Advertisement
ಸಹಕಾರ ರಂಗದಲ್ಲಿ ಅಜರಾ ಮರರಾಗಿರುವ ಮೊಳಹಳ್ಳಿ ಶಿವ ರಾಯರು 1880ರ ಆಗಸ್ಟ್ 4ರಂದು ಪುತ್ತೂರಿನಲ್ಲಿ ಜನಿಸಿ ದರು. ರಂಗಪ್ಪಯ್ಯ ಹಾಗೂಮೂಕಾಂಬಿಕಾ ದಂಪತಿ ಇವರ ತಂದೆ ತಾಯಿ. ವೃತ್ತಿಯಲ್ಲಿ ವಕೀಲರಾಗಿದ್ದ ಶಿವರಾಯರು ಗಳಿಕೆಯ ಹಿಂದೆ ಹೋ ಗದೆ ಬಡ ರೈತರ ಉದ್ಧಾರದ ಕಡೆಗೆ ಹೆಚ್ಚು ಆಕರ್ಷಿತರಾದರು. ಸಹಕಾರ ರಂಗವೊಂದನ್ನು ಸಂಸ್ಥಾಪಿಸಿ ಬಡ ರೈತರನ್ನು ಪೋಷಿಸುವ ಕೈಂಕರ್ಯಕ್ಕೆ ಮುಂದಾದರು. ದೇಶದಲ್ಲಿ ಸಹಕಾರ ಆಂದೋಲನ 1904ರ ಮಾರ್ಚ್ 23ರಂದು ಕಾಯ್ದೆ ರೂಪದಲ್ಲಿ ಜಾರಿಗೆ ಬಂದಾಗ ಶಿವರಾಯರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಆಂದೋಲನದ ನೇತೃತ್ವ ವಹಿಸಿದ್ದರು.
Related Articles
Advertisement
ಜೀವಪರ ಕಾಳಜಿ: ಮೊಳಹಳ್ಳಿ ಶಿವರಾ ಯರ ಜೀವಪರ ಕಾಳಜಿಯಿಂದಾಗಿ ಹಲವಾರು ಸಹಕಾರ ಸಂಘಗಳು ಉದಯವಾಗಿವೆ. ಎರಡನೇ ಮಹಾ ಯುದ್ಧ ಕಾಲದಲ್ಲಿ ಜಿಲ್ಲಾದ್ಯಂತ ತಲೆ ದೋರಿದ ಆಹಾರ ಧಾನ್ಯದ ಕೊರತೆ ಹೋಗಲಾಡಿಸಲು ಶಿವರಾಯರು ದಕ್ಷಿಣ ಕನ್ನಡ ಜಿಲ್ಲಾ ಹೋಲ್ ಸೇಲ್ ಸ್ಟೋರ್ಸ್ ಸಂಘವನ್ನು ಸ್ಥಾಪಿಸಿ, ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಡಿಪೋ ತೆರೆದು ಆಹಾರ ಧಾನ್ಯ ಸಂಗ್ರಹಿಸಿ ಅದರ ಕ್ರಮಬದ್ಧ ವಿತರಣೆಯಿಂದ ಸಾರ್ವಜನಿಕರ ಮನಗೆದ್ದಿದ್ದರು. 1936ರಲ್ಲಿ ಪುತ್ತೂರು ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕ್ ಸ್ಥಾಪ ನೆಗೆ ಕಾರಣರಾದ ಶಿವರಾಯರು ಇದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ದ್ದರು. ದ್ರಾವಿಡ ಬ್ರಾಹ್ಮಣ ಸಹಕಾರಿ ಹಾಸ್ಟೆಲ್ ಸಂಘ, ಧಾನ್ಯದ ಬ್ಯಾಂಕ್, ಮಹಿಳೆಯರ ಕೈಗಾರಿಕಾ ಸಂಘ, ಬಿಲ್ಡಿಂ ಗ್ ಸೊಸೈಟಿ ಮೊದಲಾದ ಸಹ ಕಾರಿ ಸಂಘಗಳನ್ನು ಪುತ್ತೂರಿನಲ್ಲಿ ಸ್ಥಾಪಿಸಿ ದ್ದರು. ಕೃಷಿಕರು ಉತ್ಪಾದಿಸಿದ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಇಲ್ಲದೆ ಸಂಕಷ್ಟ ಸ್ಥಿತಿ ಯಲ್ಲಿದ್ದಾಗ 1919ರಲ್ಲಿ ಪುತ್ತೂರಿನಲ್ಲಿ “ಕೃಷಿಕರ ಸಹಕಾರಿ ಭಂಡಸಾಲೆ” ಸಂಘ ಸ್ಥಾಪಿ ಸಿದರು. ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯುವಂತೆ ಈ ಸಂಘವು ಶ್ರಮಿಸಿತು. ಹೀಗೆ ಹಲವಾರು ಸಹಕಾರ ಸಂಘಗಳ ಸ್ಥಾಪನೆಗೆ ಶಿವರಾಯರು ಕಾರಣರಾಗಿದ್ದರು.
ಮೊಳಹಳ್ಳಿ ಶಿವರಾಯರು ಮುಖ್ಯ ವಾಗಿ ಸಹಕಾರ ರಂಗದ ಮೂಲಕ ಬಡ ವರ್ಗದ ಜನರ ಶ್ರೇಯೋಭಿವೃದ್ದಿಯನ್ನು ಬಯಸಿ, ಬಡವರ ಹಸಿವು ನೀಗಿಸಿದ, ಜೀವ ಉಳಿಸಿದ ಮಹಾನುಭಾವರು. ಬದುಕಿನುದ್ದಕ್ಕೂ ಸಹಕಾರ ತತ್ವವನ್ನೇ ಉಸಿರಾಡುತ್ತಾ ಬಂದ ಮೊಳಹಳ್ಳಿ ಶಿವರಾ ಯರು ತನ್ನ 87 ವರ್ಷಗಳ ಸಾರ್ಥಕ ಬದುಕಿನಲ್ಲಿ 58 ವರ್ಷಗಳನ್ನು ಸಹಕಾರ ಕ್ಷೇತ್ರಕ್ಕೆ ಮೀಸಲಿರಿಸಿದ್ದರು. 1967ರ ಜುಲೈ 4ರಂದು ಕೀರ್ತಿಶೇಷರಾದ ಶಿವರಾಯರು ಬದುಕಿನ ತತ್ವವನ್ನು ಬಿತ್ತಿ ಶಾಶ್ವತವಾಗಿದ್ದಾರೆ. ವ್ಯಕ್ತಿಯೊಬ್ಬ ಶಕ್ತಿಯಾಗುವ ಬಗೆಯನ್ನು ಬಿತ್ತರಿಸಿದ ಮೊಳಹಳ್ಳಿ ಶಿವರಾಯರು ಇಂದು ಕೂಡ ಸಹಕಾರಿಗಳೆಲ್ಲರ ಮನದಲ್ಲಿ ರಾರಾಜಿಸುತ್ತಾ ಅನುಕ್ಷಣವೂ ಸ್ಮರಣೆಗೆ ಪಾತ್ರರಾಗಿದ್ದಾರೆ.
ಎಸ್. ಜಗದೀಶ್ಚಂದ್ರ ಅಂಚನ್, ಸೂಟರ್‌ಪೇಟೆ