ಕನಕಪುರ: ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯಸಂಪರ್ಕಿತರನ್ನು ಪತ್ತೆಹಚ್ಚುವ ಹೊಣೆಯನ್ನು ತಾಲೂಕುಮಟ್ಟದ ಅಧಿಕಾರಿಗಳಿಗೆ ನೀಡಲಾಗುತ್ತಿದೆ ಎಂದುಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ತಿಳಿಸಿದರು.ನಗರದ ತಾಲೂಕು ಕಚೇರಿ ಆವರಣದಲ್ಲಿತಹಶೀಲ್ದಾರ್ ಮತ್ತು ತಾಲೂಕು ಅಧಿಕಾರಿಗಳು ಆರ್‌ಐಗಳನ್ನು ಒಳಗೊಂಡ ಕೋವಿಡ್ ಪ್ರಗತಿ ಪರಿಶೀಲನಾಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಸೊಂಕಿತರ ಪ್ರಾಥಮಿಕಹಾಗೂ ದ್ವೀತಿಯ ಸಂಪರ್ಕಿತರನ್ನು ಪತ್ತೆಹಚ್ಚುವುದರಲ್ಲಿಆಗುತ್ತಿರುವ ವಿಳಂಬದಿಂದ ಸೋಂಕು ಹರಡಲುಕಾರಣವಾಗುತ್ತಿದೆ. ಸಿಬ್ಬಂದಿಗಳ ಕೊರತೆಯು ಇದೆಹಾಗಾಗಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಪ್ರತಿಯೊಂದು ಪಂಚಾಯ್ತಿಗೂ ನೋಡೆಲ್ ಅಧಿಕಾರಿಯಾಗಿನಿಯೋಜನೆ ಮಾಡಲಾಗುತ್ತಿದೆ.
ಅಂಗನವಾಡಿ ಕಾರ್ಯಕರ್ತರು ಪಂಚಾಯ್ತಿ ಅಧಿಕಾರಿಗಳು ಗ್ರಾಮಲೆಕ್ಕಾಧಿಕಾರಿಗಳ ಸಭೆ ನಡೆಸಿ ಸೋಂಕಿತರ ಮನೆಯಲ್ಲಿರುವ ಸದಸ್ಯರ ಭಾವಚಿತ್ರಗಳನ್ನುತೆಗೆದು ಪೂರ್ಣ ಮಾಹಿತಿಯೊಂದಿಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಜತೆಗೆ ಸೋಂಕಿತರ ಪ್ರಾಥಮಿಕಹಾಗೂ ದ್ವೀತಿಯ ಸಂಪರ್ಕ ಹೊಂದಿದ್ದವರನ್ನು ಪತ್ತೆ ಹಚ್ಚಿಪ್ರತಿಯೋಬ್ಬರನ್ನು ಕೋವಿಡ್ ಪರೀಕ್ಷಗೆ ಒಳಪಡಿಸಿ ಕೊರೊನಾ ದೃಡಪಟ್ಟು ಯಾವುದೇ ರೋಗ ಲಕ್ಷಣಗಳುಇಲ್ಲದಿದ್ದರೆ ಅಂಥ ಸೊಂಕಿತರನ್ನು ಹೊಂ ಐಸೋಲೆಷನ್‌ನಲ್ಲಿ ಚಿಕಿತ್ಸೆ ನೀಡುವಂತೆ ನಿಗಾವಹಿಸಬೇಕು ಎಂದರು.
ಬಳಿಕ ನಗರದ ಇಂಡಿಯನ್ ಖಾಸಗಿ ಶಾಲೆಯಬಳಿಯಲ್ಲಿರುವ ಮನೆಯೋಂದರಲ್ಲಿ ಹೊಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೊಂಕಿತರನ್ನು ದೂರದಿಂದಲೇ ಭೇಟಿ ಮಾಡಿ ಚಿಕಿತ್ಸೆ ಮತ್ತು ಆರೋಗ್ಯ ಚೇತರಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಹೊಸಕೋಟೆ ಬಳಿ ಇರುವ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿನೀಡಿ ಮೂಲಸೌಲಭ್ಯ ಚಿಕಿತ್ಸೆ ಸ್ವತ್ಛತೆ ಬಗ್ಗೆ ಪರಿಶೀಲಿಸಿದರು.ತಹಶೀಲ್ದಾರ್ ವಿಶ್ವನಾಥ್ ಉಪ ತಹಶೀಲ್ದಾರ್ ರಘು,ಟಿಎಚ್‌ಒ ನಂದಿನಿ, ವೃತ್ತ ನೀರಿಕ್ಷಕ ಕೃಷ್ಣ, ಹಾರೊಹಳ್ಳಿಪಿಎಸ್‌ಐ ಮುರುಳಿ, ಸಮಾಜ ಕಲ್ಯಾಣ ಇಲಾಖೆಯಜಯಪ್ರಕಾಶ್ ಇತರರಿದ್ದರು.