Advertisement
ಉತ್ತಮ ಜನಮನ್ನಣೆ. ವಿಶ್ವಾಸ ಪಾತ್ರರಾಗುವಿರಿ. ಉತ್ತಮ ಧನಾರ್ಜನೆ ಇದ್ದರೂ ಧನವ್ಯಯಕ್ಕೆ ಹಲವು ದಾರಿ ಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಕಾರ್ಯ ಸಫಲತೆ ಆಗುವುದು.
Related Articles
Advertisement
ಆರೋಗ್ಯದಲ್ಲಿ ಗಮನಿಸಿ. ಅಧ್ಯಯನ ನಿಮಿತ್ತ ದೀರ್ಘ ಪ್ರಯಾಣ ಸಂಭವ. ಪಾಲುದಾರಿಕಾ ವ್ಯವಹಾರದಲ್ಲಿ ಉತ್ತಮ ಪ್ರಗತಿ. ನೂತನ ಮಿತ್ರರ ಸಮಾಗಮ. ಧನಾರ್ಜನೆಗೆ ಕೊರತೆ ಆಗದು. ದಾಂಪತ್ಯ ತೃಪ್ತಿದಾಯಕ.
ಕಟಕ:
ಅತಿಯಾದ ಆತ್ಮವಿಶ್ವಾಸ ಸಲ್ಲದು. ಮಾತನಾಡುವಾಗ ಎಚ್ಚರ ವಹಿಸಿ. ಧಾರ್ಮಿಕ ವಿಚಾರದಲ್ಲಿ ಭಕ್ತಿ ಶ್ರದ್ಧೆ ಕೊರತೆಯಾಗದಂತೆ ಕಾರ್ಯ ನಿರ್ವಹಿಸಿ. ಧನಾರ್ಜನೆ ಉತ್ತಮ. ಗುರುಹಿರಿಯರಲ್ಲಿ ಬೇಸರ ಮಾಡದಿರಿ.
ಸಿಂಹ:
ಅತಿಯಾದ ಕಾರ್ಯ ಒತ್ತಡದಿಂದ ದೇಹಾಯಾಸ ತೋರೀತು. ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಧನಾರ್ಜನೆ. ವಿದ್ಯಾರ್ಥಿಗಳು ಪರರನ್ನು ಅವಲಂಬಿಸದೇ ಸ್ವಂತ ಪರಿಶ್ರಮದಲ್ಲಿ ಕಾರ್ಯ ಸಾಧಿಸಿಕೊಳ್ಳಿ.
ಕನ್ಯಾ:
ಆರೋಗ್ಯದಲ್ಲಿ ವೃದ್ಧಿ. ಧಾರ್ಮಿಕ ಚಟುವಟಿಕೆಗಳಿಗಾಗಿ ಪ್ರಯಾಣ ಸಂಭವ. ಧನಾರ್ಜನೆಗಿಂತಲೂ ಅಧಿಕ ವ್ಯಯದ ಪರಿಸ್ಥಿತಿ. ಉದ್ಯೋಗ ವ್ಯವಹಾರದಲ್ಲಿ ಸಮಾಧಾನ ತೃಪ್ತಿ. ಪಾಲುದಾರಿಕಾ ಕ್ಷೇತ್ರದವರಿಗೆ ಸದವಕಾಶ.
ತುಲಾ:
ದೂರದ ವ್ಯವಹಾರಗಳಲ್ಲಿ ಪ್ರಗತಿ. ಧನಾಗಮನದ ನಿರೀಕ್ಷೆ. ವಿಳಂಬತೆಯಿಂದ ಪ್ರಾಪ್ತಿ. ಹಣಕಾಸಿ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಬಂಧುಮಿತ್ರರ ಜವಾಬ್ದಾರಿ. ಗುರುಹಿರಿಯರ ಸಹಕಾರ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಶ್ರೇಯಸ್ಸು.
ವೃಶ್ಚಿಕ:
ದೂರ ಪ್ರಯಾಣ. ಬಹುಜನರ ಒಡನಾಟದಿಂದ ಸಂತೋಷ. ಹೆಚ್ಚಿದ ವರಮಾನ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಉತ್ತಮ ಬದಲಾವಣೆ. ಗುರುಹಿರಿಯರ ಪ್ರೀತಿ ಆಶೀರ್ವಾದ ಪ್ರಾಪ್ತಿ. ಗೃಹದಲ್ಲಿ ಸಂತಸದ ವಾತಾವರಣ.
ಧನು:
ಗುರುಹಿರಿಯರ ಬಗ್ಗೆ ಗಮನ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಹೆಚ್ಚಿದ ಜವಾಬ್ದಾರಿ. ದೈಹಿಕ ಆರೋಗ್ಯ ಸುದೃಢವಾಗಿದ್ದರೂ ಮಾನಸಿಕ ಚಿಂತೆ ತೋರಿಬಂದೀತು.
ಮಕರ:
ಸಮಯ ಸಂದರ್ಭಕ್ಕೆ ಸರಿಯಾಗಿ ವ್ಯವಹಾರ ಕುಶಲತೆ. ಹೆಚ್ಚಿದ ಧನಾಗಮ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಯಶಸ್ಸು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯ ಸುಖಕರ.
ಕುಂಭ:
ಆಸ್ತಿ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷಿತ ಫಲಿತಾಂಶ ಸಂಭವ. ಉತ್ತಮ ಧನಸಂಪತ್ತು ವೃದ್ಧಿ. ವಾಕ್‌ಚತುರತೆಯಿಂದ ಜನ ಮನ್ನಣೆ. ಬಂಧುಮಿತ್ರರ ಸಹಾಯ ಸಹಕಾರ. ಗೃಹದಲ್ಲಿ ಸಂತಸದ ಸಂಭ್ರಮ.
ಮೀನ:
ಹಠ ಮಾಡದೆ ವಿವೇಕದಿಂದ ಕಾರ್ಯ ಪ್ರವೃತ್ತರಾಗಿ ಯಶಸ್ಸುಗಳಿಸಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ದೇಹಾಯಾಸ ಆಗದಂತೆ ಎಚ್ಚರ ವಹಿಸಿ. ನಿರೀಕ್ಷಿತ ಧನಾಗಮನ. ದಾಂಪತ್ಯ ಸುಖಕರ. ಮಕ್ಕಳಿಂದ ಸಂತೋಷ, ತೃಪ್ತಿ. ಗುರುಹಿರಿಯರ ಬಗ್ಗೆ ಗೌರವದಿಂದ ನಡೆದುಕೊಳ್ಳಿ.