Advertisement
ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಶ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯೆ ಪಂಕಜ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಸಂಜೀವಿನಿ ಅಣಬೆ ಘಟಕಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವೀಕ್ಷಿಸಿದ ಅವರು, ಮಹಿಳೆಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಣಬೆ ಬೇಸಾಯವನ್ನು ಮತ್ತಷ್ಟು ವೃದ್ಧಿಗೊಳಿಸಬೇಕು ಎಂದು ತಿಳಿಸಿದರು.
Related Articles
Advertisement
ಸಹಕಾರ, ಮಾಹಿತಿ: ಸರ್ಕಾರ ನಿರಂತರ ಸಹಕಾರ ನೀಡುತ್ತದೆ. ಬೇಸಾಯ ಮಾಡಲು ಮುಂದೆ ಬರುವ ಮಹಿಳೆಯರಿಗೆ ತರಬೇತಿ ಯನ್ನೂ ನೀಡಲಾಗುವುದು. ಅವರು ಬೆಳೆದ ಅಣಬೆಯನ್ನು ಖರೀದಿಸಲು ಮಾರು ಕಟ್ಟೆಯ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗು ವುದು. ಇದಕ್ಕೆ ಸ್ವಸಹಾಯ ಸಂಘದ ಮಹಿಳೆಯರು ಮತ್ತು ಎನ್‌ಜಿಒಗಳು ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಇದೊಂದು ಹೊಸ ಪ್ರಯತ್ನ ವಾಗಿದೆ. ಗ್ರಾಮಸ್ಥರು ಇದರ ಬಗ್ಗೆ ಹೆಚ್ಚು ಮಾಹಿತಿ ಪಡೆದು ಕೊಂಡು, ಅಣಬೆ ಬೇಸಾಯಕ್ಕೆ ಮುಂದಾಗ ಬೇಕೆಂದರು.
ಸರ್ಕಾರ ಸ್ವಸಹಾಯ ಸಂಘಗಳಿಗೆ ನೀಡುವ ಸಾಲ ಸೌಲಭ್ಯದ ಮಾದರಿಯಲ್ಲೇ ಅಣಬೆ ಬೇಸಾಯಕ್ಕೆ ಸಾಲ ಮಂಜೂರು ಮಾಡಲಾಗಿದ್ದು, ಪ್ರತಿವಾರ ಸ್ವಸಹಾಯ ಸಂಘಗಳಿಗೆ ಕಟ್ಟುವ ರೀತಿಯಲ್ಲೇ ಸಾಲವನ್ನು ಪಾವತಿಸಲು ಅವಕಾಶವಿರುತ್ತದೆ. ಇದರ ಬಗ್ಗೆ ಸೂಕ್ತ ಅರಿವು ಮೂಡಿಸುವ ಸಲುವಾಗಿ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಸ್ವಸಹಾಯ ಸಂಘದ ಮಹಿಳೆಯರಿಗೆ ಮಾಹಿತಿ ನೀಡುವು ದಾಗಿ ಹೇಳಿದರು.
ಭೇಟಿಯ ಸಂದರ್ಭದಲ್ಲಿ ಜಿಪಂ ಸಹಾಯಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹನುಮರಾಯಪ್ಪ, ಸಿದ್ದಯ್ಯನ ಪುರ ಗ್ರಾಪಂ ಅಧ್ಯಕ್ಷೆ ಶಶಿಕುಮಾರಿ, ಇಒ ಉಮೇಶ್, ವ್ಯವಸ್ಥಾಪಕ ಶಂಕರ್, ಯೋಜನಾಧಿಕಾರಿ ಲಿಂಗರಾಜು, ಸಿದ್ದಯ್ಯನಪುರ ಗ್ರಾಪಂ ಪಿಡಿಒ ಸೌಭಾಗ್ಯ ಮತ್ತು ವಿವಿಧ ಎನ್‌ಜಿಒಗಳು, ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.