Advertisement

ಕದನ-ಕಥನ: ಮಕ್ಕಳಿಲ್ಲವೆಂದು ಮುಚ್ಚಿದ ಶಾಲೆ ಚುನಾವಣೆ ಬಂದಾಗ ತೆರೆಯಿತು!

09:45 AM Apr 16, 2018 | Karthik A |

ಬಜಪೆ: ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ಕನ್ನಡ ಮಾಧ್ಯಮ ಶಾಲೆಯೊಂದು ಮುಚ್ಚಿದರೂ ಚುನಾವಣೆ ಸಂದರ್ಭ ಬಂದಾಗ ಮತದಾನ ಕೇಂದ್ರವಾಗಿ ಅಗತ್ಯವಾಗಿದೆ. ಅಂದು ಸರಕಾರಕ್ಕೆ ಬೇಡವಾದ ಶಾಲೆ ಇಂದು ಬೇಕಾಗಿದೆ! ಈ ಹಿಂದೆ ಹೆಚ್ಚಿನ ಮತದಾನ ಕೇಂದ್ರಗಳೂ  ಕನ್ನಡ ಮಾಧ್ಯಮ ಶಾಲೆಗಳೇ ಆಗಿದ್ದವು. ಪಡು ಪೆರಾರ ಗ್ರಾ.ಪಂ. ವ್ಯಾಪ್ತಿಯ ಪಡುಪೆರಾರ ಗ್ರಾಮದ ಕತ್ತಲಸಾರ್‌ ಶ್ರೀ ವಾಣಿವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಚ್ಚಿ ಮೂರು ವರ್ಷಗಳಾದರೂ ಮತದಾನ ಕೇಂದ್ರವಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ.

Advertisement

1926ರಲ್ಲಿ ಈ ಶಾಲೆ ಸ್ಥಾಪನೆಗೊಂಡಿದೆ. 1977ರಲ್ಲಿ ಹೊಸ ಕಟ್ಟಡದೊಂದಿಗೆ ಕತ್ತಲಸಾರ್‌ನಲ್ಲಿ ಶಾಲೆಯೊಂದು ಆರಂಭಗೊಂಡಿತು. ಇಲ್ಲಿ ಮಕ್ಕಳ ಕೊರತೆಯಿದೆ ಎಂಬ ಕಾರಣಕ್ಕೆ ಗ್ರಾಮೀಣ ಪ್ರದೇಶದ ಈ ಕನ್ನಡ ಮಾಧ್ಯಮ ಶಾಲೆಯನ್ನು ಮೂರು ವರ್ಷಗಳ ಹಿಂದೆ ಮುಚ್ಚಲಾಯಿತು. ಮೈರೋಡಿ, ಪಾಲೊªàಡಿ, ಕಬೆತ್ತಿಗುತ್ತು, ಕುಡ್ಡಾಯಿ-ತೋಕೆ, ಕುಂಟಕಟ್ಟೆ, ಕೊಳಕೆ ಬೈಲು, ಕತ್ತಲಸಾರ್‌, ಉಳಾÂ, ಪಡ್ಡಾಯಿಬೈಲು, ಕಾರಡ್ಕ, ಬಾಲಪ್ಪ ಬೈಲು, ಬಾಕ್ಯಾರು ಕೋಡಿ, ಕೆಂಗೊಳ್ಳಿ, ಮರೋಳಿ ಪದವು, ಪಲ್ಕೆ, ಕೊರಕಂಬÛ, ಪಡೀಲು, ಗೋಳಿಪಲ್ಕೆ ಪ್ರದೇಶಗಳ 1,500ಕ್ಕೂ ಅಧಿಕ ಮತದಾರರು ಈ ಕೇಂದ್ರದಲ್ಲಿ ಮತಚಲಾವಣೆ ಮಾಡುತ್ತಾರೆ.

