Advertisement

Udupi: ಜಾಗಕ್ಕೆ ಅಕ್ರಮ ಪ್ರವೇಶಿಸಿ ಹಲ್ಲೆ: ಆರೋಪಿಗೆ ಶಿಕ್ಷೆ

08:38 PM Aug 09, 2023 | Team Udayavani |

ಉಡುಪಿ: ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ತೀವ್ರವಾಗಿ ಹಲ್ಲೆ ಮಾಡಿದ ಆರೋಪಿಗೆ ಬ್ರಹ್ಮಾವರ ಸಂಚಾರಿ ಪೀಠದ ನ್ಯಾಯಾಧೀಶ ಶ್ಯಾಮ್‌ ಪ್ರಕಾಶ್‌ ಅವರು 3 ವರ್ಷದ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

Advertisement

ಹಾರಾಡಿ ಗ್ರಾಮದ ಕುಕ್ಕುಡೆ ಕೀರ್ತಿ ನಗರ್‌ ಎಂಬಲ್ಲಿ ವಾಸವಾಗಿರುವ ಬಸವ ಅವರ ಮಗನಾದ ಸುಕೇಶ್‌ (32) ಅದೇ ಗ್ರಾಮದ ಬಸಪ್ಪ ಮತ್ತು ಅವರ ಮಗಳಾದ ಲಲಿತಾ ಅವರ ಮನೆಯ ಸಮೀಪ ಬಸಳೆ ಬಳ್ಳಿ ನೆಟ್ಟಿದ್ದ ಜಾಕ್ಕೆ ಸೌದೆಯನ್ನು ತಂದು ಎಸೆಯುತ್ತಿದ್ದಾಗ ಪ್ರಶ್ನಿಸಿದ್ದಕ್ಕೆ ಆತ ಮರದ ರೀಪಿನ ತುಂಡಿನಿಂದ ಲಲಿತಾ ಅವರಿಗೆ ಹಲ್ಲೆ ಮಾಡಿದ್ದು, ಇದನ್ನು ತಡೆಯಲು ಬಂದ ಬಸಪ್ಪ ಅವರನ್ನೂ ದೂಡಿ ಹಾಕಿ ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಈ ಹಿಂದೆಯೂ ಇದೇ ರೀತಿ ಜಗಳವಾಡಿಕೊಂಡಿದ್ದಾನೆ ಎಂದು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಬ್ರಹ್ಮಾವರ ಠಾಣೆಯ ಪಿ.ಎಸ್‌.ಐ. ಗುರುನಾಥ್‌ ಬಿ. ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ರಾಜ್ಯ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದರು.c

Advertisement

Udayavani is now on Telegram. Click here to join our channel and stay updated with the latest news.

Next