Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ವಿಚಾರವನ್ನು ತಮ್ಮ ಅಧಿಕಾರಕ್ಕಾಗಿ ಟೀಕಿಸುವುದು, ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಯಾವ ರಾಜಕಾರಣಿಯೂ ಮಾಡಬಾರದು. ಬೇರೆಯವರು ಬಂದು ನಮ್ಮ ಮನೆಗೆ ಬೀಗ ಹಾಕಿದರೆ ಸುಮ್ಮನಿರಬೇಕೆ? ದೇಶದ ವಿವಿಧ ಕಡೆಗಳಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನೆ ಕೂರಬೇಕೇ, ಬೇರೆಯವರು ನಮ್ಮ ಮನೆಗೆ ಬಂದು ನಮ್ಮನ್ನು ಹೊರಗೆ ಕಳುಹಿಸಿ ಬೀಗ ಹಾಕಿದರೆ ನಾವು ಸುಮ್ಮನಿರಬೇಕಾ ಎಂದು ಪ್ರಶ್ನಿಸಿದರು.
ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ 64 ವೀರಶೈವ ಮಠಗಳಿದ್ದವು. ಈಗ ಬೆರಳಣಿಕೆಯಷ್ಟು ಮಾತ್ರ ಮಠಗಳಿದ್ದು ಉಳಿದೆಲ್ಲವೂ ಬೇರೆಯವರ ಪಾಲಾಗಿವೆ. ಮಂಗಳೂರಿನ ಮಳಲಿ ಮಸೀದಿ, ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದ ಕುರಿತು ಮಾತನಾಡಿದ ಶ್ರೀಗಳು, ವಿವಾದಿತ ಮಳಲಿ ಮಸೀದಿ ಜಾಗದಲ್ಲಿ 1,500 ವರ್ಷಗಳ ಹಿಂದೆ ಶಿವ ಸಾನ್ನಿಧ್ಯ ಹಾಗೂ ಗುರುಮಠವಿತ್ತು ಎನ್ನುವ ಮಾಹಿತಿ ಇದೆ. ಸರಕಾರ ಮಧ್ಯಪ್ರವೇಶ ಮಾಡಿ ಪುರಾತತ್ವ ಇಲಾಖೆಯಿಂದ ಉತ್ಖನನ ಮಾಡಿಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದರು. ಮಂಗಳೂರಿನ ಚಿತ್ರ ಟಾಕೀಸ್ ಬಳಿ ಮಸೀದಿ ಇದೆ. ಅದರ ಎದುರು ಮುರ್ಗಿಮಠ ಕಾಂಪೌಂಡ್ ಇದೆ. ಇಲ್ಲಿಯೂ ಸಹ ಜಂಗಮ ಮಠ ಇತ್ತು ಎಂದು ಹೇಳಲಾಗುತ್ತಿದೆ. ಆದರೆ ದಾಖಲೆಗಳನ್ನು ತೆಗೆಯಬೇಕಿದೆ ಎಂದರು.