Advertisement

ಲಸಿಕಾ ಅಭಿಯಾನದ ವೇಳೆ ನರ್ಸ್‌ ಮೇಲೆ ಮಹಿಳೆ ಹಲ್ಲೆ

01:06 PM Sep 18, 2021 | Team Udayavani |

ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ನ್ಯೂ ಇಂಗ್ಲಿಷ್‌ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಕೋವಿಡ್‌ ಲಸಿಕಾಕರಣ ಅಭಿಯಾನದ ವೇಳೆ ಮಹಿಳೆಯೊಬ್ಬಳು ಲಸಿಕೆಗೆ ಸಂಬಂಧಿಸಿ ಆರೋಗ್ಯ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಈ ಕುರಿತು ಕಸಬಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಜಿಲ್ಲೆಯಲ್ಲಿ ಬೃಹತ್‌ ಲಸಿಕಾಕರಣ ಅಭಿಯಾನದ ಅಂಗವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಜನರಿಗೆ ಲಸಿಕೆ ನೀಡುತ್ತಿದ್ದರು. ಈ ವೇಳೆ ಲಸಿಕೆ ವಿಚಾರವಾಗಿ ಎಎನ್‌ ಎಂಐ ನರ್ಸ್‌ ನಂದಿನಿ ಚುಂಚಾ ಜೊತೆ ಅಂಬಿಕಾ ಜರತಾರಘರ ಎಂಬುವರು ಕೋವಿಡ್‌ ಲಸಿಕೆ ಪಡೆದ ನಂತರ ಮೊಬೈಲ್‌ಗೆ ಸಂದೇಶ ಬಾರದಿರುವ ಕುರಿತು ಜಗಳ ತೆಗೆದಿದ್ದಾರೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ಹೋದಾಗ ಮಹಿಳೆ ನರ್ಸ್‌ಗೆ ಮೊಬೈಲ್‌ ಫೋನ್‌ನಿಂದ ಮುಖದ ಮೇಲೆ ಹಲ್ಲೆ ಮಾಡಿದಾಗ ತೀವ್ರ ಗಾಯವಾಗಿ ರಕ್ತಸ್ರಾವವಾಗಿದೆ.

ಸ್ಥಳಕ್ಕೆ ಕಸಬಾಪೇಟೆ ಠಾಣೆ ಇನ್ಸ್‌ಪೆಕ್ಟರ್‌ ರತನಕುಮಾರ ಜಿರಗ್ಯಾಳ ಹಾಗೂ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ, ಮಹಿಳೆಯನ್ನು ಠಾಣೆಗೆ ಕರೆದೊಯ್ದು ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next