Advertisement

ಪಂಚರಾಜ್ಯ ಚುನಾವಣೆ : ಚುನಾವಣಾ ಫಲಿತಾಂಶದ ಸಂಭ್ರಮಾಚರಣೆಗೆ EC ನಿಷೇಧ

02:06 PM Apr 27, 2021 | Team Udayavani |

ನವ ದೆಹಲಿ : ಕೋವಿಡ್ ಸೋಂಕಿನ ರೂಪಾಂತರಿ ಅಲೆಯ ಕಾರಣದಿಂದಾಗಿ ಪಾಸಿಟಿವ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯ  ಚುನಾವಣಾ ಆಯೋಗವು ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಮತ್ತು  ಪುದುಚೇರಿ ಗಳ ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಮೇ 2 ರಂದು ಹೊರಬೀಳಲಿದ್ದು, ಮತ ಎಣಿಕೆಯ ದಿನದಂದು ಅಥವಾ ನಂತರ ಎಲ್ಲಾ ಪಕ್ಷಗಳು ವಿಜಯ ಯಾತ್ರೆಗಳನ್ನು ನಿಷೇಧಿಸುವಂತೆ ಆದೇಶ ಹೊರಡಿಸಿದೆ.

Advertisement

ಇನ್ನು, ಈ ಬಗ್ಗೆ ವಿಸ್ತೃತವಾದ ಆದೇಶವನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಓದಿ : ಕೋವಿಡ್ ಎದುರಿಸಿದ ನಂತರ ವೈಫಲ್ಯಗಳನ್ನು ಬೊಟ್ಟು ಮಾಡಿ ತೋರಿಸಲಿ: ಸಿ.ಟಿ.ರವಿ

ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಮತ್ತು  ಪುದುಚೇರಿ ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣಾ ಪ್ರಚಾರ ಸಭೆಗಳಿಂದಲೇ ದೇಶದಲ್ಲಿ ಕೋವಿಡ್ ಸೋಂಕು ಹಠಾತ್ ಏರಿಕೆಯಾಗಲು ಕಾರಣ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಈ ಆದೇಶವನ್ನು ಹೊರಡಿಸಿದೆ.

Advertisement

ಇನ್ನು, ಸಂಬಂಧಪಟ್ಟ ರಿಟರ್ನಿಂಗ್ ಅಧಿಕಾರಿಯಿಂದ ಚುನಾವಣಾ ಪ್ರಮಾಣಪತ್ರವನ್ನು ಸ್ವೀಕರಿಸಲು ವಿಜೇತ ಅಭ್ಯರ್ಥಿಯೊಂದಿಗೆ ಅಧಿಕೃತ ಪ್ರತಿನಿಧಿಯೊಂದಿಗೆ ಇಬ್ಬರು ವ್ಯಕ್ತಿಗಳಿಗಿಂತ ಹೆಚ್ಚಿನವರಿಗೆ  ಅನುಮತಿ ಇಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಮತ್ತು  ಪುದುಚೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಮತದಾನ ಎಣಿಕೆ ಮೇ 2 ರಂದು ನಡೆಯಲಿದೆ. ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವುದರ ಬಗ್ಗೆ ಮತ್ತು ಮಾರಣಾಂತಿಕ ಕೋವಿಡ್ ಸೋಂಕು ಏಕಾಏಕಿ ಹೆಚ್ಚುತ್ತಿರುವುದರಿಂದ ರಾಜಕೀಯ ಪಕ್ಷಗಳಿಗೆ ಸಾರ್ವಜನಿಕ ಸಭೆಗಳನ್ನು ನಡೆಸಲು ನಿರ್ಬಂಧಿಸಿ ಚುನಾವಣಾ ಆಯೋಗವು ಮತದಾನ ನಡೆಸುವ ನಿರ್ಧಾರ ಕೈಗೊಂಡಿತ್ತು.

ಈಗ ಕಳೆದ ಒಂದು ವಾರದಿಂದ ದೇಶದಲ್ಲಿ ಸುಮಾರು ಮೂರು ಲಕ್ಷಗಳಿಗಿಂತಲೂ ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಿಜಯ ಯಾತ್ರೆಗೂ ಬ್ರೇಕ್ ಹಾಕಿ ಆದೇಶ ಹೊರಡಿಸಿದೆ.

ಓದಿ : ಆಸ್ಪತ್ರೆಗೆ ದಾಖಲಾದ 2-3 ದಿನಕ್ಕೆ ಜನ ಸಾಯುತ್ತಿದ್ದಾರೆ,ಏನಾಗ್ತಿದೆ ಗೊತ್ತಾಗ್ತಿಲ್ಲ:ಜಗ್ಗೇಶ್

Advertisement

Udayavani is now on Telegram. Click here to join our channel and stay updated with the latest news.

Next