮೃದ್ಧಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಆರೋಗ್ಯದಲ್ಲಿ ಗಮನವಿರಲಿ. ವ್ಯಾಪಾರಿಗಳಿಗೆ ಉತ್ತಮ ದಿನ. ಮಿತ್ರರ ಸಹಾಯದಿಂದ ಕಾರ್ಯಸಾಧನೆ.
ಮೀನ:
ಮಕ್ಕಳ ಆರೋಗ್ಯದ ಕಡೆ ಗಮನಿಸಿ. ಪ್ರಯಾಣದಿಂದ ಲಾಭ. ದೂರದ ಕಾರ್ಯದಲ್ಲಿ ಜಯ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಪರಿಶ್ರಮದಿಂದ ನಿರೀಕ್ಷಿತ ಸ್ಥಾನ ಸುಖ. ಧನಾರ್ಜನೆ ಉತ್ತಮವಿದ್ದರೂ ವಿಳಂಬವಾಗಿ ಕೈಸೇರುವುದು. ಉನ್ನತ ಅಧಿಕಾರಿಗಳು ಗುರುಹಿರಿಯರ ಆಶೀರ್ವಾದದಿಂದ ಅಭಿವೃದ್ಧಿ. ಗೃಹದಲ್ಲಿ ಸಂಭ್ರಮ.
Advertisement

Udayavani is now on Telegram. Click here to join our channel and stay updated with the latest news.

Next