Advertisement

ಕಾರ್ಕಳ ಕಾಂಗ್ರೆಸ್‌ ಬದುಕಿದೆಯೇ? ಸತ್ತಿದೆಯೇ?

07:05 AM Apr 05, 2018 | Team Udayavani |

ಉಡುಪಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ, ಕಾರ್ಕಳ ಕ್ಷೇತ್ರಕ್ಕೆ ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎನ್ನುವುದನ್ನು ಘೋಷಿಸಿಲ್ಲ. ಇದರಿಂದಾಗಿ ಕಾರ್ಕಳದಲ್ಲಿ ಕಾಂಗ್ರೆಸ್‌ ಜೀವಂತವಿದೆಯಾ? ಸತ್ತಿದೆಯಾ? ತಿಳಿಯುತ್ತಿಲ್ಲ ಎಂದು ಕಾರ್ಕಳದ ಕಾರ್ಯಕರ್ತ ಡೇನಿಯಲ್‌ ರೇಂಜರ್‌ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಅಭ್ಯರ್ಥಿ ಘೋಷಣೆಯಾಗದ ಕಾರಣ ಕಾರ್ಯಕರ್ತರ ಹುಮ್ಮಸ್ಸು ಕುಂಠಿತವಾಗಿದೆ. ಹೀಗೆಯೇ ಆದರೆ ಮುಂದಕ್ಕೆ ಕಾಂಗ್ರೆಸ್‌ಗೆ ಕಾರ್ಕಳ ಕ್ಷೇತ್ರದಲ್ಲಿ ಕಾರ್ಯಕರ್ತರೇ ಇಲ್ಲದ ದುಸ್ಥಿತಿ ಬರಬಹುದು. ಮೊಲಿಯವರ ಪುತ್ರ ಕಣದಿಂದ ಹಿಂದೆ ಸರಿದ ಬಳಿಕ ಕ್ಷೇತ್ರದ ಉಸ್ತುವಾರಿಗಳಾಗಿದ್ದ ಜಿ.ಎ. ಬಾವಾ ಮತ್ತು ಭರತ್‌ ಮುಂಡೋಡಿಯವರು ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ. ಅವರು ಉತ್ಸಾಹಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸುತ್ತಲಿದ್ದರು. 

ಕಾರ್ಕಳದ ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕತ್ವ ಇಲ್ಲದ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಕ್ಷೇತ್ರದಾದ್ಯಂತ ಕಾರ್ಯಕರ್ತರನ್ನು ಒಟ್ಟು ಸೇರಿಸಿದ್ದು ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಅವರು. 

ಅವರಿಗೆ ಟಿಕೆಟ್‌ ನೀಡಬೇಕು ಎಂದು ಹೈಕಮಾಂಡ್‌ ಹಾಗೂ ಕ್ಷೇತ್ರದ ಉಸ್ತುವಾರಿಗಳಲ್ಲಿಯೂ ಭಿನ್ನವಿಸಿಕೊಂಡಿದ್ದೇವೆ. ಕಾರ್ಯಕರ್ತರ ಅಪೇಕ್ಷೆ ಹಾಗೂ ಒಮ್ಮತದಂತೆ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು.

ಕಾರ್ಕಳದಲ್ಲಿ ಸಮರ್ಥ ನಾಯಕತ್ವ ಹಾಗೂ ಬ್ಲಾಕ್‌ ಮಟ್ಟದ ನಾಯಕರ ಉದಾಸೀನ ಸ್ವಭಾವದಿಂದಾಗಿ ಸತತವಾಗಿ 5 ಜಿ.ಪಂ., 19 ತಾ.ಪಂ. ಹಾಗೂ 26 ಗ್ರಾ.ಪಂ.ಗಳಲ್ಲಿ ಅಧಿಕಾರ ಕಳೆದುಕೊಂಡು ಸಂಪೂರ್ಣವಾಗಿ ನೆಲಕ್ಕಚ್ಚಿತ್ತು. ಇಂತಹ ಸಂದರ್ಭದಲ್ಲಿ ಪಕ್ಷವನ್ನು ಆಶಾದಾಯಕ ಮಟ್ಟದಲ್ಲಿ ಸಂಘಟಿಸಿರುವ ಮುನಿಯಾಲು ಉದಯ ಕುಮಾರ್‌ ಶೆಟ್ಟಿಯವರಿಗೆ ಕಾರ್ಕಳ ವಿಧಾನಸಭೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಟಿಕೆಟ್‌ ಕೊಡದಿದ್ದರೆ ತಳಮಟ್ಟದ ಕಾರ್ಯಕರ್ತರು ನಿರಾಸೆಯನ್ನು ಹೊಂದಿ ತಟಸ್ಥರಾಗಬಹುದು. ಈ ಬಗ್ಗೆ  ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ರಾಜ್ಯ ಉಸ್ತುವಾರಿಗಳು, ಕೆಪಿಸಿಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಈ-ಮೇಲ್‌ ಮತ್ತು ಪತ್ರದ ಮುಖಾಂತರ ಮನವಿ ಮಾಡಲಾಗಿದೆ. ಕಾರ್ಯಕರ್ತರಾದ ನಮ್ಮ ಮನವಿಯನ್ನು ಕಡೆಗಣಿಸಿ ಅಭಿಪ್ರಾಯಕ್ಕೆ ವಿರೋಧವಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದಲ್ಲಿ ನಾವೆಲ್ಲ ತಟಸ್ಥ ನೀತಿಯನ್ನು ಅನುಸರಿಸುತ್ತೇವೆ ಎಂದವರು ತಿಳಿಸಿದರು.

Advertisement

ಯುವಕಾಂಗ್ರೆಸ್‌ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್‌ ವಿ. ಅಮೀನ್‌, ಕಾರ್ಯಕರ್ತರಾದ ತಾರಾನಾಥ ಕೋಟ್ಯಾನ್‌, ಶೇಖ್‌ ಶಬ್ಬೀರ್‌, ವೆಲೇರಿಯನ್‌ ಪಾಯಸ್‌, ರಂಜಿತ್‌ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next