ಪಣಜಿ: ಗೋವಾದಲ್ಲಿ ನಡೆದಿದ್ದ ಒಟ್ಟೂ ನಾಲ್ಕು ವಿಧಾನಸಭಾ ಉಪಚುನಾವಣೆಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಬಿಜೆಪಿ ಭದ್ರಕೋಟೆ ಎಂದೇ ಕರೆಯಲ್ಪಡುತ್ತಿದ್ದ ಪಣಜಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಾಬೂಶ್ ಮೊನ್ಸೆರಾತ್ ಜಯಭೇರಿ ಬಾರಿಸಿದ್ದು, ಕಳೆದ 25 ವರ್ಷಗಳಿಂದ ಸತತವಾಗಿ ಉಳಿಸಿಕೊಂಡಿದ್ದ ಕ್ಷೇತ್ರವನ್ನು ಪ್ರಸಕ್ತ ಉಪಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡಂತಾಗಿದೆ.
ಮಾಂದ್ರೆ ಕ್ಷೇತ್ರದ ಉಪಚುನಾವಣೆಯಲ್ಲಿ ದಯಾನಂದ ಸೋಪ್ಟೆ (ಬಿಜೆಪಿ) 12173 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಜೀತ್ ಅರೋಲ್ಕರ್ ವಿರುದ್ಧ ಜಯಗಳಿಸಿದ್ದಾರೆ.
ಶಿರೋಡಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಸುಭಾಷ ಶಿರೋಡಕರ್ 10661 ಮತಗಳನ್ನು ಪಡೆಯುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಎಂಜಿಪಿಯ ದೀಪಕ್ ಧವಳೀಕರ್ ಅವರನ್ನು ಪರಾಭವಗೊಳಿಸಿದ್ದಾರೆ.
ಮಾಪ್ಸಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಜೋಶುವಾ ಡಿಸೋಜಾ 11167 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸುಧೀರ್ ಕಾಂದೋಳಕರ್ ಅವರನ್ನು ಪರಾಭವಗೊಳಿಸಿದ್ದಾರೆ.
Advertisement
ಪಣಜಿ ಕ್ಷೇತ್ರದಲ್ಲಿ ಬಾಬೂಶ್ ಮೊನ್ಸೆರಾತ್(ಕಾಂಗ್ರೆಸ್) 8748 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಸಿದ್ಧಾರ್ಥ ಕುಂಕೋಳಿಕರ್ (6990 ಮತ) ರವರ ವಿರುದ್ಧ ಜಯಗಳಿಸಿದ್ದಾರೆ.
Related Articles
Advertisement