ಹೊಸದಿಲ್ಲಿ: ಕಳೆದ ವರ್ಷ ದೆಹಲಿಯಲ್ಲಿ ಬಾಕಿ ಪಾವತಿಗಾಗಿ ಭೇಟಿಯಾದಾಗ ಬಿಹಾರ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಜಾಹೀರಾತು ಸಂಸ್ಥೆಯ ನಿರ್ದೇಶಕಿಯೊಬ್ಬರು ಆರೋಪಿಸಿದ್ದಾರೆ.
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮಹಿಳೆ ನೀಡಿದ ದೂರಿನ ಮೇರೆಗೆ, ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯಾಧ್ಯಕ್ಷ ರಾಕೇಶ್ ತಿವಾರಿ ವಿರುದ್ಧ ಅತ್ಯಾಚಾರ ಮತ್ತು ಹಲ್ಲೆಗೆ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ನಿನ್ನೆ ಎಫ್ಐಆರ್ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಕಳೆದ ವರ್ಷ ಜುಲೈನಲ್ಲಿ ಈ ಘಟನೆ ನಡೆದಿತ್ತು. ಭಾನುವಾರ ಮಹಿಳೆ ದೂರು ನೀಡಿದ್ದು, ಮರುದಿನ ಎಫ್ಐಆರ್ ದಾಖಲಾಗಿದೆ.
ಗುರ್ಗಾಂವ್ನಲ್ಲಿ ವಾಸಿಸುವ ಮಹಿಳೆ ತನ್ನ ದೂರಿನಲ್ಲಿ ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಕಳೆದ ವರ್ಷ ಮಾರ್ಚ್ನಲ್ಲಿ ಆಯೋಜಿಸಿದ್ದ ಟೂರ್ನಮೆಂಟ್ ಗೆ ಜಾಹೀರಾತು ಕೆಲಸಕ್ಕಾಗಿ ತನ್ನ ಸಂಸ್ಥೆಯನ್ನು ಕೇಳಿಕೊಂಡಿದ್ದರು. ಆದರೆ ಕೆಲಸ ಮುಗಿದರೂ ಸಂಘದವರು ಅವರಿಗೆ ಹಣ ನೀಡಿಲ್ಲ.
ಹೀಗಾಗಿ ಕಳೆದ ವರ್ಷ ಜುಲೈ 12ರಂದು ಮಹಿಳೆ ರಾಕೇಶ್ ತಿವಾರಿಯನ್ನು ಭೇಟಿ ಮಾಡಿದ್ದರು. ಈ ವಿಚಾರವನ್ನು ಚರ್ಚಿಸಲು ರಾಕೇಶ್ ತನ್ನನ್ನು ಪಂಚತಾರಾ ಹೋಟೆಲ್ಗೆ ಕರೆದೊಯ್ದು ಅಲ್ಲಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.