Advertisement
ಆರೋಗ್ಯ ಗಮನಿಸಿ. ಕೆಲಸ ಕಾರ್ಯಗಳಲ್ಲಿ ಪ್ರಗತಿಗೆ ಅಡ್ಡಿ ಆತಂಕಗಳು, ವಿಘ್ನ ಅಡಚಣೆ ಆಗದಂತೆ ಸರಿಯಾಗಿ ವಿಚಾರ ಮಾಡಿ ಪ್ರವೃತ್ತರಾಗಿ. ಪರರ ಸಂಪತ್ತನ್ನು ವಿನಿಯೋಗಿಸುವಾಗ ಜಾಗ್ರತೆ ವಹಿಸಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಗುರುಹಿರಿಯರ ಮಾರ್ಗದರ್ಶನ ಪಾಲಿಸಿದರೆ ಯಶಸ್ಸು.
Related Articles
Advertisement
ಮಕ್ಕಳಿಂದ ಸುಖ. ಬಂಧು ಜನರೊಂದಿಗೆ ವಿಲಾಸ. ಸ್ಥಾನಮಾನ ಪದವಿ ವೃದ್ಧಿ. ಶ್ರೇಯಸ್ಕರ ಕಾರ್ಯಗಳಿಂದ ಜನಮನ್ನಣೆ. ಆಚಾರ ವಿಚಾರಗಳಲ್ಲಿ ತಲ್ಲೀನತೆ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಶ್ರಮಕ್ಕೆ ತಕ್ಕ ಪ್ರತಿಫಲ.
ಕರ್ಕ:
ದೇವತಾರಾದನೆಯಿಂದ ನೆಮ್ಮದಿ ಲಭಿಸೀತು. ಅನಾವಶ್ಯಕ ಸಂಚಾರಕ್ಕೆ ಆಸ್ಪದ ನೀಡದಿರಿ. ಅನ್ಯರ ವಿಚಾರದಲ್ಲಿ ಭಾಗಿಯಾಗದಿರಿ. ಆದಷ್ಟು ವಿಶ್ರಾಂತಿ ಪಡೆದು ದೈಹಿಕ ಮಾನಸಿಕ ಸುಖ ಅನುಭವಿಸಲು ಪ್ರಯತ್ನಿಸಿ.
ಸಿಂಹ:
ಆರೋಗ್ಯ ಗಮನಿಸಿ. ದಂಪತಿಗಳು ಪರಸ್ಪರ ಪ್ರೋತ್ಸಾಹಿಸಿ ಸುಖ ಕಾಣಿರಿ. ಸ್ತ್ರೀಪುರುಷರು ಪರಸ್ಪರರ ವಿಚಾರದಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಪ್ರಾಮಾಣಿಕತೆಗೆ ಆದ್ಯತೆ ನೀಡಿ. ಅನಾವಶ್ಯಕ ಸಂಚಾರ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.
ಕನ್ಯಾ:
ಆರೋಗ್ಯ ಉತ್ತಮ. ಕುಟುಂಬ ಸುಖ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿಕೆ. ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಉತ್ತಮ ಧನಾರ್ಜನೆ. ಸಾಮಾಜಿಕ ಸುಖ ಪ್ರಾಪ್ತಿಗಾಗಿ ಹಿತೋಕ್ತಿ ಬೋದನೆ. ದಾಂಪತ್ಯ ಸುಖ ವೃದ್ಧಿ.
ತುಲಾ:
ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿ ಬರುವ ಸಮಯ. ಆರೋಗ್ಯ ವೃದ್ಧಿ. ನೂತನ ಬಂಧುಮಿತ್ರರ ಸಮಾಗಮ. ಹೆಚ್ಚಿದ ಸ್ಥಾನ ಗೌರವಾದಿ ಸುಖ. ನಿರಂತರ ಧನಾಗಮನ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರಿಂದಲೂ ಸಹಾಯ ಸಹಕಾರ ಲಭ್ಯ.
ವೃಶ್ಚಿಕ:
ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ನಿರೀಕ್ಷಿತ ಗುರಿ ಸಾಧಿಸಿದ ತೃಪ್ತಿ ಸಮಾದಾನ. ಪಾಲುದಾರರಿಂದ ಸಹಕಾರ ಪ್ರೋತ್ಸಾಹ. ಅವಿವಾಹಿತರಿಗೆ ಉತ್ತಮ ನೆಂಟಸ್ಥಿಕೆ ಒದಗುವ ಕಾಲ. ಅನಿರೀಕ್ಷಿತ ಧನಾಗಮನ. ಎಲ್ಲರಲ್ಲೂ ಪ್ರೀತಿ ವಿಶ್ವಾಸ ಸಂಪಾದನೆ.
ಧನು:
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದಿರಿ. ಗುರುಹಿರಿಯರ ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಪ್ರಯಾಣ ಸಂಭವ.
ಮಕರ:
ಆರೋಗ್ಯ ಗಮನಿಸಿ. ಈ ದಿನ ಸಾಮಾನ್ಯ ಫಲದಾಯಕ. ಯಾವುದೇ ಸಾಹಸ ಪ್ರವೃತ್ತಿ ಸಲ್ಲದು. ತಾಳ್ಮೆ ಸಮಾದಾನದಿಂದ ಸಮಯ ಕಳೆಯಿರಿ. ವಿಶ್ರಾಂತಿ ಪಡೆಯಿರಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.
ಕುಂಭ:
ಆರೋಗ್ಯ ವೃದ್ಧಿ. ಮಕ್ಕಳ ನಿಮಿತ್ತ ಸಂತೋಷ ವೃದ್ಧಿ. ಹೆಚ್ಚಿದ ವರಮಾನ. ಬಂಧುಮಿತ್ರರಿಂದಲೂ, ಉದ್ಯೋಗ ವ್ಯವಹಾರದಿಂದಲೂ ಅನಿರೀಕ್ಷಿತ ಪ್ರಗತಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಧಾರ್ಮಿಕ ಕ್ಷೇತ್ರ ಸಂದರ್ಶನ.