ವಿಜಯಪುರ: ಮೂರುವರೆ ವರ್ಷದ ಹಿಂದೆ ಆದರ್ಶ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ್ದ ಹತ್ಯೆ ಪ್ರಕರಣದಲ್ಲಿ ಇಬ್ಬರಿಗೆ ಜೀವಾವಾಧಿ ಶಿಕ್ಷೆ ವಿಧಿಸಿ ಒಂದನೇ ಅಧಿಕ ಜಿಲ್ಲಾ ನ್ಯಾಯಾಲಯ ಅದೇಶ ಹೊರಡಿಸಿದೆ.
2017 ಫೆಬ್ರವರಿ 17 ರಂದು ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ರಾಜ್ಯದ ಚಿಂದವಾರ ಜಿಲ್ಲೆಯ ವಿನೋದ ಸುಖರಾಮ್ ದಾಮಲೆ ಹಾಗೂ ಶ್ಯಾಮ ಮಹಾವೀರ ಕಟೌತೆ ಎಂಬವರು ತಮ್ಮೊಂದಿಗೆ ವಾಸವಿದ್ದ ಇನ್ನೋರ್ವ ಕಾರ್ಮಿಕ ರಾಜೇಶ ರಾಮಸ್ವರೂಪ ರಾವ್ತೇಲ್ ಎಂಬವನ್ನು ಹತ್ಯೆ ಮಾಡಿದ್ದರು.
ಅಡುಗೆ ಸರಿಯಾಗಿ ಮಾಡುತ್ತಿಲ್ಲ ಎಂದು ರಾಜೇಶ ಜೊತೆ ತಕರಾರು ತೆಗೆದ ವಿನೋದ ಹಾಗೂ ಶ್ಮಾಮ್ ಇವರು ಕಟ್ಟಿಗೆಗಯಿಂದ ಹೊಡೆದು ರಾಜೇಶನನ್ನು ಹತ್ಯೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಆದರ್ಶನಗರ ಠಾಣೆ ಪೊಲೀಸರು, ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ ಜೋಶಿ ಇವರು ಹಂಕರತಾದ ವಿನೋದ ಹಾಗೂ ಶ್ಯಾಮ್ ಇವರಿಗೆ ಜೀವಾವಾಧಿ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಪ್ರಧಾನ ಅಭಿಯೋಜಕರಾದ ಕೆ.ಕೆ.ಕುಲಕರ್ಣಿ ಹಾಗೂ 1ನೇ ಅಧಿಕ ಸರ್ಕಾರಿ ಅಭಿಯೋಜಕಿ ವನಿತಾ ಇಟಗಿ ಸಮರ್ಥ ವಾದ ಮಂಡಿಸಿದ್ದರು.