Advertisement

ಛಾಯಾಚಿತ್ರಗಳಲ್ಲಿ ಯತಿ ಜೀವನ ದರ್ಶನ

06:39 PM May 18, 2019 | mahesh |

ವಿರಕ್ತ ಯತಿಗಳ ಬದುಕು ಸಾರ್ವಜನಿಕರಿಗೆ ನಿಗೂಢವೇ. ಕಠಿಣವ್ರತ ನಿಯಮಗಳ ಅನುಷ್ಠಾನದಿಂದಾಗಿ ಯತಿಗಳಿಗೆ ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಸುಪ್ರಸಿದ್ಧ ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ದಿನಚರಿಯ ಬಗ್ಗೆ , ಅವರ ಖಾಸಗಿ ಸಮಯದ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲವಿರುವುದು ಸಹಜ. ಅವರು ಚಕ್ರ ಕಟ್ಟಿಕೊಂಡವರಂತೆ ದೇಶ ಸುತ್ತುವವರು. ಸದಾ ಕ್ರಿಯಾಶೀಲರಾಗಿರುವ ಪೇಜಾವರ ಶ್ರೀಗಳ ಸ್ತಬ್ಧಚಿತ್ರ (ಸ್ಟಿಲ್ಸ್‌)ಗಳನ್ನು ಸಂಕಲನ ಮಾಡುವ ಅರ್ಥಪೂರ್ಣ ಪ್ರಯತ್ನ ಎ ಡೇ ವಿಥ್‌ ದ ಸೈಂಟ್‌: ದೆನ್‌ ಆ್ಯಂಡ್‌ ನೌ ಇತ್ತೀಚೆಗೆ ಬಿಡುಗಡೆಯಾಗಿದೆ.

Advertisement

ದೇವಪೂಜಾಕಾರ್ಯ ದಿಂದ ತೊಡಗಿ ಸಮಾಜಸೇವಾ ಕೈಂಕರ್ಯದವರೆಗಿನ ಅನೇಕ ಅಮೂಲ್ಯ ಕ್ಷಣಗಳು ಆ್ಯಸ್ಟ್ರೋ ಮೋಹನ್‌ ಅವರ ಈ ಛಾಯಾಚಿತ್ರಕೃತಿ ಯಲ್ಲಿ ಸಂಗ್ರಹಗೊಂಡಿವೆ. 2012ರಿಂದ 2018ರ ವರೆಗಿನ 16 ವರ್ಷಗಳ, ಅಂದರೆ ಪರ್ಯಾಯದಿಂದ ಪರ್ಯಾಯ ದವರೆಗಿನ “ಯತಿಯೊಬ್ಬರ ನಿಯತಿ’ದ ದರ್ಶನವನ್ನು ಸಮರ್ಥವಾಗಿ ಮಾಡಿಸುವಲ್ಲಿ ಛಾಯಾಚಿತ್ರಣದ ಕೌಶಲ
ಎದ್ದು ತೋರುತ್ತದೆ.

ಎ ಡೇ ವಿಥ್‌ ದ ಸೈಂಟ್‌: ದೆನ್‌ ಆ್ಯಂಡ್‌ ನೌ
ಲೇ.: ಆಸ್ಟ್ರೋಮೋಹನ್‌
ಪ್ರ.: ಭೂತರಾಜ ಪಬ್ಲಿಕೇಷನ್ಸ್‌ , ಹೇಮಾದ್ರಿ, ಡೋರ್‌ ನಂ. 1-1-99 ಬಿ (1), 1ನೇ ಮಹಡಿ, ಬಿಎಡ್‌ ಕಾಲೇಜು ರಸ್ತೆ, ಕುಂಜಿಬೆಟ್ಟು , ಉಡುಪಿ-576102 ಮೊಬೈಲ್‌: 9448104000
ಮೊದಲ ಮುದ್ರಣ: 2019 ಬೆಲೆ: ರೂ. 1000

ರಾಮ್

Advertisement

Udayavani is now on Telegram. Click here to join our channel and stay updated with the latest news.

Next