ಔರಾದ: ಬಂಜಾರಾ ಸಮಾಜದ ಧರ್ಮಗುರು,ಮಹಾತಪಸ್ವಿ ಡಾ| ರಾಮರಾವ್ ಮಹಾರಾಜ್ ಪೌರಾದೇವಿರವರ ಅಸ್ಥಿ ಪೂಜೆ ದರ್ಶನ, ಮಂದಿರದ ಶಂಕುಸ್ಥಾಪನೆ, ಗೋಮಾತಾ ಪೂಜೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಬುಧವಾರ ಔರಾದ ತಾಲೂಕಿನ ಘಮಸುಬಾಯಿ ತಾಂಡಾದಲ್ಲಿ ನಡೆದವು.
ಸಚಿವ ಪ್ರಭು ಚವ್ಹಾಣ ಮಾತನಾಡಿ, ರಾಮರಾವ್ ಮಹಾರಾಜರು ಸಂತ ಸೇವಾಲಾಲ್ ಮಹಾರಾಜರ ನಂತರದ ಬಂಜಾರಾ ಸಮುದಾಯದ ಏಕೈಕಧರ್ಮಗುರುವಾಗಿದ್ದರು. 10ನೇ ವಯಸ್ಸಿಗೆ ಸನ್ಯಾಸ ದೀಕ್ಷೆ ಸ್ವೀಕರಿಸಿದ ಶ್ರೀಗಳು ಅಂತಿಮ ದಿನದವರೆಗೂನಿರಾಹಾರಿ ಮತ್ತು ಮಹಾನ್ ತಪಸ್ವಿಯಾಗಿದ್ದರು. ನಾನು ಅವರ ಪರಮ ಭಕ್ತ. ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಿಂದಲೇ ರಾಜಕೀಯದಲ್ಲನನಗೆ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಮಹಾರಾಷ್ಟ್ರದ ಶಾಸಕ ತುಶಾರ್ ರಾಠೊಡ ಮಾತನಾಡಿ, ಬಂಜಾರಾ ಭಾಷೆಗೆ ಈಗಲೂ ಲಿಪಿಯಿಲ್ಲ.ಮಾತಿನ ಮೂಲಕವೇ ಸಂದೇಶ ನೀಡುತ್ತಿದ್ದರು. ಅವರ ಸಂದೇಶ ಮತ್ತು ಆಶೀರ್ವಾದದಿಂದ ಸಮುದಾಯದಜನರು ಪ್ರಗತಿ ಹೊಂದುವಂತಾಗಿದೆ ಎಂದರು.
ಮಹಾರಾಷ್ಟ್ರದ ಎಂಎಲ್‌ಸಿ ಹರಿಭವ್ ರಾಠೊಡ್‌ಮಾತನಾಡಿ, ಬಾಲಬ್ರಹ್ಮಚಾರಿ ಆಗಿದ್ದ ಮಹಾರಾಜರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರು. ಮುಖ್ಯವಾಗಿ ತಾಂಡಾಗಳಿಗೆ ಭೇಟಿ ನೀಡಿ, ಜನರನ್ನು ಸರಿದಾರಿಗೆ ತಂದರು. ಅವರ ಸದಾಶಯ ಮುಂದುವರಿಸಲು ಸಚಿವ ಚವ್ಹಾಣ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಮುಖಂಡ ಬಾಪುರಾವ್ ರಾಠೊಡಮಾತನಾಡಿದರು. ಮಾಜಿ ಶಾಸಕ ಸುಭಾಶಕಲ್ಲೂರ ಮಾತನಾಡಿ, ಮಹಾರಾಜರಿಗೆ ಬಂಜಾರ ಸಮುದಾಯವಷ್ಟೇ ಅಲ್ಲ ಇಡೀ ಮಾನವ ಕುಲವೇ ಅವರ ಭಕ್ತರಾಗಿದ್ದರು ಎಂದರು.
ಈ ವೇಳೆ ಬಾಬು ಹೊನ್ನಾನಾಯಕ್, ರಾಮಶೆಟ್ಟಿ ಪನ್ನಾಳೆ, ಕಾಶಿನಾಥ ಜಾಧವ್, ಗಿರೀಶ ಒಡೆಯರ್, ಮಾರುತಿ ಚವ್ಹಾಣ, ಮಾಣಿಕ ಚವ್ಹಾಣ, ಸುರೇಶ ಭೋಸ್ಲೆ, ಯಶೋಧಾ ರಾಠೊಡ್, ಬಸವರಾಜಪವಾರ್, ರಮೇಶ ದೇವಕತ್ತೆ, ವಸಂತ ಬಿರಾದಾರ, ಸಚಿನ್ ರಾಠೊಡ್ ಇದ್ದರು.
ಸಸಿ ನೆಡುವ ಕಾರ್ಯಕ್ರಮ : ಬೆಳಗ್ಗೆ ರಾಮರಾವ್ ಮಹಾರಾಜರ ಅಸ್ಥಿಪೂಜೆಮತ್ತು ದರ್ಶನ ಕಾರ್ಯಕ್ರಮ, ಬಳಿಕ ಗೋಮಾತಾ ಪೂಜೆ ನಡೆಯಿತು. ಅಲ್ಲದೇ ರಾಮರಾವ್ ಮಹಾರಾಜರ ಸ್ಮರಣಾರ್ಥ ಸಸಿನೆಡುವ ಕಾರ್ಯಕ್ರಮ ನಡೆಯಿತು. ರಾಮರಾವ್‌ಮಹಾರಾಜರ ಮಂದಿರದ ಭೂಮಿ ಪೂಜೆ ನಂತರ ಶ್ರದ್ಧಾಂಜಲಿ ಸಭೆ ನಡೆಯಿತು.