Advertisement

ವಾಹನ ತಪಾಸಣೆ ವೇಳೆ ಹಲ್ಲೆ: ಎಎಸ್ಐ ಅಮಾನತುಗೊಳಿಸಿ ಎಸ್ಪಿ ಆದೇಶ

09:34 AM Sep 18, 2019 | keerthan |

ಚಿಕ್ಕಬಳ್ಳಾಪುರ: ವಾಹನ ತಪಾಸಣೆ ವೇಳೆ ಜಿ.ಪಂ ಮಾಜಿ ಅಧ್ಯಕ್ಷರೊಬ್ಬರ ಮೇಲೆ ಹಲ್ಲೆ ಮಾಡಿದ್ದ ಆರೋಪದ ಹಿನ್ನಲೆಯಲ್ಲಿ ಎಎಸ್ಐರನ್ನು ಸೇವೆಯಿಂದ ಅಮಾನತುಗೊಳಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಡಾಧಿಕಾರಿ ಕೆ.ಸಂತೋಷ ಬಾಬು ಮಂಗಳವಾರ ಆದೇಶಿಸಿದ್ದಾರೆ.

Advertisement

ಅಮಾನತುಗೊಂಡ ಪೊಲೀಸ್ ಅಧಿಕಾರಿಯನ್ನು ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಎಸ್ಐ ನರಸಿಂಹಪ್ಪ ಎಂದು ಗುರುತಿಸಲಾಗಿದೆ.

ಘಟನೆ ಹಿನ್ನಲೆ
ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೆಂಗಳೂರು ರಸ್ತೆಯ ಚಿನ್ನಸಂದ್ರದ ಬಳಿ ವಾಹನಗಳ ತಪಾಸಾಣೆ ನಡೆಸುವ ವೇಳೆ ಸೀಟ್ ಬೆಲ್ಟ್ ಬಳಕೆ ಮಾಡಿಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಚಿನ್ನಪ್ಪರನ್ನು ಎಎಸ್ಐ ನರಸಿಂಹಪ್ಪ ಪ್ರಶ್ನೆಸಿ ಅವಾಶ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಎಎಸ್ಐ ನರಸಿಂಹಪ್ಪ ಅವರು, ಚಿನ್ನಪ್ಪ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಹಾಳೆಯಿಂದ ಆಕ್ರೋಶಗೊಂಡಿದ್ದ ಚಿನ್ನಪ್ಪ ಬೆಂಬಗಲಿಗರು ಹಾಗೂ ಸಾರ್ವಜನಿಕರು ಸೋಮವಾರ ರಸ್ತೆ ತಡೆ ನಡೆಸಿ ದೌರ್ಜನ್ಯ ನಡೆಸಿದ ಎಎಸ್ಐ ನರಸಿಂಹಪ್ಪರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದರು. ಎಎಸ್ಐ ಅಮಾನತುಗೊಳಿಸಿರುವುದನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಸ‌ಂತೋಷ ಬಾಬು ‘ಉದಯವಾಣಿ’ಗೆ ಖಚಿತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next