Advertisement
ದೈಹಿಕ ಆರೋಗ್ಯ ಉತ್ತಮ. ಉದ್ಯೋಗ ವ್ಯವಹಾರಗಳಲ್ಲಿ ದುಃಖ, ಮೋಸ, ವಂಚನೆ ಚರ್ಚೆ ಇತ್ಯಾದಿಗಳು ಆಗದಂತೆ ಎಚ್ಚರಿಕೆಯ ನಡೆ ಅಗತ್ಯ. ವಿಳಂಬದ ತಾಳ್ಮೆಯ ನಿರ್ಣಯದಿಂದ ಸುಖ ಫಲ ಒದಗೀತು.
Related Articles
Advertisement
ಆರೋಗ್ಯ ಗಮನಿಸಿ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ. ನಿರೀಕ್ಷಿತ ಸುಖ ಅನುಭವವಾದೀತು. ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಅಧ್ಯಯನಶೀಲರಿಗೆ ಹೆಚ್ಚಿದ ಮನ್ನಣೆ.
ಕರ್ಕ:
ಹಠ ಪ್ರವೃತ್ತಿಯಿಂದ ತೊಂದರೆ. ಅನಗತ್ಯ ವಿಚಾರಗಳಿಗೆ ಕಿವಿ ಕೊಡದಿರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆಸ್ತಿ ವಿಚಾರದಲ್ಲಿ ಮುನ್ನಡೆ ತೋರೀತು. ಹೆಚ್ಚಿನ ಪರಿಶ್ರಮದಿಂದ ಕೂಡಿದ ವ್ಯವಹಾರದಿಂದ ದೇಹಾಯಾಸ ಸಂಭವ.
ಸಿಂಹ:
ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿಖರತೆ. ಚುರುಕುತನ ಲೆಕ್ಕಾಚಾರ ಸ್ವಭಾವದಿಂದ ನಿರೀಕ್ಷಿತ ಸ್ಥಾನ ಅಧಿಕಾರ ಲಭ್ಯ. ಧನಾರ್ಜನೆ ಮಧ್ಯಮ. ಬಂಧುಮಿತ್ರರ ಸಹಕಾರ. ಹಿರಿಯರ ಆರೋಗ್ಯ ಗಮನಿಸಿ.
ಕನ್ಯಾ:
ಸಣ್ಣ ಪ್ರಯಾಣ ಸಂಭವ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಕಾಲ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಹಿರಿಯರ ಆರೋಗ್ಯ ಸುದೃಢ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ ಸಂತೋಷ.
ತುಲಾ:
ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ. ದೂರದ ಮಿತ್ರರ ಸಮಾಗಮ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಯೋಚಿಸಿದಂತೆ ಕಾರ್ಯ ಸಫಲತೆಯಿಂದ ಮನಃಸಂತೋಷ.
ವೃಶ್ಚಿಕ:
ಧೈರ್ಯ ಶೌರ್ಯದಿಂದ ಕೂಡಿದ ಕಾರ್ಯ ವೈಖರಿ. ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ. ನಿರೀಕ್ಷಿತ ಗೌರವಾನ್ವಿತ ಧನ ಸಂಪತ್ತು ವೃದ್ಧಿ. ಧಾರ್ಮಿಕ ಕ್ಷೇತ್ರ ಸಂದರ್ಶನ. ದೂರದ ಮಿತ್ರರ ಗುರುಹಿರಿಯರ ಸಹಕಾರ.
ಧನು:
ಸಂಸಾರದೊಂದಿಗೆ ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಧನ ಸಂಮೃದ್ಧಿ . ಯಶಸ್ಸು, ಸುಖ ಸಂತೋಷ. ಉತ್ತಮ ವಾಕ್‌ಚತುರತೆಯಿಂದ ಜನರಂಜನೆ. ಆಸ್ತಿ ವಿಚಾರದಲ್ಲಿ ಮುನ್ನಡೆ.
ಮಕರ:
ಉತ್ತಮ ಆರೋಗ್ಯ. ಬಂಧುಮಿತ್ರರ ಭೇಟಿ. ಗೃಹದಲ್ಲಿ ಸಂಭ್ರಮ. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು ಸಂತೋಷ. ಮಕ್ಕಳಿಂದ ಅನುರಾಗ ವೃದ್ಧಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ದಾಂಪತ್ಯ ತೃಪ್ತಿದಾಯಕ.
ಕುಂಭ:
ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಧೈರ್ಯ ಶೌರ್ಯದಿಂದ ಪ್ರಗತಿ. ನಾಯಕತ್ವ ಗುಣ ವೃದ್ಧಿ. ಅಧಿಕ ಧನಾರ್ಜನೆ.