Advertisement

Assembly Session; ಉಭಯ ಸದನಗಳಲ್ಲಿ ಡಿಕೆಶಿ ಪ್ರಕರಣ ಪ್ರತಿಧ್ವನಿ 

12:04 AM Dec 16, 2023 | Team Udayavani |

ಬೆಳಗಾವಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ಪ್ರಕರಣವನ್ನು ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆದ ರಾಜ್ಯ ಸರಕಾರದ ನಡೆಯ ಬಗ್ಗೆ ಅಧಿವೇಶನದ ಕೊನೆಯ ದಿನ ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಪ್ರಸ್ತಾವಿಸಿದ್ದು, ನಿಲುವಳಿ ಸೂಚನೆ ಮಂಡನೆಯನ್ನು ಎರಡೂ ಸದನದಲ್ಲಿ ನಿರಾಕರಿಸಲಾಗಿದೆ.

Advertisement

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ಬಳಿಕ ವಿಪಕ್ಷ ನಾಯಕ ಅಶೋಕ್‌ ಅವರು, ನಿಲುವಳಿ ಸೂಚನೆ ಮಂಡಿಸಲು ಮುಂದಾದರು. ಈ ವೇಳೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ಅವರ ಅಕ್ರಮ ಆಸ್ತಿ ಗೆ ಸಂಬಂಧಿಸಿ ಇ.ಡಿ. ನೀಡಿದ ಶಿಫಾರಸಿನ ಅನ್ವಯ ನಮ್ಮ ಸರಕಾರ ಸಿಬಿಐಗೆ ವಹಿಸಿತ್ತು. ಆದರೆ ಕಾಂಗ್ರೆಸ್‌ ಸರಕಾರ ಹಿಂಪಡೆಯುವ ಮೂಲಕ ಯಾರನ್ನು ರಕ್ಷಿಸಲು ಮುಂದಾಗಿದೆ ಎಂದು ಪ್ರಶ್ನಿಸಿದರು.

ಗೃಹ ಸಚಿವ ಡಾ| ಜಿ.ಪರಮೇಶ್ವರ ಮಾತನಾಡಿ, ಇದೊಂದು ಖಾಸಗಿ ಪ್ರಕರಣ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಈ ವಿಷಯವನ್ನು ನಿಲುವಳಿ ಸೂಚನೆ ಮಂಡಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಸ್ಪೀಕರ್‌ ಕೂಡ ಸಹಮತ ವ್ಯಕ್ತಪಡಿಸಿ, ಅವಕಾಶ ನಿರಾಕರಿಸಿದರು.

ವಿಧಾನಪರಿಷತ್‌ನಲ್ಲೂ ವಿವಿಧ ಮಸೂದೆಗಳ ಪರ್ಯಾಲೋಚನೆಗೆ ಸಭಾಪತಿ ಮುಂದಾಗುತ್ತಿದ್ದಂತೆ, ಬಿಜೆಪಿ ಸದಸ್ಯ ಕೋಟ ಶ್ರೀನಿ ವಾ ಸ ಪೂಜಾ ರಿ ಅವರು ಡಿ.ಕೆ.ಶಿವಕುಮಾರ್‌ ಮೇಲಿನ ಸಿಬಿಐ ತನಿಖೆಯನ್ನು ಹಿಂಪಡೆದ ಸರಕಾರದ ನಡೆ ಬಗ್ಗೆ ಮಾತನಾಡಿದರು. ಈ ಬಗ್ಗೆ ನಿಲುವಳಿ ಸೂಚನೆಗೆ ನೋಟಿಸ್‌ ನೀಡಲಾಗಿತ್ತು. ಅಧಿವೇಶನದ ಕೊನೇ ದಿನದ ಅಜೆಂಡಾದಲ್ಲಿ ಈ ವಿಷಯ ಇಲ್ಲ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಪತಿ ಅವರನ್ನು ಆಗ್ರಹಿಸಿದರು. ಈ ನಡುವೆ ಸ್ವಲ್ಪ ಹೊತ್ತು ಆಡಳಿತ-ವಿಪಕ್ಷದ ಸದಸ್ಯರ ನಡುವೆ ವಾಗ್ವಾದ ಮಾತಿನ ಚಕಮಕಿ ನಡೆದು, ಕೋಲಾಹಲ ಉಂಟಾಯಿತು. ಬೇಸರಗೊಂಡ ಸಭಾಪತಿ ಎರಡೂ ಕಡೆಯ ಚರ್ಚೆ ಕಡತಕ್ಕೆ ಹೊಗಬಾರದು ಎಂದು ಸೂಚಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಮೇಲಿನ ಸಿಬಿಐ ತನಿಖೆ ವಾಪಸ್‌ ಪಡೆದಿರುವ ಸರಕಾರದ ನಡೆ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ. ಈ ಹಿನ್ನೆಲೆ ಚರ್ಚೆಗೆ ಅವಕಾಶ ನೀಡಿದರೆ ನ್ಯಾಯಾಂಗ ನಿಂದನೆ ಆಗುತ್ತದೆ. ನಾನು ಚರ್ಚೆಗೆ ಅವಕಾಶ ನೀಡುವುದಿಲ್ಲ.
– ಬಸವರಾಜ ಹೊರಟ್ಟಿ, ಸಭಾಪತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next