Advertisement

ಕೃಷಿ ಪರಿಕರ ಸೇವಾ ತೆರಿಗೆ ವಿನಾಯಿತಿಗೆ ಭರವಸೆ

12:01 PM Dec 16, 2021 | Team Udayavani |

ಕಲಬುರಗಿ: ಕೃಷಿ ಪರಿಕರಗಳ ಮೇಲಿನ ಸರಕು ಹಾಗೂ ಸೇವಾ ತೆರಿಗೆ ವಿನಾಯಿತಿ, ವರ್ತಕರಿಗೆ ರಸಗೊಬ್ಬರ ಮಾರಾಟ ಲಾಭಾಂಶ ಶೇ. 7ಕ್ಕೆ ಏರಿಸುವುದು, ಸರ್ಕಾರಿ ಸ್ವಾಮ್ಯದ ರಸಗೊಬ್ಬರ ಕಂಪನಿಗಳಾದ ರಾಷ್ಟ್ರೀಯ ಕೆಮಿಕಲ್ಸ್‌ ಮತ್ತು ಫ‌ರ್ಟಿಲೈಜರ್‌ಗಳಿಗೆ ಡಿಲರ್‌ ಶಿಪ್‌ ಕೊಡುವುದು ಸೇರಿದಂತೆ ಇತರ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗುವುದಾಗಿ ಕೇಂದ್ರದ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಭರವಸೆ ನೀಡಿದ್ದಾರೆ.

Advertisement

ಕಲಬುರಗಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಮನವಿ ಸ್ವೀಕರಿಸಿದ ಸಚಿವರು, ಕೀಟನಾಶಕಕ್ಕೆ ಶೇ. 18, ಲಘು ಪೋಷಕಾಂಶಗಳಿಗೆ, ಶೇ. 12ರಷ್ಟು ರಸಗೊಬ್ಬರಗಳಿಗೆ, ಶೇ.5ರಷ್ಟು ರೈತರ ಆದಾಯ ಹೆಚ್ಚಿಸಲು ವಿನಾಯಿತಿ ನೀಡಬೇಕೆಂದು ಹಾಗೂ ಬಿಲ್ಲುಗಳನ್ನು ಹಾಗೂ ದಾಸ್ತಾನು ಪುಸ್ತಕಗಳನ್ನು ಗಣಕೀಕೃತಗೊಳಿಸುವುದು ಸೇರಿದಂತೆ ಇತರ ಬೇಡಿಕೆಗಳಿಗೂ ಸ್ಪಂದಿಸುವುದಾಗಿ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದರು.

ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಬೇಡಿಕೆಗಳನ್ನು ನವದೆಹಲಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ತಳ್ಳಳ್ಳಿ, ಕಾರ್ಯದರ್ಶಿ ಚನ್ನಬಸಪ್ಪ ಸಿರಗೊಂಡ, ಕಲಬುರಗಿ ತಾಲೂಕು ಅಧ್ಯಕ್ಷ ಬಸವರಾಜ ಚಂದ್ರಕಾಂತ ಮಂಗಲಗಿ, ಜೇವರ್ಗಿ ತಾಲೂಕು ಗೌರವಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next