Advertisement

ಜ್ಯೋತಿಷಿಗಳೇ ದೊಡ್ಡ ಭಯೋತ್ಪಾದಕರು: ಕುಂವೀ

04:33 PM Sep 11, 2017 | |

ರಾಯಚೂರು: ಮಾಧ್ಯಮಗಳಲ್ಲಿ ಬೆಳ್ಳಂಬೆಳಗ್ಗೆ ಬರುವಂಥ ಜ್ಯೋತಿಷಿಗಳು ದೇಶದ ದೊಡ್ಡ ಭಯೋತ್ಪಾದಕರು. ಸರ್ಕಾರ ಇಂಥ ಕಾರ್ಯಕ್ರಮಗಳನ್ನು ಮೊದಲು ನಿಷೇಧಿಸಲಿ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಆಗ್ರಹಿಸಿದರು.

Advertisement

ನಗರದ ಪಂ|ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆಯಿಂದ ರವಿವಾರ ಹಮ್ಮಿಕೊಂಡ
ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ, ಆದರ್ಶ ಶಿಕ್ಷಕರಿಗೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು
ಮಾತನಾಡಿದರು. ಮಾಧ್ಯಮಗಳು ಸಮಾಜಕ್ಕೆ ಅಪಾಯಕಾರಿ ಅಂಶಗಳನ್ನು ತೋರಿಸುತ್ತಿವೆ. ಸರ್ಕಾರ ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವ ಮೂಲಕ ಮೌಢ್ಯಾಚರಣೆಗಳಿಗೆ ಕಡಿವಾಣ ಹಾಕಬೇಕು ಎಂದರು.

ಮಠಗಳನ್ನು ಕಟ್ಟಿಕೊಂಡ ಗುರುಗಳು ಸಮಾಜಕ್ಕೆ ಬೇಕಿಲ್ಲ. ಮಠಗಳು ಅನುಯಾಯಿಗಳಲ್ಲಿ ಎಷ್ಟು ಜನರನ್ನು ಉದ್ಧಾರ
ಮಾಡಿವೆ. ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಳ್ಳದ, ಒಪ್ಪಿಕೊಳ್ಳದ ಮಠಗಳು, ಮಠಾಧಿಧೀಶರ ಅಗತ್ಯ ಸಮಾಜಕ್ಕಿಲ್ಲ.

ಎಷ್ಟು ಮಠಗಳಿಂದ ಸಮಾಜ ಉದ್ಧಾರವಾಗುತ್ತಿದೆ. ಶಿಕ್ಷಣಕ್ಕೆ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಯಾವ ಮಠಗಳು ನೆರವಾಗಿವೆ? ಕೊರಳಲ್ಲಿ ಚಿನ್ನದ ಸರ ಹಾಕಿ ಆಶೀರ್ವದಿಸಿದರೆ ಅಭಿವೃದ್ಧಿ ಆಗುವುದಿಲ್ಲ, ಲಿಂಗ ಕಟ್ಟಿ ಪಾದಪೂಜೆ ಮಾಡಿಸಿಕೊಳ್ಳುವ ಗುರುಗಳು ನಮಗೆ ಬೇಕಿಲ್ಲ ಎಂದರು.

ಚುನಾಯಿತ ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ಬಿಟ್ಟು ಡಾಲರ್ ಕಾಲೋನಿಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ
ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗುತ್ತಿದೆ. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖೀಸಿದ ಯಾವೊಂದು ಅಂಶಗಳು
ಜಾರಿಯಾಗುತ್ತಿಲ್ಲ ಎಂದರು. ಎಂಎಸ್‌ಐಎಲ್‌ ಅಧ್ಯಕ್ಷ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಕಾರ್ಯದರ್ಶಿ ವಸಂತಕುಮಾರ ಮಾತನಾಡಿದರು.

Advertisement

ಪ್ರಶಸ್ತಿ ಪ್ರದಾನ: ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ, ಸಮಾಜ ಸೇವಾರತ್ನ, ವರ್ಷದ ವ್ಯಕ್ತಿ, ಜನನಾಯಕ, ಉತ್ತಮ ಚಾಲಕ ಹಾಗೂ ವೈದ್ಯರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಶಾಸಕ ಡಾ|ಶಿವರಾಜ ಪಾಟೀಲ, ಜಿಪಂ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರ, ಡಾ| ಮನೋಹರ ವೈ.ಪತ್ತಾರ, ಎಂ. ಈರಣ್ಣ ಮಾನ್ವಿ, ಶರಣಪ್ಪಗೌಡ ಜಾಡಲದಿನ್ನಿ, ಮಹ್ಮದ್‌ ನಿಜಾಮುದ್ದೀನ್‌, ಕರೆಮ್ಮ ನಾಯಕ, ಇಲ್ಲೂರು ಗೋಪಾಲಯ್ಯ, ಗಿರಿಜಾ, ಗುಂಡಪ್ಪ, ವೀರಭದ್ರಪ್ಪ, ರಾಮಕೃಷ್ಣ, ಕಲಾ ಸಂಕುಲದ ಅಧ್ಯಕ್ಷೆ ರೇಖಾ ಬಡಿಗೇರ, ಮಾರುತಿ ಬಡಿಗೇರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next