Advertisement
ವಿಟ್ಲ: ಕನ್ಯಾನ ಮತ್ತು ಕರೋಪಾಡಿ ಅವಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕನ್ಯಾನ ಹಾಲು ಉತ್ಪಾದಕರ ಸಹಕಾರ ಸಂಘವು 1986ರ ಜ. 21ರಂದು ನೋಂದಾಯಿಸಲ್ಪಟ್ಟು, ಫೆ. 10ರಂದು ಕನ್ಯಾನದಲ್ಲಿ ಉದ್ಘಾಟನೆಗೊಂಡಿತು. ಕನ್ಯಾನ ಗ್ರಾಮದ ಹೃದಯ ಭಾಗದ ಬಾಡಿಗೆ ಕಟ್ಟಡದಲ್ಲಿ 7-8 ಮಂದಿ ಸದಸ್ಯರಿದ್ದು, ಸುಮಾರು 10 ಲೀ. ಹಾಲು ಸಂಗ್ರಹದೊಂದಿಗೆ ಪ್ರಾರಂಭವಾಯಿತು. ಕೆಲವು ಸಮಯ ಗಳ ಬಳಿಕ ಕೆಳಗಿನಪೇಟೆಯ ಬಾಡಿಗೆ ಕಟ್ಟಡದಲ್ಲಿ ಹಾಲು ಖರೀದಿ ಆರಂಭವಾಯಿತು. 1993ರಲ್ಲಿ 5 ಸೆಂಟ್ಸ್ ಸ್ವಂತ ನಿವೇಶನದಲ್ಲಿ ಸುಮಾರು ಎರಡು ಲಕ್ಷ ರೂ. ವೆಚ್ಚದ ಸ್ವಂತ ಕಟ್ಟಡ ನಿರ್ಮಾಣವಾಯಿತು.
Related Articles
Advertisement
ಪಶುಗಳ ಕೃತಕ ಗರ್ಭಧಾರಣೆಕೃಷಿಕರ ಪಶುಗಳ ಕೃತಕ ಗರ್ಭಧಾರಣೆಯ ವಿಶೇಷ ತರಬೇತಿ ಪಡೆದ ಪಿ. ಗಣಪತಿ ಭಟ್ ಅವರು 1987ರಿಂದ ಈ ಎರಡು ಗ್ರಾಮಗಳ ಮತ್ತು ಕೇರಳ ಗಡಿಭಾಗಗಳಾದ ಜೋಡುಕಲ್ಲು, ಕುರುಡಪದವು ಇತ್ಯಾದಿ ಕಡೆಗಳಿಗೆ ತೆರಳಿ, ಪಶುಗಳ ಕೃತಕ ಗರ್ಭಧಾರಣೆಗೆ ಅವಶ್ಯವಿರುವ ಸೂಕ್ತ ವ್ಯವಸ್ಥೆಯನ್ನು ಮಾಡುತ್ತಲೇ ಬಂದಿದ್ದಾರೆ. ಇದು ಕೂಡಾ ಸಂಘದ ಅಭಿವೃದ್ಧಿಗೆ, ಊರಿನ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿದಂತಾಗಿದೆ. ತಾಲೂಕಿನ ಉತ್ತಮ ಸಂಘ
ಆರಂಭದಿಂದ ಇಂದಿನವರೆಗೆ ಸಂಘವು ಲಾಭವನ್ನು ದಾಖಲಿಸಿದ್ದು, ಸತತವಾಗಿ ಆಡಿಟ್ ರಿಪೋರ್ಟ್‌ನಲ್ಲಿ ಎ ವರ್ಗೀಕರಣ ಪಡೆದ ಹೆಗ್ಗಳಿಕೆಯನ್ನು ಹೊಂದಿದೆ. ಸಂಘಕ್ಕೆ ದ.ಕ. ಹಾಲು ಒಕ್ಕೂಟವು ತಾಲೂಕಿನ ಉತ್ತಮ ಸಂಘವೆಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸದಸ್ಯರಿಗೆ ನಿರಂತರವಾಗಿ ಡಿವಿಡೆಂಡ್ ವಿತರಿಸಿದ್ದು, ಶೇ. 9ರಿಂದ ಇದೀಗ ಶೇ. 17ಕ್ಕೇರಿಸಿದೆ. ಹಳ್ಳಿಪ್ರದೇಶಕ್ಕೆ ಹಾಲಿಗೆ ಬರಗಾಲವಿದ್ದಾಗ, ಕಡಿಮೆ ಹಾಲು ಸಂಗ್ರಹದೊಂದಿಗೆ ಆರಂಭವಾದ ಕನ್ಯಾನ ಹಾ.ಉ.ಸ. ಹಕಾರ ಸಂಘವು ಇಂದು 500 ಲೀ. ಸಂಗ್ರಹಿಸುತ್ತಿದೆ. 1986ರಲ್ಲಿ ಕನ್ಯಾನ-ಕರೋಪಾಡಿ ಗ್ರಾಮಗಳಲ್ಲಿ ಹಾಲು ಮಾರಾಟ ಕೇಂದ್ರಗಳಿರಲಿಲ್ಲ. ಹಳ್ಳಿಪ್ರದೇಶದ ಹಾಲಿನ ಸಮಸ್ಯೆಯನ್ನು ಪರಿಹರಿಸಿ, ಇದೀಗ ಯಥೇತ್ಛ ಹಾಲನ್ನು ಒದಗಿಸುವ ಸಂಘವಾಗಿ ಪ್ರಸಿದ್ಧಿಯನ್ನು ಪಡೆದಿದೆ.
– ಮಂಡ್ನೂರು ಗಣಪತಿ ಭಟ್, ಅಧ್ಯಕ್ಷರು ಮಾಜಿ ಅಧ್ಯಕ್ಷರು
ಎ. ಶಂಕರ ಭಟ್ ಪಂಜಜೆ, ಎ. ರಾಮಚಂದ್ರ ಭಟ್ ಅಂಗ್ರಿ, ಡಿ. ನಾರಾಯಣ ಭಟ್ ದೇಲಂತಬೆಟ್ಟು. -ಉದಯಶಂಕರ್ ನೀರ್ಪಾಜೆ