Advertisement

ಮೇಲ್ವಿಚಾರಣೆಗೆ ಅಧಿಕಾರಿಗಳ ನಿಯೋಜನೆ

11:21 PM Aug 10, 2019 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ 11 ಜಿಲ್ಲೆಗಳಿಗೆ ಆರು ಮಂದಿ ಹಿರಿಯ ಐಎಎಸ್‌ ಅಧಿಕಾರಿಗಳನ್ನು ಜಿಲ್ಲಾ ಮೇಲ್ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

Advertisement

ಜಿಲ್ಲೆ ಹಾಗೂ ಮೇಲ್ವಿಚಾರಣೆಗೆ ನಿಯೋಜನೆಗೊಂಡ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ವಿವರ: ಬೆಳಗಾವಿ, ಬಾಗಲಕೋಟೆ- ರಜನೀಶ್‌ ಗೋಯೆಲ್‌. ವಿಜಯಪುರ, ಕಲಬುರಗಿ- ಇ.ವಿ.ರಮಣರೆಡ್ಡಿ. ರಾಯಚೂರು, ಯಾದಗಿರಿ- ಮಹೇಂದ್ರ ಜೈನ್‌. ಉತ್ತರ ಕನ್ನಡ, ಉಡುಪಿ- ಸಂದೀಪ್‌ ದವೆ. ಶಿವಮೊಗ್ಗ- ರಾಜೀವ್‌ ಚಾವ್ಲಾ. ಹಾಸನ, ಕೊಡಗು- ರಾಜಕುಮಾರ್‌ ಖತ್ರಿ.

Advertisement

Udayavani is now on Telegram. Click here to join our channel and stay updated with the latest news.

Next