Advertisement

48 ಜನಪ್ರತಿನಿಧಿಗಳ ವಿರುದ್ಧ ಮಹಿಳಾ ದೌರ್ಜನ್ಯ ಕೇಸು

09:18 AM Apr 20, 2018 | Team Udayavani |

ಹೊಸದಿಲ್ಲಿ: ಜಗತ್ತಿನಾದ್ಯಂತ ಉನ್ನಾವ್‌ ಮತ್ತು ಕಥುವಾ ಅತ್ಯಾಚಾರ ಪ್ರಕರಣಗಳು ಪ್ರತಿಧ್ವನಿಸುತ್ತಿರುವಂತೆಯೇ, ಮಹಿಳಾ ದೌರ್ಜನ್ಯಕ್ಕೆ ಸಂಬಂಧಿಸಿದ ಕೇಸು ಹೊತ್ತ 48 ಮಂದಿ ರಾಜಕಾರಣಿಗಳು ನಮ್ಮ ಶಾಸನ ಸಭೆಗಳಲ್ಲಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಅಸೋಸಿಯೇಶನ್‌ ಆಫ್ ಡೆಮಾಕ್ರೆಟಿಕ್‌ ರಿಫಾರ್ಮ್ಸ್ ಸಿದ್ಧಪಡಿಸಿರುವ ವರದಿ ಅನ್ವಯ, 45 ಶಾಸಕರು ಮತ್ತು 3 ಸಂಸದರ ವಿರುದ್ಧ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪ್ರಕರಣ ದಾಖಲಾಗಿವೆ. ಒಟ್ಟು 1,580 ಸಂಸದರು ಮತ್ತು ಶಾಸಕರು ನಾಮಪತ್ರ ಸಲ್ಲಿಸುವಾಗ ನಮೂದಿಸಿದ್ದ ಕೇಸುಗಳನ್ನು ಪರಿಶೀಲಿಸಿದ ಬಳಿಕ ಈ ಅಂಶ ಬಯಲಾಗಿದೆ.  

Advertisement

ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಹೊತ್ತ ಪಕ್ಷಗಳಲ್ಲಿ ಬಿಜೆಪಿಗೇ ಮೊದಲ ಸ್ಥಾನವಿದೆ. ಬಿಜೆಪಿಯ ಒಟ್ಟು 12 ಮಂದಿ ಶಾಸಕ ಮತ್ತು ಸಂಸದರು ಇಂಥ ಆರೋಪ ಹೊತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ಶಿವಸೇನೆ(7), ಮೂರನೇ ಸ್ಥಾನದಲ್ಲಿ  ತೃಣಮೂಲ ಕಾಂಗ್ರೆಸ್‌(6), ನಾಲ್ಕರಲ್ಲಿ ತೆಲುಗು ದೇಶಂ (5), ಕಾಂಗ್ರೆಸ್‌(4)ಐದನೇ ಸ್ಥಾನದಲ್ಲಿದೆ. ಅವರ ವಿರುದ್ಧ  ಮಹಿಳೆ ಮೇಲೆ ಹಲ್ಲೆ, ಅಪಹರಣ, ಬಲವಂತ ವಿವಾಹ, ಅತ್ಯಾಚಾರ, ಕೌಟುಂಬಿಕ ಹಿಂಸೆ, ಮಾನವ ಕಳ್ಳಸಾಗಾಣಿಕೆ  ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದಿಂದ ಒಬ್ಬರು: ಭಟ್ಕಳದ ಪಕ್ಷೇತರ ಶಾಸಕ ಮಾಂಕಾಳ, ವೈದ್ಯ ಮಹಿಳೆ ಮೇಲೆ ಹಲ್ಲೆ ಸಂಬಂಧ ಕೇಸು ದಾಖಲಾಗಿದೆ. ಇವರನ್ನು ಬಿಟ್ಟರೆ ಬೇರಾವ ಜನಪ್ರತಿನಿಧಿಗಳ ಮೇಲೂ ಮಹಿಳಾ ದೌರ್ಜನ್ಯ ಕೇಸು ದಾಖಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next