Advertisement
ಆಯಾ ಪಕ್ಷಗಳ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿರುವರು. ಐಕ್ಯರಂಗ, ಎನ್‌ಡಿಎ, ಎಡರಂಗಗಳ ಪ್ರಧಾನ ತ್ರಿಕೋನ ಸ್ಫರ್ಧೆ ನಡೆಯುತ್ತಿರುವ ಈ ಕೇÒತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಬಣ್ಣ ಬಣ್ಣದ ವಾಹನಗಳಲ್ಲಿ ಅಬ್ಬರದ ಮೈಕ್‌ಪ್ರಚಾರ ನಡೆಯುತ್ತಿದೆ. ಡಿಸ್ಕೋ, ಜಾನಪದ, ಯಕ್ಷಗಾನ ಹಾಡುಗಳಲ್ಲಿ ಮತದಾರರನ್ನು ರಂಜಿಸುವ ವಾಹನಗಳು ಹಳ್ಳಿಗಳಲ್ಲಿ ಸಂಚರಿಸುತ್ತಿವೆ. ಕೇಂದ್ರ ರಾಜ್ಯ ಸರಕಾರಗಳ ಯೋಜನೆಗಳು, ಆಡಳಿತ ಸಫಲ, ವೈಫಲ್ಯಗಳು, ಅಭ್ಯರ್ಥಿಗಳ ಆಶ್ವಾಸನೆಯ ಕರಪತ್ರಗಳು ಮತದಾರರಿಗೆ ವಿತರಣೆ ಯಾಗುತ್ತಿವೆೆ.
Related Articles
ಕಳೆದ ಬಾರಿ ಗೆದ್ದ ಐಕ್ಯರಂಗದ ಶಾಸಕ ಪಿ.ಬಿ. ಅಬ್ದುಲ್ ರಝಾಕ್ ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನವನ್ನು ಈ ಬಾರಿ ಐಕ್ಯರಂಗದ ಅಭ್ಯರ್ಥಿ ಎಂ.ಸಿ. ಕಮರುದ್ದೀನ್ ಗೆಲ್ಲಲೇ ಬೇಕೆಂಬ ಪಣ ಯುಡಿಎಫ್‌ನದು.
ಕಳೆದ ಬಾರಿ ಶಾಸಕರು ಕೈಗೊಂಡ ಅಭಿವೃದ್ಧಿಯನ್ನು ಪೂರ್ಣ ಗೊಳಿಸಲು ಐಕ್ಯರಂಗದ ಅಭ್ಯರ್ಥಿಯೇ ಗೆಲ್ಲಬೇಕೆಂಬ ಛಲ ಇವರದು.
Advertisement
ಕೇವಲ 89 ಮತಗಳ ಅಂತರದಿಂದ ಸೋತು ವಿಜಯದ ಬಾಗಿಲ ತನಕ ತಲಪಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಅವರ ಸೋಲನ್ನು ಸವಾಲಾಗಿ ಸ್ವೀಕರಿಸಿರುವ ಪಕ್ಷ ಈ ಬಾರಿ ಇಲ್ಲಿ ಕುಂಟಾರು ರವೀಶ ತಂತ್ರಿಯವರು ಗೆಲ್ಲುವುದು ಶಥಸಿದ್ಧವೆಂಬ ವಿಶ್ವಾಸದಲ್ಲಿರುವರು.ಕೇಂದ್ರ ಸರಕಾರದ ಅಭಿವೃದ್ಧಿ ಕ್ರಾಂತಿ ರಾಜ್ಯದ ಪ್ರತಿ ಮತದಾರರ ಮನದಲ್ಲೂ ಮೂಡಿದ್ದು ಗೆಲುವು ನಿಶ್ಚತವೆಂಬುದಾಗಿ ಇವರು ನಂಬಿರುವರು. ಕಳೆದ ಬಾರಿ ತೃತೀಯ ಸ್ಥಾನದಲ್ಲಿದ್ದರೂ ಎಡರಂಗದ ಸ್ಥಳೀಯ ಅಭ್ಯರ್ಥಿ ಎಂ. ಶಂಕರ ರೈ ಅವರಿಗೆ ಇತರ ಪಕ್ಷಗಳ ಮತದಾರರೂ ಮತ ಚಲಾಯಿಸಿಯಾರೆಂಬ ಬಲವಾದ ವಿಶ್ವಾಸದಲ್ಲಿರುವರು. ರಾಜ್ಯವನ್ನಾಳುವ ಎಡರಂಗ ಸರಕಾರದ ಜನಪರ ಆಡಳಿತವನ್ನು ಮೆಚ್ಚಿ ಮತದಾರರು ಮತ ನೀಡಿ ಕಳೆದ 2006ರಲ್ಲಿ ಎಡರಂಗ ಅಚ್ಚರಿಯ ಗೆಲುವು ಸಾಧಿಸಿದಂತೆ ಈ ಬಾರಿ ಗೆಲುವು ತಮ್ಮದೇ ಎಂಬ ಧೃಢ ವಿಶ್ವಾಸ ಎಲ್‌ಡಿಎಫ್‌ನವರದು.
ಸಮರ್ಥ ಅಭ್ಯರ್ಥಿಗಳು 2016ರಲ್ಲಿ ಕಾಸರಗೋಡು ವಿಧಾನ ಸಭಾ ಕ್ಷೇತ್ರದಿಂದ ವಿಧಾನಸಭೆಗೆ ಮತ್ತು 2019ರಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ವತಿಯಿಂದ 2 ಬಾರಿ ಸ್ಫರ್ಧಿಸಿದ ಅನುಭವ ಕುಂಟಾರು ರವೀಶ ತಂತ್ರಿಯವರದು. ಉಚಿತ ಬಸ್ಸಿನ ವ್ಯವಸ್ಥೆ
ವಿದೇಶದಲ್ಲಿರುವ ಎನ್‌ಆರ್‌ಐಗಳನ್ನು ಚುನಾವಣೆಗೆ ವಿಮಾನ ಮೂಲಕ ಕರೆತರಲು ಓರ್ವ ಅಭ್ಯರ್ಥಿ ಮುಂದಾಗಿದ್ದಾರಂತೆ. ಮುಂಬಯಿ, ಬೆಂಗಳೂರು ಮುಂತಾದ ದೂರದೂರಿನಲ್ಲಿ ಉದ್ಯೋಗದಲ್ಲಿರುವ ಮತದಾರರಿಗೆ ಮತದಾನಕ್ಕೆ ಆಗಮಿಸಲು ಉಚಿತ ಬಸ್ಸಿನ ವ್ಯವಸ್ಥೆಯನ್ನು ಎಲ್ಲ ಪಕ್ಷಗಳ ವತಿಯಿಂದ ಏರ್ಪಾಡು ಮಾಡಲಾಗಿದೆಯಂತೆ.