Advertisement

ಮಾಂಸ ವ್ಯಾಪಾರಿಗೆ ತಲವಾರು ಹಲ್ಲೆ: ಕೌಟುಂಬಿಕ ಕಲಹದ ಹಿನ್ನಲೆ ಕೃತ್ಯ ನಡೆಸಿದ್ದ ಮೂವರು ವಶಕ್ಕೆ

12:12 PM Jun 19, 2020 | keerthan |

ಉಳ್ಳಾಲ: ಇಲ್ಲಿನ ತೊಕ್ಕೊಟ್ಟು ಒಳಪೇಟೆಯಲ್ಲಿ ಗುರುವಾರ ತಡರಾತ್ರಿ ಮಾಂಸ ವ್ಯಾಪಾರಿ ಮೇಲೆ ನಡೆದ ತಲವಾರು ದಾಳಿಗೆ ಸಂಬಂಧಿಸಿದಂತೆ ಮೂವರು ಶಂಕಿತರನ್ಬು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೌಟುಂಬಿಕ ಕಲಹವೇ ಈ ತಲವಾರು ದಾಳಿಗೆ ಕಾರಣ ಎಂದು ತಿಳಿದು ಬಂದಿದೆ.

Advertisement

ಉಳ್ಳಾಲ ಭಾಗದಲ್ಲಿ ಹಲವು ಕಡೆ (ಮಾಂಸ) ಬೀಫ್ ಅಂಗಡಿ ಹೊಂದಿರುವ ಹಳೆಕೋಟೆ ನಿವಾಸಿ ನಝೀರ್ (47) ಕೊಲೆಯತ್ನಕ್ಕೆ ಒಳಗಾದವರು.

ಮನೆಯಿಂದ ರಾತ್ರಿ ವೇಳೆ ತೊಕ್ಕೊಟ್ಟು ಒಳಪೇಟೆಗೆ ಬಂದಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಆಗಂತುಕರು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ನಝೀರ್ ನನ್ನು ದೇರಳಕಟ್ಟೆಯ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು.

ನಝೀರ್ ಉಳ್ಳಾಲ, ಮುಕ್ಕಚ್ಚೇರಿ ಸೇರಿದಂತೆ ವಿವಿದೆಡೆ ಬೀಫ್ ಅಂಗಡಿಯನ್ನು ಹೊಂದಿದ್ದು, ಟಿ.ಸಿ‌ ರೋಡ್ ನಲ್ಲಿರುವ ಮರದ ಮಿಲ್ ಗೆ ಸಂಬಂಧಿಸಿ ಕುಟುಂಬದ ಒಳಗೇ ವೈಮನಸ್ಸಿತ್ತು. ನಾಲ್ಕು ದಿನಗಳ ಹಿಂದಷ್ಟೇ ಗಲಾಟೆ ನಡೆದು ಪ್ರಕರಣ ಠಾಣೆ ಮೆಟ್ಟಿಲೇರಿ, ಬಳಿಕ ರಾಜಿಯಲ್ಲಿ ಇತ್ಯರ್ಥಗೊಂಡಿತ್ತು. ಪ್ರಕರಣ ಸಂಬಂಧ ಕುಟುಂಬಕ್ಕೆ ಸಂಬಂಧಿಸಿದ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next