ನೆಲಮಂಗಲ: ಕೊರೊನಾ ಸಮಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ವತಿಯಿಂದ ಸೋಂಕಿತರ ಜೀವ ರಕ್ಷಣೆಗೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ ವೆಂಟಿಲೇಟರ್ ನೀಡಿರುವುದು ಉತ್ತಮ ಕಾರ್ಯ ಎಂದು ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ತಿಳಿಸಿದರು.
ನಗರದ ಟಿಬೆಟಿಯನ್ ಹಾಸ್ಟೆಲ್ನಲ್ಲಿನ ಕೋವಿಡ್ ಕೇರ್ ಸೆಂಟರ್ನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ ವೆಂಟಿಲೇಟರ್ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೊನಾ 2ನೇ ಅಲೆಯಲ್ಲಿ ಬಹಳಷ್ಟು ಸೋಕಿತರು ಆಕ್ಸಿಜನ್ ಸಮಸ್ಯೆಯಿಂದ ನರಳಾಡುವ ಪರಿಸ್ಥಿತಿ ಎದುರಾಗಿತ್ತು. ಆದರೆ, ಪ್ರಸ್ತುತ ನಮ್ಮ ತಾಲೂಕಿನಲ್ಲಿ ಬೆಡ್ ವ್ಯವಸ್ಥೆಗಳು ಮಾಡಲಾಗುತ್ತಿದ್ದು, ಜಿಲ್ಲಾಧಿಕಾರಿಯಿಂದ 40 ಆಕ್ಸಿಜನ್ ಕಾನ್ಸನ್ ಟ್ರೇಟರ್ ನೀಡಿದರೆ ಧರ್ಮಸ್ಥಳದಿಂದ 10 ಆಕ್ಸಿಜನ್ ಕಾನ್ಸನ್ಟ್ರೇಟರ್ ನೀಡಿದ್ದಾರೆ.
ನಾನೂ ಇನ್ನೆರಡು ದಿನದಲ್ಲಿ 60 ಆಕ್ಸಿಜನ್ ಕಾನ್ಸನ್ಟ್ರೇಟರ್ ನೀಡಲಿದ್ದು, ತಾಲೂಕಿನ ಪ್ರತಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ 5ಆಕ್ಸಿಜನ್ ಕಾನ್ಸನ್ಟ್ರೇಟರ್ ತಲುಪಿಸಲಾಗುತ್ತ ದೆ ಎಂದರು. ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಮಸ್ವಾಮಿ ಮಾತನಾಡಿ, ಯೋಜನೆಯಿಂದ ಪ್ರಥಮ ಕಂತಿನಲ್ಲಿ 300 ಆಕ್ಸಿಜನ್ ಕಾನ್ಸನ್ಟ್ರೇಟರ್ ಮತ್ತು 20ವೆಂಟಿಲೇಟರ್ಗಳನ್ನು ನೀಡಲಾಗಿದೆ.
ನೆಲಮಂಗಲ ತಾಲೂಕಿಗೆ ಹೆಚ್ಚಿನ ಸೌಲಭ್ಯದ ಅನಿವಾರ್ಯತೆಯಿಂದ 10 ಆಕ್ಸಿಜನ್ ಕಾನ್ಸನ್ಟ್ರೇಟರ್ ಹಾಗೂ 2 ವೆಂಟಿಲೇಟರ್ ನೀಡಲಾಗಿದ್ದು, ನಾವು ನೀಡುವುದು ದೊಡ್ಡದಲ್ಲ. ಜನರಿಗೆ ಅನುಕೂಲವಾಗ ಬೇಕಾಗಿರುವುದು ಬಹಳಮುಖ್ಯ, ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಸದ್ಬಳಕೆ ಮಾಡಿಕೊಳ್ಳಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಇಒ ಡಾ.ಎಲ್ಎಚ್ ಮಂಜುನಾಥ್, ತಹಸೀಲ್ದಾರ್ ಕೆ.ಮಂಜುನಾಥ್, ಇಒ ಮೋಹನ್ಕುಮಾರ್, ಟಿಎಚ್ಒ ಡಾ.ಹರೀಶ್, ಜನಜಾಗೃತಿ ವೇದಿಕೆ ವೀಣಾ ರಮೇಶ್, ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ತಾಪಂ ಸಹಾಯಕ ನಿರ್ದೇಶಕ ಪದ್ಮನಾಭ್, ಮುಖಂಡರಾದ ಕೃಷ್ಣಪ್ಪ, ಟ್ರಸ್ಟ್ ಅಧಿಕಾರಿಗಳಾದ ಗಣೇಶ್, ಪಾರ್ವತಿ ಇತರರಿದ್ದರು.