Advertisement

ವರ್ತಕರಿಗೆ-ಕಲಾವಿದರಿಗೆ ನೆರವು

05:27 PM Mar 17, 2020 | Team Udayavani |

ಶಿರಸಿ: ಮಾರಿಜಾತ್ರೆಯಲ್ಲಿ ಹರಾಜಿನಲ್ಲಿ ಪಾಲ್ಗೊಂಡು ಅಂಗಡಿ ಇಟ್ಟುಕೊಂಡಿದ್ದ ವರ್ತಕರಿಗೆ ಕಲಾವಿದರಿಗೆ ಆರು ದಿನ ಮೊದಲೇ ಕೊರೊನಾ ತಡೆಗಟ್ಟಲು ಸರಕಾರದ ಆದೇಶದ ಪ್ರಕಾರ ತೆರವುಗೊಳಿಸಬೇಕಾದ್ದ ಅನಿವಾರ್ಯತೆ ಹಿನ್ನೆಲೆಯಲ್ಲಿ ಮಾರಿಕಾಂಬಾ ದೇವಸ್ಥಾನ ಮಾನವೀಯ ನೆಲೆಯಲ್ಲಿ ಎರಡು ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ದೇವಸ್ಥಾನ ಅಧ್ಯಕ್ಷ ಡಾ| ವೆಂಕಟೇಶ ನಾಯ್ಕ ತಿಳಿಸಿದ್ದಾರೆ.

Advertisement

ಇದೇ ಪ್ರಥಮ ಬಾರಿಗೆ ಜಾತ್ರೆ ಮುಗಿದು, ಯುಗಾದಿ ತನಕ ಪ್ರಸಾದ ಭೋಜನ ವ್ಯವಸ್ಥೆ ಇರದೇ ಇದ್ದರೂ ಶ್ರಮಿಕರಿಗೆ ಊಟೋಪಚಾರದ ಸಮಸ್ಯೆ ಆಗಬಾರದು ಎಂದು ಮಧ್ಯಾಹ್ನ ಹಾಗೂ ರಾತ್ರಿ ಟೋಕನ್‌ ಪಡೆದು ಊಟ ಮಾಡಬಹುದಾದ ಅವಕಾಶ ಕಲ್ಪಿಸಿದೆ. ಕೊರೊನಾ ವೈರಸ್‌ ತಡೆಯುವ ದೃಷ್ಟಿಯಿಂದ ಸರಕಾರ ಜಾತ್ರೆ, ಸಮಾರಂಭ ಸ್ಥಗಿತಗೊಳಿಸಲು ಆದೇಶಿಸಿದ್ದರಿಂದ ವ್ಯಾಪಾರಿಗಳು, ನಾಟಕ ಕಂಪನಿ, ಸರ್ಕಸ್‌ ಕಂಪನಿಯವರು ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುವ ಹಾಗೂ ಪರದಾಡುವುದನ್ನು ಮನಗಂಡು ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಪೂರ್ವ ನಿಗದಿಯಂತೆ 18ರ ಬದಲು 6 ದಿನ ಮೊದಲೇ ಎಲ್ಲ ಚಟುವಟಿಕೆ ಸ್ಥಗಿತಗೊಳಿಸಿದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಬೇಕಾದ ಜವಾಬ್ದಾರಿ ಧರ್ಮದರ್ಶಿ ಮಂಡಳಿಯದ್ದೆಂದು ಭಾವಿಸಲಾಗಿದೆ. ಈಗಾಗಲೇ ಟೆಂಡರ್‌ ಮೂಲಕ ಪ್ಲಾಟ ಪಡೆದ ಬೀದಿ ವ್ಯಾಪಾರಿಗಳು ತಮಗೆ ಹಣ ಮರಳಿ ಹಿಂದಿರುಗಿಸುವಂತೆ ವಿನಂತಿಸಿದ್ದು, ಕಲಾವಿದರು, ವಿವಿಧ ಮನರಂಜನಾ ಕಂಪನಿಗಳ ಕಲಾವಿದರು ಹಾಗೂ ಕೂಲಿ ಕಾರ್ಮಿಕರು ಊಟ ಉಪಹಾರಕ್ಕೆ ದಿನಸಿಗಳನ್ನು ಪೂರೈಸುವಂತೆ ಕೋರಿದ್ದಾರೆ. ಈ ಎಲ್ಲಾ ವಿಷಯಗಳನ್ನು ಪರಿಶೀಲಿಸಲಾಗಿ ತೀರಾ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವು ನೀಡಬೇಕಾದ್ದು ಕರ್ತವ್ಯ ಎಂದು ತೀರ್ಮಾನಿಸಿ ಧರ್ಮದರ್ಶಿಗಳು, ಬಾಬುದಾರರು, ಅರ್ಚಕರು ಹಾಗೂ ಸಿಬ್ಬಂದಿ ಸೇರಿ ಚರ್ಚಿಸಿ ಟೆಂಡರ್‌ ಮೂಲಕ ದೇವಸ್ಥಾನಕ್ಕೆ ಭರಿಸಿದ ಮೊತ್ತದಲ್ಲಿ ಶೇ.10 ರಷ್ಟನ್ನು ಜಿಎಸ್‌ಟಿ ಸಹಿತ ಚೆಕ್‌ ಮೂಲಕ ನೀಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next