Advertisement

Karnataka: 78 ಗಂಟೆ 25 ನಿಮಿಷ ನಡೆದ ವಿಧಾನಸಭೆ ಕಲಾಪ

08:48 PM Jul 21, 2023 | Team Udayavani |

ಬೆಂಗಳೂರು: ವರ್ಷಕ್ಕೆ 60 ದಿನಗಳು ಕಲಾಪ ನಡೆಸಬೇಕೆಂಬ ನಿಟ್ಟಿನಲ್ಲಿ ಪ್ರಸ್ತುತ 15 ದಿನಗಳ ಕಲಾಪ ನಡೆಸಿದ್ದು, ಹೆಚ್ಚಿನ ದಿನಗಳು ಶಾಸನಸಭೆ ನಡೆಸಲು ಶಾಸಕರ ಪಾಲ್ಗೊಳ್ಳುವಿಕೆಯೂ ಮುಖ್ಯ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.

Advertisement

ಶುಕ್ರವಾರ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಜು.3 ರಿಂದ 23 ರವರೆಗೆ 15 ದಿನಗಳ ಕಾಲ 78.25 ಗಂಟೆ ಕಲಾಪ ನಡೆದಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಮಾಡಿದ ಭಾಷಣದ ಮೇಲೆ 34 ಸದಸ್ಯರು 12.39 ಗಂಟೆ ಚರ್ಚೆ ನಡೆಸಿದ್ದಾರೆ ಎಂದರು.

ಜು.7 ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ಮೇಲೆ 62 ಸದಸ್ಯರು 12.52 ಗಂಟೆ ಚರ್ಚಿಸಿದ್ದು, ಗುರುವಾರ ಸಿಎಂ ಉತ್ತರ ನೀಡಿದ ನಂತರ ಬಜೆಟ್‌ಗೆ ಅನುಮೋದನೆ ನೀಡಲಾಗಿದೆ. ಸರಾಸರಿ ಶೇ.92 ಸದಸ್ಯರ ಹಾಜರಾತಿ ಇತ್ತು. ವಿಧೇಯಕಗಳ ಬಗ್ಗೆ ಹೊಸ ಶಾಸಕರು ಸೇರಿ ಎಲ್ಲ ಶಾಸಕರಿಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ನಿಯುಕ್ತಿಗೊಳಿಸುವ ಮೂಲಕ ಹೊಸ ಪರಿಪಾಠಕ್ಕೆ ನಾಂದಿ ಹಾಡಲಾಗಿದೆ ಎಂದು ಸಂತಸ ಹಂಚಿಕೊಂಡರು.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿ ಸೇರಿ ಸಿಎಜಿ ವರದಿ, 29 ಅಧಿಸೂಚನೆ, 2 ಅಧ್ಯಾದೇಶ, 70 ವಾರ್ಷಿಕ ವರದಿ, 99 ಲೆಕ್ಕ ಪರಿಶೋಧನಾ ವರದಿ, 4 ಅನುಪಾಲನ ವರದಿ, 01 ಲೆಕ್ಕ ತಪಾಸಣಾ ವರದಿಗಳು ಮಂಡನೆಯಾಗಿವೆ. ಧನವಿನಿಯೋಗ ವಿಧೇಯಕಸಹಿತ 14 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ
ನಾಡಿನ ವಿವಿಧೆಡೆಗಳಿಂದ ಅಧಿವೇಶನ ವೀಕ್ಷಿಸಲು ಬರುವ ವಿದ್ಯಾರ್ಥಿಗಳನ್ನು ವಿಧಾನಸೌಧದ ಹೊರಗೆ ಬಿಸಿಲಲ್ಲಿ ನಿಲ್ಲಿಸುವ ಬದಲು ಒಳಗೇ ಕೂರಿಸುವ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನ ವೀಕ್ಷಿಸಲು ಬರುವವರು ಡಿಡಿಪಿಐ ಮೂಲಕ ಇ-ಮೇಲ್‌ ಮಾಡಿದರೆ ದಿನಾಂಕ ಮತ್ತು ಸಮಯವನ್ನು ಕಾಯ್ದಿರಿಸಲಾಗುತ್ತದೆ. ವಿಧಾನಸೌಧದ ಒಳಾಂಗಣದಲ್ಲಿ ಮ್ಯಾಟ್‌ ಹಾಕಿ ಅವರನ್ನು ಕೂರಿಸಲಾಗುತ್ತದೆ. ಕಲಾಪ ನಡೆಯುವ ವಿಧಾನ ಸಭಾಂಗಣದೊಳಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಬಿಡಲಾಗುತ್ತದೆ ಎಂದು ಸ್ಪೀಕರ್‌ ಖಾದರ್‌ ಹೇಳಿದರು.ನಿಯಮ 60 ರ ಡಿ ನೀಡಿದ್ದ 6 ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿ, 4 ಸೂಚನೆಗಳ ಮೇಲೆ ಚರ್ಚೆಯೂ ನಡೆದಿದೆ.

Advertisement

ಸ್ವೀಕರಿಸಿದ್ದ 1149 ಪ್ರಶ್ನೆಗಳಲ್ಲಿ 120 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದ್ದು, 1013 ಪ್ರಶ್ನೆಗಳಲ್ಲಿ 966 ಪ್ರಶ್ನೆಗಳಿಗೆ ಲಿಖೀತ ಉತ್ತರ ನೀಡಲಾಗಿದೆ. ನಿಯಮ 351 ರ ಅನ್ವಯ 249 ಸೂಚನೆಗಳಲ್ಲಿ 153 ಸೂಚನೆಗಳಿಗೆ ಉತ್ತರ ಕೊಟ್ಟಿದ್ದು, ಗಮನ 202 ಗಮನ ಸೆಳೆಯುವ ಸೂಚನೆ ಪೈಕಿ 181 ಸೂಚನಾ ಪತ್ರಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ
ನಾಡಿನ ವಿವಿಧ ಮೂಲೆಗಳಿಂದ ಅಧಿವೇಶನ ವೀಕ್ಷಿಸಲು ಬರುವ ವಿದ್ಯಾರ್ಥಿಗಳನ್ನು ವಿಧಾನಸೌಧದ ಹೊರಗೆ ಬಿಸಿಲಲ್ಲಿ ನಿಲ್ಲಿಸುವ ಬದಲು ಒಳಗೇ ಕೂರಿಸುವ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನದಲ್ಲಿ ವೀಕ್ಷಿಸಲು ಬರುವವರು ಡಿಡಿಪಿಐ ಮೂಲಕ ಇ-ಮೇಲ್‌ ಮಾಡಿದರೆ ದಿನಾಂಕ ಮತ್ತು ಸಮಯವನ್ನು ಕಾಯ್ದಿರಿಸಲಾಗುತ್ತದೆ. ವಿಧಾನಸೌಧದ ಒಳಾಂಗಣದಲ್ಲಿ ಮ್ಯಾಟ್‌ ಹಾಕಿ ಅವರನ್ನು ಕೂರಿಸಲಾಗುತ್ತದೆ. ಕಲಾಪ ನಡೆಯುವ ವಿಧಾನಸಭಾಂಗಣದೊಳಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಬಿಡಲಾಗುತ್ತದೆ ಎಂದು ಸ್ಪೀಕರ್‌ ಖಾದರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next