Advertisement

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:16 AM Jun 23, 2022 | Team Udayavani |

ಮೇಷ:

Advertisement

ಪ್ರಜ್ಞೆ , ಪ್ರತಿಭೆ, ಬುದ್ಧಿವಂತಿಕೆ ಸಂದ ಭೋìಚಿತ ನಡೆ ನುಡಿಯಿಂದ ನಾಯಕತ್ವ ಗುಣ ವೃದ್ಧಿ. ಅಧ್ಯಯನ ನಿಮಿತ್ತ ಪ್ರಯಾಣ ಯಶಸ್ಸು ಲಭ್ಯ. ಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ಧನ ಸಂಪತ್ತಿನಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ.

ವೃಷಭ:

ಉತ್ತಮ ವಾಕ್‌ಚತುರತೆ. ಸಾಹಸ ದಿಂದ ಕೂಡಿದ ಧನಾರ್ಜನೆ. ಗೃಹ ಆಸ್ತಿ ಕಟ್ಟಡ ವಿಚಾರಗಳಲ್ಲಿ ಧನ ವ್ಯಯ. ಮಿತ್ರರ ನಿಮಿತ್ತ ಹೆಚ್ಚಿದ ಜವಾ ಬ್ದಾರಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಕೀರ್ತಿ ಸಂಪಾದನೆ.

ಮಿಥುನ:

Advertisement

ಆಚಾರ ವಿಚಾರದಲ್ಲಿ ಮಗ್ನತೆ. ಅಧ್ಯಯನ ಅಧ್ಯಾಪನದಲ್ಲಿ ಗಣಿನೀತ ಪ್ರಗತಿ. ಮಕ್ಕಳಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಧನ ಸಂಪತ್ತು ವೃದ್ಧಿ. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆಯಿಂದ ಮಹತ್ಕಾರ್ಯ ಸಫ‌ಲತೆ.

ಕರ್ಕ:

ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಗುರುಹಿರಿಯರ ಆರೋಗ್ಯ ಗಮನಿಸಿ. ಗೃಹ ಸಂಬಂಧೀ ವಿಚಾರಗಳಲ್ಲಿ ಧನವ್ಯಯ. ದಾಂಪತ್ಯ ಸುಖ ವೃದ್ಧಿ. ನೂತನ ಮಿತ್ರರ ಭೇಟಿ.

ಸಿಂಹ:

ಭೂಮಾದಿ ವ್ಯವಹಾರಗಳಲ್ಲಿ ಪ್ರಗತಿ. ಸ್ಥಾನ ಗೌರವಾದಿ ವೃದ್ಧಿ. ಮಕ್ಕಳಿಂದ ಸಂತೋಷ. ಗುರುಹಿರಿಯರ ಪ್ರೋತ್ಸಾಹ. ಉದ್ಯೋಗ ವ್ಯವಹಾರಗಳಲ್ಲಿ ಪರರಿಗೆ ಸಲಹೆ, ಮಾರ್ಗದರ್ಶನ ನೀಡುವ ಅವಕಾಶ. ದಾಂಪತ್ಯ ಸುಖ ಮಧ್ಯಮ.

ಕನ್ಯಾ:

ಉತ್ತಮ ಆಲೋಚನೆಯಿಂದ ಕೂಡಿದ ಮಾತುಗಾರಿಕೆ. ಉದ್ಯೋಗ ವ್ಯವಹಾರಗಳಲ್ಲಿ ಮೇಲಧಿಕಾರಿಗಳ ಗುರುಹಿರಿಯರ ಸಹಾಯ ಸಹಕಾರ ಲಭ್ಯ. ಆರೋಗ್ಯ ವೃದ್ಧಿ. ದಾಂಪತ್ಯ ಸುಖ ತೃಪ್ತಿಕರ. ವಿದ್ಯಾರ್ಥಿಗಳಿಗೆ ವಿಫ‌ುಲ ಅವಕಾಶ.

ತುಲಾ:

ಆರೋಗ್ಯ ವೃದ್ಧಿ. ಮನೋರಂಜನೆಯಿಂದ ಕೂಡಿದ ದಿನ. ಅನಿರೀಕ್ಷಿತ ಧನಾಗಮನ. ಹೆಚ್ಚಿನ ಲಾಭ. ನೂತನ ಮಿತ್ರರ ಭೇಟಿ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಆಸ್ತಿ ವಿಚಾರದಲ್ಲಿ ಪರಿಶ್ರಮದಿಂದ ಮುನ್ನಡೆ.

ವೃಶ್ಚಿಕ:

ಹೊಸ ಕಾರ್ಯಗಳಲ್ಲಿ ತಲ್ಲಿನತೆ. ಸರಕಾರಿ ಉದ್ಯೋಗಗಳಲ್ಲಿ ಸಫ‌ಲತೆ. ದೂರದ ವ್ಯವಹಾರಗಳಲ್ಲಿ ನಿರೀಕ್ಷಿತ ಧನಲಾಭ. ಮಿತ್ರರ ಸಹಾಯ. ಗುರುಹಿರಿಯರ ಪ್ರೋತ್ಸಾಹ ಆಶೀರ್ವಾದ. ವಿದ್ಯಾರ್ಥಿಗಳಿಗೆ ಸಣ್ಣ ಪ್ರಯಾಣ ಸಂಭವ.

ಧನು:

ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದೇ ತಾಳ್ಮೆಯಿಂದ ವ್ಯವಹರಿಸಿ ಕಾರ್ಯಸಾಧನೆ. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಹಣಕಾಸಿನ ವಿಚಾರದಲ್ಲಿ ದುಡುಕು ನಿರ್ಧಾರ ಮಾಡ ದಿರಿ. ವಿದ್ಯಾರ್ಥಿಗಳಿಗೆ ವಿಫ‌ುಲ ಅವಕಾಶ .

ಮಕರ:

ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸಫ‌ಲತೆ. ಗೌರವ ಆದಾರಾದಿ ಸುಖ. ಅಧಿಕ ಧನಾರ್ಜನೆ. ಹಿರಿಯರ ಆರೋಗ್ಯ ಬಗ್ಗೆ ಗಮನಹರಿಸಿ. ಚರ್ಚೆಗೆ ಅವಕಾಶ ನೀಡದಿರಿ. ಆಸ್ತಿ ವಿಚಾರದಲ್ಲಿ ಮುನ್ನಡೆ.

ಕುಂಭ:

ಆರೋಗ್ಯ ವೃದ್ಧಿ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ, ಪ್ರೋತ್ಸಾಹ. ದೂರದ ವ್ಯವಹಾರಗಳಿಂದ ಧನವೃದ್ಧಿ. ಪಾಲುದಾರಿಕಾ ವ್ಯವಾಹಾರದಲ್ಲಿ ಉತ್ತಮ ಸಹಕಾರ. ನಿರೀಕ್ಷಿತ ಗುರಿ ಸಾಧನೆ. ಮನೆಯಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಶ್ರಮದಿಂದ ಸ್ಥಾನ ಲಾಭ.

ಮೀನ:

ಮಕ್ಕಳಿಂದ ಸಂತೋಷ. ಮಾನಸಿಕ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆ ನಡೆಯಿಂದ ಶ್ರೇಯಸ್ಸು. ಧನಾರ್ಜನೆಗೆ ಕೊರತೆಯಾಗದು. ಸಹೋದ್ಯೋಗಿಗಳಿಂದ ಸಹಕಾರ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next