Advertisement

Assam: ಹೆಚ್ಚುತ್ತಿರುವ ಜನಸಂಖ್ಯೆಯೇ ಅಸ್ಸಾಂನ ಪ್ರಧಾನ ಕಾಯಿಲೆ: ಸಿಎಂ ಹಿಮಾಂತ

12:30 AM Feb 14, 2024 | Pranav MS |

ಗುವಾಹಟಿ: ರಾಜ್ಯದಲ್ಲಿ ಹೆಚ್ಚಾಗಿರುವ ಜನಸಂಖ್ಯೆಯೇ ಅಸ್ಸಾಂನ ಪ್ರಧಾನ ಕಾಯಿಲೆ ಎಂದು ಮುಖ್ಯಮಂತ್ರಿ ಹಿಮಾಂತ ಶರ್ಮಾ ಬಿಸ್ವಾ ಹೇಳಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ವಿವಿಧ ಕ್ಷೇತ್ರಗಳಲ್ಲಿನ ಸಾಧನೆ ಮೇಲೆ ಕೂಡಾ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಇದೇ ವೇಳೆ, ಅಸ್ಸಾಂ ಸರ್ಕಾರ ಈಗಾಗಲೇ ಬಹುಪತ್ನಿತ್ವ ವಿರೋಧಿ ಮಸೂದೆಯ ಕರಡು ಸಿದ್ಧಪಡಿಸಿದೆ. ಅದು ಉತ್ತರಾಖಂಡ ವಿಧಾಸಭೆ ಅಂಗೀಕರಿಸಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ರೀತಿಯಲ್ಲೇ ಇದೆ ಎಂದು ಹೇಳಿದ್ದಾರೆ. ಫೆ. 8ರಂದು ನಡೆಯಲಿರುವ ಬಜೆಟ್‌ ಅಧಿವೇಶನದಲ್ಲಿ ಅಸ್ಸಾಂ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ. ಉತ್ತರಾಖಂಡ ಅಗೀಂಕರಿಸಿರುವ ಯುಸಿಸಿಯಂತೆಯೇ ನಾವು ಬಹುಪತ್ನಿತ್ವ ವಿರೋಧಿ ಮಸೂದೆ ತರಲು ಪ್ರಯತ್ನಿಸುತ್ತಿದ್ದೇವೆ. ತಜ್ಞರ ಸಮಿತಿ ಈ ನೆಲೆಯಲ್ಲಿ ಕೆಲಸ ಮಾಡುತ್ತಿದೆ. ಆದ್ದರಿಂದ ನಾವು ಹೆಚ್ಚು ಶಕ್ತಿಶಾಲಿ ಕಾನೂನು ತರಲು ಸಾಧ್ಯವಾಗಲಿದೆ. ನಮ್ಮ ಸರ್ಕಾರ ಬಹುಪತ್ನಿತ್ವವನ್ನು ಕ್ರಿಮಿನಲ್‌ ಅಪರಾಧವಾಗಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next