ಮೈಸೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವ ಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆಯಿಂದ ತಲಾ 3 ಸಾವಿರ ರೂ. ಕೊಡುತ್ತಿದ್ದೇವೆ. ಇದಕ್ಕಾಗಿ ಒಟ್ಟು 12 ಕೋಟಿ 37 ಲಕ್ಷ ರೂ. ವೆಚ್ಚವಾಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಎಂ.ಸಿ.ಡಿ. ಸಿ.ಸಿ.ಬ್ಯಾಂಕ್ ಮತ್ತು ಮೈಮುಲ್‌ನಿಂದ ನಡೆದ ಆಶಾ ಕಾರ್ಯಕರ್ತೆ ಯರಿಗೆ ಚೆಕ್ ಮತ್ತು ಆಹಾರ ಕಿಟ್ ವಿತರಣೆ ಕಾರ್ಯಕ್ರಮ ದಲ್ಲಿ ಸಾಂಕೇತಿಕವಾಗಿ 180 ಮಂದಿ ಆಶಾ ಕಾರ್ಯಕರ್ತೆಯರಿಗೆ ಚೆಕ್ ವಿತರಿಸಿ ಮಾತನಾಡಿದರು. ಸಿಎಂ ಕೊರೊನಾ ವಿರುದಟಛಿ ಹೋರಾಡಿದ ರಾಜ್ಯದ 40,500 ಆಶಾ ಕಾರ್ಯಕರ್ತರಿಗೆ ಅನು ಕೂಲ ಮಾಡುವ ಬಗ್ಗೆ ಸಹಕಾರ ಇಲಾ ಖೆ ಯಿಂದ ಹಣ ಭರಿಸಲು ಸಾಧ್ಯವೇ ಎಂದು ಕೇಳಿದರು.
ಅದಕ್ಕೆ ಒಪ್ಪಿಗೆ ಸೂಚಿಸಿದ್ದೆ. ಈ ಕುರಿತು ಶುಕ್ರವಾರ ಸಿಎಂ ಸಹಾಯ ಧನದ ಬಗ್ಗೆ ಘೋಷಿಸಿದರು. ಅದರಂತೆ, ಈ ಕಾರ್ಯಕ್ರಮಕ್ಕೆ ದೇಶದಲ್ಲೇ ಮಾದರಿ ಜಿಲ್ಲೆಯಾಗಿ ಕೊರೊನಾ ಮುಕ್ತವಾದ ಮೈಸೂರಿನಲ್ಲೇ ಚಾಲನೆ ನೀಡಬೇಕು ಎಂದು, ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಚಾಲನೆ ನೀಡಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದರು.
35 ಲಕ್ಷ ರೂ. ವಿತರಣೆ: ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಮೈಸೂರು ಜಿಲ್ಲೆ ಸಹಕಾರ ಹಾಲು ಒಕ್ಕೂಟದಿಂದ ಜಿಲ್ಲೆಯ ಆಶಾ ಕಾರ್ಯ ಕರ್ತೆ ಯರಿಗೆ 35 ಲಕ್ಷ ರೂ. ಸಹಾಯಧನವನ್ನು ಸಚಿವರು ವಿತರಿಸಿದರು.
ಕೊರೊನಾ ಮುಕ್ತಕ್ಕೆ ಶ್ರಮಿಸಿದ ಡೀಸಿ ಅಭಿ ರಾಮ್ ಜಿ.ಶಂಕರ್, ಎಸ್‌ಪಿ ರಿಷ್ಯಂತ್, ಡಿಸಿಪಿ ಪ್ರಕಾಶ್ ಗೌಡ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಮುಡಾ ಆಯುಕ್ತ ನಟೇಶ್, ಡಿಎಚ್‌ಒ ಡಾ.ವೆಂಕ ಟೇಶ್ ಹಾಗೂ ಆಶಾಕಾರ್ಯಕರ್ತೆಯರಿಗೆ ಭಾರತೀಯ ಸಂವಿಧಾನದ ಪ್ರತಿ ನೀಡಿ, ಎಲ್ಲರಿಗೂ ಹೂಮಳೆ ಸುರಿಯುವ ಮೂಲಕ ಅಭಿನಂದಿಸ ಲಾಯಿತು. ಆಯುಷ್ ಇಲಾಖೆಯಿಂದ ಆಶಾ ಕಾರ್ಯಕರ್ತೆಯರಿಗೆ ಚವನ ಪ್ರಾಶ ವಿತರಿಸಲಾಯಿತು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಬಿಜೆಪಿ ಮುಖಂಡ ಎಚ್.ವಿ.ರಾಜೀವ್ ಇದ್ದರು.
ಸರ್ಕಾರ ಮುಕ್ತ ಅವಕಾಶ ನೀಡಿತ್ತು: ಕೊರೊನಾ ಹೋರಾಟದಲ್ಲಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಮುಕ್ತ ಅವಕಾಶ ನೀಡಿತ್ತು, ನಾವು ಏನೇ ಮಾಡಬೇಕಾದರೂ ಒಂದು ಬಾರಿ ಹೇಳಿದರೆ ಸಾಕು, ಪ್ರಶ್ನಿಸದೇ ಅವಕಾಶ ಕೊಡುತ್ತಿದ್ದರು, ಈ ಮುಕ್ತ ಅವಕಾಶವೇ ಕೊರೊನಾ ಗೆಲ್ಲಲು ಪ್ರಮುಖ ಕಾರಣವಾಯಿತು. ಹಾಗಾಗಿ, ಸರ್ಕಾರಕ್ಕೆ ಡೀಸಿ ಅಭಿರಾಮ್ ಜಿ.ಶಂಕರ್ ಧನ್ಯವಾದಗಳನ್ನು ಅರ್ಪಿಸಿದರು.