ಬೆಂಗಳೂರು: ರಾಜ್ಯ ವಿಧಾನ ಮಂಡಲ ಅಧಿವೇಶನ ಅನಿರ್ಧಿಷ್ಠಾವಧಿಗೆ ಮುಂದೂಡಲಾಯಿತು.
ಮಾರ್ಚ್ 4 ರಿಂದ ಮಾರ್ಚ್ 30 ರ ವರೆಗೆ ಸುಮಾರು 20 ದಿನಗಳ ಕಾಲ ಸುಸೂತ್ರವಾಗಿ ನಡೆದ ಅಧಿವೇಶನದಲ್ಲಿ ಎರಡು ವಾರಗಳ ಕಾಲ ಬಜೆಟ್ ಮೇಲೆ ಚರ್ಚೆ ನಡೆದು 2.65 ಲಕ್ಷ ಕೋಟಿಯ ಬಜೆಟ್ ಗೆ ಅನುಮೋದನೆ ನೀಡಲಾಯಿತು.
ಬಹಳ ವರ್ಷಗಳ ನಂತರ ಇಲಾಖಾವಾರು ಬೇಡಿಕೆಗಳ ಮೇಲಿನ ಚರ್ಚೆ ಚರ್ಚೆ ನಡೆದು ಸಚಿವರುಗಳು ತಮ್ಮ ಇಲಾಖೆಗಳ ಮೇಲಿನ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ, ಕರ್ನಾಟಕ ಕೈಗಾರಿಕಾಭಿವೃದ್ಧಿ ತಿದ್ದುಪಡಿ ವಿಧೇಯಕ, ಬಂಧಿಖಾನೆ ತಿದ್ದುಪಡಿ ವಿಧೇಯಕ ಸೇರಿದಂತೆ ಅನೇಕ ವಿಧೇಯಕಗಳ ಮಂಡನೆ ಮತ್ತು ಅಂಗೀಕಾರ ನೀಡಲಾಯಿತು.
ಅಧಿವೇಶನದ ಕೊನೆಯ ಎರಡು ದಿನ ಚುನಾವಣೆ ಸುಧಾರಣೆ ಕುರಿತ ವಿಶೇಷ ಚರ್ಚೆ ನಡೆಸಲಾಯಿತು. ವಿಶೇಷ ಚರ್ಚೆಯಲ್ಲಿ ಎಲ್ಲ ಪಕ್ಷಗಳ ಸದಸ್ಯರು ಪಕ್ಷ ಭೆದ ಮರೆತು ಚುನಾವಣಾ ಸುಧಾರಣೆ ಕುರಿತು ಚರ್ಚೆ ನಡೆಸಿದ್ದು ಈ ಅಧಿವೇಶನದ ವಿಶೇಷವಾಗಿತ್ತು.