ಮತದಾನ ಕೇಂದ್ರ ಸ್ಥಳಾಂತರಕ್ಕೆ ಗ್ರಾಮಸ್ಥರ ವಿರೋಧ
ಈ ಶಾಲೆಯ ಛಾವಣಿ ನಾದುರಸ್ತಿಯಲ್ಲಿದೆ ಹಾಗೂ ಮೂಲಸೌಕರ್ಯ ಕೊರತೆ ಇದೆ ಎಂಬ ಕಾರಣಕ್ಕಾಗಿ ಮತದಾನ ಕೇಂದ್ರವನ್ನು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಅನುದಾನಿತ ಪಾಲಿಟೆಕ್ನಿಕ್‌ಗೆ ಸ್ಥಳಾಂತರಗೊಳಿಸುವ ಪ್ರಸ್ತಾವನೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಮಂಗಳೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಮತದಾನ ಕೇಂದ್ರವನ್ನು ಶಾಲೆಯಲ್ಲಿ ಉಳಿಸಬೇಕು, ಅದನ್ನು ಸುಂಕದಕಟ್ಟೆ ಪಾಲಿಟೆಕ್ನಿಕ್‌ಗೆ ಸ್ಥಳಾಂತರಿಸಿದರೆ ನಮಗೆ ದೂರವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದರು. ಇದರಿಂದಾಗಿ ಈ ಶಾಲೆಯಲ್ಲಿಯೇ ಮತದಾನ ಕೇಂದ್ರವಾಗಿ ಮುಂದುವರಿಯುವಂತೆ ಮಂಗಳೂರು ತಹಶೀಲ್ದಾರರು ಆದೇಶಿಸಿದ್ದರು.

52,000 ರೂ. ವೆಚ್ಚದಲ್ಲಿ ದುರಸ್ತಿ
ಮತದಾನ ಕೇಂದ್ರಕ್ಕೆ ಮೂಲ ಸೌಕರ್ಯ ಒದಗಿಸುವಂತೆ ಪಡುಪೆರಾರ ಗ್ರಾ.ಪಂ. ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೂಚಿಸಿದ್ದರು. ಛಾವಣಿ, ಕಿಟಿಕಿ, ಬಾಗಿಲು ದುರಸ್ತಿ, ವಿದ್ಯುತ್‌ ಸೌಕರ್ಯಕ್ಕಾಗಿ 52,000 ರೂ. ಅಂದಾಜು ವೆಚ್ಚದ ಪಟ್ಟಿ ತಯಾರಿಸಿ ತಹಶೀಲ್ದಾರರಿಗೆ ಸಲ್ಲಿಸಿದ್ದರು. ಸದ್ಯದಲ್ಲೇ ದುರಸ್ತಿ ರಿಪೇರಿ ಕಾಮಗಾರಿ ನಡೆಯಲಿದೆ ಎಂದು ಪಿಡಿಒ ಭೋಗಮಲ್ಲಣ್ಣ ತಿಳಿಸಿದ್ದಾರೆ. ಹಿಂದಿನಿಂದಲೂ ಮತದಾನ ಕೇಂದ್ರಕ್ಕೆ ಆಗಮಿಸುವ ಅಧಿಕಾರಿಗಳಿಗೆ ಬೇಕಾದ ಸೌಕರ್ಯಗಳನ್ನು ನಾನೇ  ಒದಗಿಸುತ್ತಿದ್ದೆ. ಶಾಲೆ ಇರುವಾಗಲೂ ಇಲ್ಲಿ ನೀರಿನ ಸಮಸ್ಯೆ ಇತ್ತು. ಆಗಲೂ ನೀರು ಪೂರೈಸುತ್ತಿದ್ದೆ ಎಂದು ಶಾಲೆಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿ ರುವ ಹೇಮನಾಥ ಶೆಟ್ಟಿ ಹೇಳಿದ್ದಾರೆ.

— ಸುಬ್ರಾಯ ನಾಯಕ್‌ ಎಕ್ಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next